ವಾಹನಗಳ ಬಹಿರಂಗ ಹರಾಜು

0 11


ಶಿವಮೊಗ್ಗ: ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಸಾಗರ ಕಚೇರಿಯ ಮೋಟಾರು ವಾಹನ ನಿರೀಕ್ಷಕರು ತಪಾಸಣೆ ಮಾಡಿ ಸರ್ಕಾರದ ತೆರಿಗೆ ಹಾಗೂ ಇನ್ನಿತರ ಪ್ರಕರಣ ಸಂಬಂಧ ವಾಹನವನ್ನು ಮುಟ್ಟುಗೋಲು ಹಾಕಿರುವ ವಾಹನ ಮಾಲೀಕರು ಕಚೇರಿಗೆ ಆಗಮಿಸಿ 07 ದಿನದೊಳಗೆ ಷರತ್ತುಗಳಿಗೆ ಒಳಪಟ್ಟಂತೆ ವಾಹನವನ್ನು ಬಿಡಿಸಿಕೊಳ್ಳತಕ್ಕದ್ದು.


ಜಪ್ತಿಯಾದ ವಾಹನಗಳಾದ ಆನವಟ್ಟಿ ಪೊಲೀಸ್ ಠಾಣೆಯಲ್ಲಿನ ವಾಹನ ಸಂಖ್ಯೆ/ಛಾಸಿಸ್ ಸಂಖ್ಯೆ ಎಂಎ1ಝಡ್‍ಪಿಟಿಬಿಜೆ2465213, ಹೊಸನಗರ ಪೊಲೀಸ್ ಠಾಣೆಯಲ್ಲಿನ ವಾಹನ ಸಂಖ್ಯೆ ಎಂಇ4ಜೆಸಿಎಸ್89ಬಿಇಟಿ088968 ಹಾಗೂ ರಿಪ್ಪನ್‍ಪೇಟೆ ಪೊಲೀಸ್ ಠಾಣೆಯಲ್ಲಿನ ವಾಹನ ಸಂಖ್ಯೆ ಎಂಇ4ಜೆಸಿ589ಎಎಫ್‍ಟಿ451264 ಆಗಿರುತ್ತದೆ.

ವಾಹನ ಮಾಲೀಕರು 07 ದಿನದೊಳಗಾಗಿ ಹಾಜರಾಗದೇ ಇದ್ದಲ್ಲಿ ವಾಹನಗಳ ಹರಾಜು ಕ್ರಮ ಕೈಗೊಳ್ಳಲಾಗುವುದು.
ವಾಹನ ಸಂಖ್ಯೆ ಎಂಹೆಚ್04/ಜಿಪಿ-3737 ವಾಹನವು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಸಾಗರ ಕಚೇರಿ ಆವರಣದಲ್ಲಿದ್ದು ಮಜಲು ವಾಹನದ ತೆರಿಗೆ ಪಾವತಿಸಿಕೊಂಡು ವಾಹನ ಬಿಡುಗಡೆಗೊಳಿಸಿಕೊಳ್ಳಬಹುದು ತಪ್ಪಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!