ಶಿವಮೊಗ್ಗ : ಕುಮಾರಸ್ವಾಮಿ ಈಗ ರಾಜ್ಯಾದ್ಯಂತ ಸುತ್ತಾಡಿಕೊಂಡು ಬಂದಿದ್ದಾರೆ. ಇದರಿಂದ ಕುಮಾರಸ್ವಾಮಿಯವರ ಸ್ಥಾನ ಏನು ಎನ್ನುವುದು ಗೊತ್ತಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಹರಿಹಾಯ್ದರು.
ಶಿವಮೊಗ್ಗದ ಸರ್ಕ್ಯೂಟ್ ಹೌಸ್‌ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿ ಜಾತಿ ಧರ್ಮಗಳ ನಡುವೆ ತಂದಿಡುವ ಕೆಲಸ ಮಾಡ್ತಾ ಇದಾರೆ. ಇದರಿಂದ ಓಟ್ ಬರಬಹುದೇನೋ, ನಾನು ನಡುವೆ ಎಲ್ಲಾದರೂ ತೂರಬಹುದೇನೋ ಅಂತ ಪ್ಲಾನ್ ಮಾಡ್ತಾ ಇದ್ದಾರೆ.
ಇದೇ ರೀತಿ ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ನವರು ಮಾಡಿದ್ರು. ಲಿಂಗಾಯತ- ವೀರಶೈವರ ನಡುವೆ ತಂದಿಡುವ ಕೆಲಸ ಮಾಡಿದ್ರು. ಎಲ್ಲರನ್ನೂ ಉಯಿಲು ಎಬ್ಬಿಸುವ ಕೆಲಸ ಮಾಡಿದ್ರು. ಇವರೆಲ್ಲ ಕೈಲಾಗದಿದ್ದವರು, ಸರಿಯಾದ ಆಡಳಿತ ಮಾಡದವರು ಆಡಳಿತ ಇದ್ದಾಗ ಸರಿಯಾಗಿ ಕೆಲಸ ಮಾಡಿಲ್ಲ.
ಸಂಘಟನೆಯನ್ನು ಕಟ್ಟಲಿಕ್ಕೂ ಅಗ್ಲಿಲ್ಲ. ಇವರ ಕೈಯಲ್ಲಿ
ಹತಾಶರಾಗಿ ಈ ರೀತಿ ಮಾತಾಡ್ತಾ ಇದ್ದಾರೆ.
ಹಿಂದುತ್ವ ವಿರೋಧದ ಹಿನ್ನೆಲೆ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ಆರಗ ಜ್ಞಾನೇಂದ್ರ, ಇದರಲ್ಲಿ ಅರ್ಥವೇ ಇಲ್ಲದ ಮಾತುಗಳನ್ನಾಡುತ್ತಿದ್ದಾರೆ. ಅಲ್ಪಸಂಖ್ಯಾತರ ಜೊಲ್ಲು ಕೈಯೊಡ್ಡುವ ಕೆಲಸ ಮಾಡ್ತಾ ಇದಾರೆ. ಈ ರೀತಿ ಮಾತನಾಡಿದ್ರೆ ಅಲ್ಪಸಂಖ್ಯಾತರ ಓಟ್ ಸಿಗುತ್ತೆ ಅಂದ್ಕೊಂಡಿದ್ದಾರೆ. ಇದರಿಂದ ಸಿದ್ದರಾಮಯ್ಯ ಕಳೆದುಕೊಳ್ಳುವುದೇ ಜಾಸ್ತಿ ಟಿಪ್ಪು ಜಯಂತಿ ಮಾಡಿ ಚುನಾವಣೆಯಲ್ಲಿ ಏನೇನೋ ಮಾಡೋಕೆ ಹೋಗಿದ್ರು ಎಂದರು.
ಬಿಜೆಪಿಯವರು ಇಡಿ ದುರುಪಯೋಗ ಎಂಬ ಡಿಕೆಶಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದೇಶದ ಅನೇಕ ಜನರ ಮೇಲೆ ದಾಳಿ ನಡೆಯುತ್ತಿದೆ. ಡಿಕೆಶಿ ಸರಿ ಇದ್ರೆ ಸರಿಯಾದ ದಾಖಲೆ ಕೊಟ್ಟಿದ್ರೆ ಯಾಕ್ ಭಯ ಪಡಬೇಕು. ಇವರು ಅಧಿಕಾರದಲ್ಲಿ ಇದ್ದಾಗ ರಾಜಭವನವನ್ನು ದುರುಪಯೋಗ ಪಡಿಸಿಕೊಂಡಿದ್ರು. ಎಸಿಬಿಯನ್ನು ದುರುಪಯೋಗ ಪಡೆಸಿಕೊಂಡ್ರು. ಲೋಕಾಯುಕ್ತವನ್ನು ಕುತ್ತಿಗೆ ಹಿಸುಕುವ ಕೆಲಸ ಮಾಡಿದ್ರು. ಸೂಕ್ತ ಸಮಜಾಯಸಿ ನೀಡಲಿ, ಅದು ಬಿಟ್ಟು ಯಾಕೆ ಭಯಪಡಬೇಕು ಇವರು ಉತ್ತರ ಕೊಡದಿದ್ದರೆ ಕೇಸ್ ಮುಗಿಯುತ್ತಾ ? ಎಂದು ಪ್ರಶ್ನಿಸಿದರು.
ರಮೇಶ್ ಜಾರಕಿಹೊಳಿ ಸಿಡಿ ಕೇಸ್ ವಿಚಾರವಾಗಿ ಮಾತನಾಡಿ, ಕೇಂದ್ರ ಗೃಹ ಸಚಿವರಿಗೆ ದೂರು ಹಿನ್ನಲೆ ನಾನು ಗೃಹ ಇಲಾಖೆಯಿಂದ ನಿರೀಕ್ಷೆ ಮಾಡ್ತಾ ಇದೀವಿ ಏನಾದ್ರು ಬಂದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.