ಕುಟುಂಬದಿಂದ ರಾಜ್ಯ ಬಿಜೆಪಿ ಅಪಹರಣ ಆಗಲು ಬಿಡುವುದಿಲ್ಲ ; ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ

0 486

ಸಾಗರ : ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರ ಭಕ್ತರ ಬಳಗ ಸಾಗರ ವಿಭಾಗದ ವತಿಯಿಂದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಪರವಾಗಿ ಕಾರ್ಯರ್ತರ ಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮಕ್ಕೆ ಸಾಗರ ಪಟ್ಟಣ ಹಾಗು ಸುತ್ತಮುತ್ತ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಕಾರ್ಯಕರ್ತರು ಆಗಮಿಸಿ ಕೆ.ಎಸ್.ಈಶ್ವರಪ್ಪಗೆ ಬೆಂಬಲ ಸೂಚಿಸಿದರು.

ಕಾರ್ಯಕ್ರಮದಲ್ಲಿ ಸಾಗರ ಮಾಜಿ ನಗರ ಸಭಾ ಸದಸ್ಯರುಗಳಾದ ಮಂಜುನಾಥ್ ಕೆ.ಎಲ್. ಕಸ್ತೂರಿ ಸಾಗರ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಗೌಡ್ರು, ಕೆಳದಿ ಗ್ರಾಮ ಪಂಚಾಯತಿ ಸದಸ್ಯರಾದ ಗೋಪಾಲ್, ವೀಣಾ ಸತೀಶ್, ರಜನೀಶ್ ಹಕ್ರೆ,ಸುರೇಶ್ ವಾಟ್ಗೋಡು, ಹೇಮ ರವಿ, ಚೇತನ್ ಗೌಡ ಹರತಾಳು, ಆನಂದ ಪುರ ನಾರಾಯಣ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರಪ್ಪ, ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಸಂಗಮ ಕಾರ್ಯಕ್ರಮಕ್ಕೆ ನನ್ನ ಗೆಲ್ಲಿಸೋದಕ್ಕೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ನಿಮಗೆ ಧನ್ಯವಾದಗಳು.

ಚುನಾವಣೆ ಎಂದರೆ ಜಾತಿ ಹಣ ತೋಳ್ಬಲದಿಂದ ನಡೆಯುತ್ತೆ ಎಂದು ತಿಳಿದಿದ್ದೆ ಆದರೆ ಇಂದು ನಿಮ್ಮನ್ನೆಲ್ಲಾ ನೋಡಿದರೆ ಜಾತಿ ಹಣ ಎಲ್ಲಾ ಪಕ್ಕಕ್ಕೆ ಇಟ್ಟು ಬಡವರು ಧರ್ಮದ ಪರವಾಗಿ ನಿಂತು ಧರ್ಮ ಗೆಲ್ಲಿಸಲು ಬಂದಿದ್ದೀರ ಎಂದು ತಿಳಿಯುತ್ತದೆ.

ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಹೆಣ್ಣನ್ನು ಭೋಗದ ವಸ್ತುವಾಗಿ ನೋಡುತ್ತಾರೆ ಹೆಣ್ಣು ಮಕ್ಕಳನ್ನು ಹೇರುವ ಯಂತ್ರದಂತೆ ಕಾಣುತ್ತಾರೆ ಆದರೆ ಭಾರತದಲ್ಲಿ ಮಾತ್ರ ಹೆಣ್ಣನ್ನ ತಾಯಿ ಎಂದು ಕರೆಯೋದು ಹೆಣ್ಣಿಗೆ ತಾಯಿ ಸ್ಥಾನ ಸಿಕ್ಕಿರುವುದು ಭಾರತದಲ್ಲಿ ಮಾತ್ರ ಅಂತ ತಾಯಂದಿರು ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ನನಗೆ ಆಶೀರ್ವಾದ ಮಾಡಲು ಬಂದಿರುವುದು ನನ್ನ ಭಾಗ್ಯ. ಸಾಗರ ಶಿವಮೊಗ್ಗ ಜಿಲ್ಲೆಗೆ ಒಳ್ಳೆಯದಾಗಲು ಮೋದಿಯವರನ್ನು ಪ್ರಧಾನಿ ಮಾಡಿದ ಸಂತೃಪ್ತಿಗಾಗಿ ಈಶ್ವರಪ್ಪನ ಗೆಲ್ಲಿಸಲು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿದ್ದೀರಿ.

