ಹೊಸನಗರ ; ತಾಲ್ಲೂಕು ಮಲೆನಾಡು ಅಡಿಕೆ ಮತ್ತು ತೋಟಗಾರಿಕಾ ಬೆಳೆಗಳ ಖರೀದಿ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ಪದಾಧಿಕಾರಿಗಳ ಆಯ್ಕೆ

0 33


ಹೊಸನಗರ: ಪಟ್ಟಣದ ವೀರಶೈವ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಶುಕ್ರವಾರ ಹೊಸನಗರ ತಾಲ್ಲೂಕು ಮಲೆನಾಡು ಅಡಿಕೆ ಮತ್ತು ತೋಟಗಾರಿಕಾ ಬೆಳೆಗಳ ಖರೀದಿ ಪರಿಷ್ಕರಣೆ ಮತ್ತು ಮಾರಾಟ ಸಹಕಾರಿ ಸಂಘದ ಸಹಕಾರ ಇಲಾಖೆಯ ಇಲಾಖಾಧಿಕಾರಿಗಳಾದ ನವೀನ್‌ರವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.


ಹೊಸನಗರ ತಾಲ್ಲೂಕು ಮಲೆನಾಡು ಅಡಿಕೆ ಮತ್ತು ತೋಟಗಾರಿಕಾ ಬೆಳೆಗಳ ಖರೀದಿ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ವೀರಶೈವ ಪತ್ತಿನ ಸಹಕಾರಿ ಸಂಸ್ಥೆಯಲ್ಲಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಾಗೂ ಸಾಕಷ್ಟು ಅನುಭವ ಹೊಂದಿರುವ ಜೊತೆಗೆ ವಕೀಲ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಂಜುಂಡಪ್ಪ ಹೆಚ್.ಪಿ ಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.


ಉಪಾಧ್ಯಕ್ಷರಾಗಿ ಟಿ.ರಾಜಪ್ಪ ಗೌಡರವರು ಆಯ್ಕೆಯಾಗಿದ್ದು ಉಳಿದಂತೆ ನಿರ್ದೇಶಕರಾಗಿ ನಾಗರಾಜ್ ಹರತಾಳು, ಸಿದ್ಧವೀರಪ್ಪ, ಶೇಖರಪ್ಪ, ಈಶ್ವರಪ್ಪ ಗೌಡ, ಶಿವಾನಂದ ಹೆಚ್, ಜ್ಯೋತಿ ಪ್ರಶಾಂತ್, ಮಮತಾ ಚಂದ್ರಶೇಖರ್, ಡಿ.ಈ ಮಧುಸೂಧನ್, ಬಿ.ಹೆಚ್. ಬಸಪ್ಪನವರು ಅವಿರೋಧವಾಗಿ ಆಯ್ಕೆಯಾದರು.


ಅಡಿಕೆ ಬೆಳೆಗಾರರ ಮತ್ತು ರೈತರ ಪರವಾಗಿ ನಮ್ಮ ಸಂಸ್ಥೆ ನಿಲ್ಲುತ್ತದೆ:
ತಾಲ್ಲೂಕಿನಲ್ಲಿ ಮಲೆನಾಡು ಭಾಗಗಳಲ್ಲಿ ಎಲೆಚುಕ್ಕಿ ರೋಗದಿಂದ ಅಡಿಕೆ ಮರಗಳು ಸತ್ತು ಹೋಗುತ್ತಿದೆ ಇದರ ಜೊತೆ ಅಡಿಕೆ ಮರಗಳಲ್ಲಿ ಅಡಿಕೆ ಕಾಯಿಗಳು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಅಡಿಕೆ ಬೆಳೆಗಾರರು ಈ ವರ್ಷ ತುಂಬಾ ನಷ್ಟ ಮತ್ತು ಕಷ್ಟದಲ್ಲಿದ್ದಾರೆ. ಇವರಿಗೆ ಸೂಕ್ತ ನ್ಯಾಯ ಕೊಡಿಸುವ ಉದ್ದೇಶದಿಂದ ಈ ಸಂಸ್ಥೆಯನ್ನು ತೆರೆಯಲಾಗಿದೆ ಹೊಸನಗರ ತಾಲ್ಲೂಕಿನ ಎಲ್ಲ ಅಡಿಕೆ ಬೆಳೆಗಾರರು ಮತ್ತು ತೋಟಗಾರಿಕಾ ಬೆಳೆಗಾರರು ನಮ್ಮ ಸಂಸ್ಥೆಯ ಉಪಯೋಗವನ್ನು ಪಡೆದುಕೊಳ್ಳಬೇಕೆಂದರು.

Leave A Reply

Your email address will not be published.

error: Content is protected !!