Shivamogga | ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡ ಮಕ್ಕಳ ದಸರಾ

0 49

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಮ್ಮೂರ ಶಿವಮೊಗ್ಗ ದಸರಾ ಅಂಗವಾಗಿ ಮಕ್ಕಳ ದಸರಾ ಸಮಿತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಕ್ರೀಡೆ, ಕಲೆ, ಕೌಶಲ್ಯ ಸ್ಪರ್ಧೆಗಳ ಬಹುಮಾನ ವಿತರಣೆ ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಫ್ರೀಡಂ ಪಾರ್ಕ್‌ನ ವೇದಿಕೆಯಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.


ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲೆಯ ಪ್ರತಿಭಾನ್ವಿತ ಮಕ್ಕಳಾದ ಡ್ರಾಮಾ ಜೂನಿಯರ್ ಖ್ಯಾತಿಯ ಕು| ರಿದ್ದಿ  ಎಸ್. ಹಾಗೂ ಸರಿಗಮಪ ಹಿನ್ನೆಲೆ ಗಾಯಕಿ ಕು| ನೇಹಾ ಆರ್. ಉದ್ಘಾಟಿಸಿ ತಮ್ಮ ಕಲೆಯನ್ನು ವೇದಿಕೆಯಲ್ಲಿ ಪ್ರದರ್ಶಿಸುವ ಮೂಲಕ ಪ್ರೇಕ್ಷರನ್ನು ರಂಜಿಸಿದರು.
ಮಕ್ಕಳ ದಸರಾದ ಅಂಗವಾಗಿ ಹಮ್ಮಿಕೊಂಡಿದ್ದ ಹಲವಾರು ಕ್ರೀಡೆ, ಕಲೆ, ಕೌಶಲ್ಯ, ಕರಾಟೆ ಕೂಡೋ ಮಾರ್ಷಲ್ ಆರ್ಟ್ಸ್ ಸೇರಿದಂತೆ ಹಲವು ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆಯ ಹಾಗೂ ಎಸ್‌ಎಸ್‌ಎಲ್‌ಸಿ ಯಲ್ಲಿ ಅತಿಹೆಚ್ಚು ಅಂಕ ಪಡೆದ ಶಿವಮೊಗ್ಗದ ಹತ್ತು ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

20ಕ್ಕೂ ಹೆಚ್ಚು ಶಾಲೆಗಳಿಂದ ಆಗಮಿಸಿದ ಶಾಲಾ ಮಕ್ಕಳು ಸಾಂಸ್ಕೃತಿಕ ಕಲರವ ನೃತ್ಯಗಳನ್ನು ಪ್ರದರ್ಶಿಸಿದರು. ವಿಶೇಷವಾಗಿ ಪ್ರಪ್ರಥಮ ಬಾರಿಗೆ ದಸರಾ ಕಾರ್ಯಕ್ರಮದ ಫ್ರೀಡಂ ಪಾರ್ಕ್‌ನ ವೇದಿಕೆಯ ಮೇಲೆ ಶಿವಮೊಗ್ಗ ನಗರದ ಕರಾಟೆಪಟುಗಳು ಸಾಹಸಮಯ ಕರಾಟೆ ಕಲೆಯನ್ನು ಪ್ರದರ್ಶಿಸಿದರು. ಕೊಡಗು ಜಿಲ್ಲೆಯಿಂದ ಆಗಮಿಸಿದ ಜಾದೂಗಾರ ವಿಕ್ರಂ ಶೆಟ್ಟಿ ಅವರು ತಮ್ಮ ಜಾದೂ ಕಲೆಯಿಂದ ಮಕ್ಕಳನ್ನು ಹಾಗೂ ನಾಗರಿಕರನ್ನು ರಂಜಿಸಿದರು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್. ಪ್ರಸನ್ನಕುಮಾರ್, ನಗರಸಭಾ ಮಾಜಿ ಅಧ್ಯಕ್ಷ ಎಮ್. ಶಂಕರ್ ಆಗಮಿಸಿ ಶಿವಮೊಗ್ಗ ದಸರಾ ಉತ್ಸವ ನಡೆದು ಬಂದ ಹಾದಿ ಮೆಲುಕು ಹಾಕಿದರು.


ಶಾಸಕ ಎಸ್.ಎನ್. ಚನ್ನಬಸಪ್ಪ ಮಕ್ಕಳ ಸಾಂಸ್ಕೃತಿಕ ಕಲರವವನ್ನು ವೀಕ್ಷಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಕ್ಕಳ ದಸರಾ ಸಮಿತಿಯ ಅಧ್ಯಕ್ಷೆ ರೇಖಾ ರಂಗನಾಥ್ ವಹಿಸಿದ್ದರು.


ಕಾರ್ಯಕ್ರಮದಲ್ಲಿ ಪಾಲಿಕೆ ಉಪಮೇಯರ್ ಲಕ್ಷ್ಮೀಶಂಕರ್ ನಾಯಕ್, ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್, ಸದಸ್ಯರಾದ ಸುನೀತಾ ಅಣ್ಣಪ್ಪ, ಹೆಚ್.ಸಿ. ಯೋಗೇಶ್, ಆರ್.ಸಿ. ನಾಯ್ಕ್, ಮಂಜುಳಾ ಶಿವಣ್ಣ, ಸುವರ್ಣಾ ಶಂಕರ್, ವಿಶ್ವನಾಥ್, ಮಂಜುನಾಥ್, ರಾಜು, ಅನಿತಾ ರವಿಶಂಕರ್, ಆರತಿ ಆ.ಮಾ.ಪ್ರಕಾಶ್, ಸಂಗೀತಾ ನಾಗರಾಜ್ ಹಾಗೂ ಪಾಲಿಕೆಯ ಅಧಿಕಾರಿಗಳು, ನಗರದ ವಿವಿಧ ಶಾಲೆಗಳಿಂದ ಆಗಮಿಸಿದ ಕ್ರೀಡಾ ಹಾಗೂ ಸಾಂಸ್ಕೃತಿಕ ತರಬೇತುದಾರರು, ಪೋಷಕರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!