ಚುನಾವಣೆಯನ್ನು ಅನೇಕರು ವೃತ್ತಿ ದಂಧೆಯಾಗಿ ಮಾಡಿಕೊಂಡಿದ್ದಾರೆ ರಾಜಕಾರಣಕ್ಕಾಗಿ ಅನೇಕ ಪಕ್ಷಗಳ ಮುಖವಾಡ ಹಾಕಿಕೊಳ್ಳುತ್ತಾರೆ. ಆದರೆ ಬಿಜೆಪಿ ಪಕ್ಷವನ್ನು ಕಾರ್ಯಕರ್ತರು ರಕ್ತವನ್ನ ಬೆವರಿನ ಹಾಗೆ ಸುರಿಸಿ ಪಕ್ಷ ಕಟ್ಟಿದ್ದರ ಫಲವಾಗಿ ಇಂದು ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಾರೆ. ನರೇಂದ್ರ ಮೋದಿಯವರನ್ನು ಎಲ್ಲಾ ರಾಷ್ಟ್ರಗಳು ಒಪ್ಪಿಕೊಂಡಿದ್ದಾರೆ ಅಂತಹ ಮೋದಿಯವರು ಬಿಜೆಪಿಯವರು ಎನ್ನುವುದು ನಮಗೆಲ್ಲಾ ಹೆಮ್ಮೆ ಎಂದರು.

ಇಂದು ಬಿಜೆಪಿಯಲ್ಲಿ ಮೋದಿಯವರ ಹೆಸರು ದುರುಪಯೋಗ ಮಾಡಿಕೊಂಡು ಕಾರ್ಯಕರ್ತರ ಬೆವರನ್ನ ಗಮನಿಸದೆ ಅಧಿಕಾರಕ್ಕಾಗಿ ಕೆಲವು ವ್ಯಕ್ತಿಗಳು ಕೆಲವು ಕುಟುಂಬಗಳು ಮಾಡುತ್ತಿರುವ ಷಡ್ಯಂತ್ರದಿಂದಾಗಿ ರಾಜ್ಯದಲ್ಲಿ ಪಕ್ಷ ಕಟ್ಟಿದ ಅನೇಕ ಹಿರಿಯರು ಯುವಕರು ನೋವು ಪಡುತ್ತಿದ್ದಾರೆ. ಕೇಂದ್ರದ ನಾಯಕರು ರಾಜ್ಯದಲ್ಲಿ ಕೆಲವರನ್ನ ನಂಬಿದ್ದಾರೆ ಅವರ ನಂಬಿಕೆಯನ್ನ ದುರುಪಯೋಗ ಮಾಡಿಕೊಂಡು ಒಬ್ಬ ಮಗನ ಸಂಸದ ಮತ್ತೊಬ್ಬ ಮಗನನ್ನು ಆರು ತಿಂಗಳು ಕಾದು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದೆಲ್ಲಾ ಕೇಂದ್ರದವರಿಗೆ ಯಾರು ಹೇಳಬೇಕು ಕಾರ್ಯಕರ್ತರ ನೋವನ್ನ ಯಾರು ಕೇಳಬೇಕು. ಈಗಿನ ಪರಿಸ್ಥಿತಿಯಲ್ಲಿ ಇಂಥವರ ಹಿಂದೆ ಹೋಗಿ ಅಧಿಕಾರ ಹೊಡಿಯುತ್ತಿದ್ದಾರೆ ಶ್ರಮ ಹಾಕಿದ ಕಾರ್ಯಕರ್ತರು ಹಿಂದೆ ಸರಿದಿದ್ದಾರೆ.

ಸಿ.ಟಿ.ರವಿ, ಪ್ರತಾಪ್ ಸಿಂಹ, ಸದಾನಂದ ಗೌಡರಂತ ಒಕ್ಕಲಿಗ ನಾಯಕರಿಗೆ ಡಿಕೆಟ್ ಕೊಡದೆ ಮೂಲೆ ಗುಂಪು ಮಾಡಿದ್ದಾರೆ. ಹಿಂದುತ್ವ ಬಗ್ಗೆ ಮಾತನಾಡಿದ ಅನಂತ್ ಕುಮಾರ್ ಹೆಗ್ಗಡೆ, ಬಸವನಗೌಡ ಪಾಟೀಲ್ ಯತ್ನಾಳ್ ರನ್ನೂ ಸಹ ಮೂಲೆ ಗುಂಪು ಮಾಡಿದ್ದಾರೆ ಹಿಂದುತ್ವ ಬಗ್ಗೆ ಮಾತನಾಡುವುದೇ ತಪ್ಪಾ? ಎಂದು ಪ್ರಶ್ನಿಸಿದರು‌.

