ರಿಪ್ಪನ್‌ಪೇಟೆ: ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಪ್ರತಿವರ್ಷ ಸೆಪ್ಟೆಂಬರ್ ಸೆಪ್ಟಂಬರ್ 25 ರೊಳಗೆ ನಡೆಸುವುದು ಹಾಗೂ ಸಭೆ ನಡಾವಳಿಯನ್ನು ದಾಖಲಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ನಿವೃತ್ತ ಸಹಕಾರ ಅಭಿವೃದ್ಧಿ ಅಧಿಕಾರಿ ಸಿ.ವಿಶ್ವನಾಥಯ್ಯ ತಿಳಿಸಿದರು.
ಪಟ್ಟಣದ ಡಿಸಿಸಿಬ್ಯಾಂಕ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಹಾಗೂ ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾದ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು.
ಸಹಕಾರ ಸಂಘದಲ್ಲಿ ಸಿಬ್ಬಂದಿಗಳನ್ನು ನೇಮಕಾತಿ ಮಾಡುವ ಸಂಘದ ದುಡಿಮೆ ಮತ್ತು ವ್ಯವಹಾರದ ಆದಾಯವನ್ನು ನೋಡಿಕೊಂಡು ಶೇ. 2 ರಷ್ಟು ಆದಾಯದಲ್ಲಿ ನೇಮಕಾತಿ ಮಾಡಿಕೊಳ್ಳುಲು ಅವಕಾಶವಿದೆ ಎಂದು ಸಹಕಾರ ಕಾಯ್ದೆ ನಿಯಮಾವಳಿಯನ್ನು ಕಾಲಕಾಲಕ್ಕೆ ಬದಲಾವಣೆ ಮಾಡಿಕೊಳ್ಳಲು ಸಂಘಕ್ಕೆ ಅಧಿಕಾರವಿದೆ ಎಂದರು.
ತರಬೇತಿ ಕಾರ್ಯಗಾರದ ಉದ್ಘಾಟನೆಯನ್ನು ಜಿಲ್ಲಾ ಸಹಕಾರ ಯೂನಿಯನ್ ಮಾಜಿ ಅಧ್ಯಕ್ಷ ವಾಟಗೋಡು ಸುರೇಶ್ ನೆರವೇರಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೆ.ಎಲ್.ಜಗದೀಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ತುಂಗಾ ಅಡಿಕೆ ಸೌಹಾರ್ದ ಸಹಕಾರಿ ಆಧ್ಯಕ್ಷ ಡಿ.ಜಿ.ವಿನಯಕುಮಾರ್, ಧಾರವಾಡ ಚೈತನ್ಯ ವಿಕಾಸ ಯೋಗ ಮತ್ತು ನಿಸರ್ಗ ಚಿಕಿತ್ಸಾದ ನಿರ್ದೇಶಕಿ ಡಾ.ಹೆಚ್.ಯು.ಸುಕುಮಾರಿ, ಆಹಾರ ಮತ್ತು ಔಷಧಿ ತಜ್ಞ ಡಾ.ಶ್ರೀಶೈಲ ಬಾದಾಮಿ ಇತರರು ಹಾಜರಿದ್ದರು.