ಚುನಾವಣೆಗೆ ನಿಂತ ಮೇಲೆ ಎಲ್ಲಾ ಜಾತಿಯ ಸಮಾಜದವರಿಂದ ನನಗೆ ಬೆಂಬಲ ಸಿಕ್ಕಿದೆ ಸ್ತ್ರೀ ಶಕ್ತಿ ಸಂಘಗಳಿಂದ ಬೆಂಬಲ ಸಿಕ್ಕಿದೆ ಇವರ ಋಣವನ್ನು ನಾನು ಹೇಗೆ ತೀರಿಸಲಿ ಗೊತ್ತಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡುವ ತೀರ್ಮಾನ ಮಾಡಿ ಬಂದದ್ದೇ ಮೊದಲು ಶ್ರೀಧರ ಸ್ವಾಮಿಗಳ ಆಶ್ರಮಕ್ಕೆ ನಂತರ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಮಾಡಿದೆ ತಾಯಿಯ ತಲೆ ಮೇಲಿಂದ ಹೂವಿನ ಪ್ರಸಾಧ ಸಿಕ್ಕಿತು ಒಂದು ಕಡೆ ದೇವರ ಆಶೀರ್ವಾದ ಇನ್ನೊಂದು ಕಡೆ ಶ್ರೀಸಾಮಾನ್ಯನ ಆಶೀರ್ವಾದ ಇವೆರಡೂ ನನಗೆ ಸಿಕ್ಕಿರುವಾಗ ಯಾವುದೇ ಕಾರಣಕ್ಕೂ ಕೆಲವು ವ್ಯಕ್ತಿಗಳಿಂದ ಕೆಲವು ಕುಟುಂಬಗಳಿಂದ ಕರ್ನಾಟಕ ರಾಜ್ಯದ ಭಾರತೀಯ ಜನತಾ ಪಾರ್ಟಿಯನ್ನು ಅಪಹರಿಸಲು ಬಿಡುವುದಿಲ್ಲ ಎಂದರು.

ರಾಜ್ಯದಲ್ಲಿ ಒಂದು ಕೋಟಿ ಸಾಮಾನ್ಯ ಜನರ ಸದಸ್ಯತ್ವ ಇದೆ ಈಗ ಸದಸ್ಯತ್ವ ಮಾಡಿದ ವ್ಯಕ್ತಿಗಳಿಗೆ ನಮ್ಮ ಮಾತು ಯಾರು ಕೇಳುತ್ತಿಲ್ಲ ಎಂಬ ನೋವಿದೆ. ಹೊಂದಾಣಿಕೆ ರಾಜಕಾರಣ ಬಿಜೆಪಿ ರಕ್ತದಲ್ಲಿ ಬಂದಿಲ್ಲ ಬಿಜೆಪಿ ಜನರ ಮನಸ್ಸನ್ನ ಗೆದ್ದು ಅಧಿಕಾರಕ್ಕೆ ಬಂದಿದೆ ನನ್ನ ಜೀವನದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಹೊಂದಾಣಿಕೆ ರಾಜಕಾರಣ ಮಾಡಲು ಯಡಿಯೂರಪ್ಪಗೆ ಪಕ್ಷ ಯಾಕೆ ಬೇಕು.

ಕಾಂಗ್ರೆಸ್ ನವರು ಎಲ್ಲಾ ಈಡಿಗರು ನಮ್ಮ ಜೊತೆ ಇದ್ದಾರೆ ಎನ್ನುತ್ತಾರೆ. ಯಡಿಯೂರಪ್ಪ ಮಗ ಎಲ್ಲಾ ಲಿಂಗಾಯತರು ನಮ್ಮ ಕಡೆ ಇದ್ದಾರೆ ಎನ್ನುತ್ತಾರೆ ಆದರೆ ಈಡಿಗರು ಲಿಂಗಾಯತರು ಎಲ್ಲಾ ಸೇರಿ ಪೂರ್ತಿ ಹಿಂದೂ ಸಮಾಜ ನನ್ನ ಕಡೆ ಇದೆ. ನಾನು ರಾಷ್ಟ್ರೀಯವಾದಿ ಎಂದು ಜನ ನನಗೆ ಬೆಂಬಲ ಕೊಡುತ್ತಿದ್ದಾರೆ ಆದರೆ ಜಾತಿ ಹೆಸರು ಹೇಳಿಕೊಂಡು ಮೋಸ ಮಾಡಿದವರಿಗೆ ಈಶ್ವರಪ್ಪನ ಗೆಲ್ಲಿಸುವ ಮೂಲಕ ಉತ್ತರ ಕೊಡುತ್ತೇವೆ ಎಂದು ಭದ್ರಾವತಿಯ ಒಕ್ಕಲಿಗ ಸಮಾಜದವರು ಹೇಳಿದ್ದಾರೆ. ಬೈಂದೂರಿನಲ್ಲಿಯೂ ಸಹ ಹಿಂದೂ ಸಂಘಟನೆಯ ಅನೇಕ ಪ್ರಮುಖರು ನಾವೆಲ್ಲರೂ ನಿಮಗೆ ಬೆಂಬಲವಾಗಿದ್ದೇವೆ ಚುನಾವಣೆಯಲ್ಲಿ ನೀವು ನೂರಕ್ಕೆ ನೂರು ಗೆಲ್ಲುತ್ತೀರ ಎಂದು ಆಶೀರ್ವಾದ ಮಾಡಿದ್ದಾರೆ.

ವಿಧಿ ಇಲ್ಲದೆ ನಮ್ಮ ಪಕ್ಷದ ಪರಿಸ್ಥಿತಿ ಬೀದಿಯಲ್ಲಿ ನಿಂತು ಹೇಳಬೇಕಿದೆ‌. ಪಕ್ಷದಲ್ಲಿ ಪರಿವರ್ತನೆ ತರಬೇಕಿದೆ ಚುನಾವಣೆಯಲ್ಲಿ ಗೆದ್ದ ನಂತರ ಕೇಂದ್ರದ ನಾಯಕರು ಕರ್ನಾಟಕದ ಕಡೆ ನೋಡುತ್ತಾರೆ ಪಕ್ಷದಲ್ಲಿ ಪರಿವರ್ತನೆ ತರಲೆಂದು ಜನ ತೀರ್ಮಾನ ಮಾಡಿದ್ದಾರೆ ಎಂದು ಕರ್ನಾಟಕ ಭಾರತೀಯ ಜನತಾ ಪಾರ್ಟಿ ಪರಿವರ್ತನೆ ಮಾಡಿ ಪಕ್ಷ ಶುದ್ಧಿಕರಣ ಮಾಡುತ್ತಾರೆ ಅದಕ್ಕಾಗಿ ಈ ಚುನಾವಣೆ ಬಂದಿದೆ ಎಂದರು.

ಒಬ್ಬ ಪಕ್ಷೇತರನಾಗಿ ನಿಂತಿರುವುದು ಚರ್ಚೆಯಾಗುತ್ತಿಲ್ಲ ಬದಲಾಗಿ ನಲವತ್ತು ವರ್ಷ ಬಿಜೆಪಿಯಲ್ಲಿದ್ದು ಪಕ್ಷ ಕಟ್ಟಿದ ಈಶ್ವರಪ್ಪ ಪಕ್ಷೇತರನಾಗಿ ನಿಂತಿರುವುದು ರಾಜ್ಯದಲ್ಲಷ್ಟೆ ಅಲ್ಲದೆ ದೇಶದಲ್ಲಿಯೂ ಸಹ ಚರ್ಚೆಯಾಗುತ್ತಿದೆ ನೀವೆಲ್ಲರೂ ನನ್ನ ಹೋರಟಕ್ಕೆ ಶಕ್ತಿ ತುಂಬಿ ಚುನಾವಣೆಯಲ್ಲಿ ಗೆಲ್ಲಿಸಿ ನಾನು ದೆಹಲಿಗೆ ಹೋಗಿ ಮೋದಿ ಪ್ರಧಾನಿಯಾಗಲು ಕೈಎತ್ತುತ್ತೇನೆ ಎಂದು ಕೇಳಿಕೊಂಡರು‌‌.

Leave A Reply

Your email address will not be published.

error: Content is protected !!