ಬಿಜೆಪಿಯಲ್ಲಿ ಒಗ್ಗಟ್ಟಿನ ಮಂತ್ರ | JDSನ ಎಂ.ವಿ. ಜಯರಾಮ್ ಮನೆಗೆ ಬಿ.ವೈ. ರಾಘವೇಂದ್ರ ಭೇಟಿ, ಒಗ್ಗೂಡಲು ಮನವಿ

0 655

ಹೊಸನಗರ: ತಾಲ್ಲೂಕಿನಲ್ಲಿ ಸಾಕಷ್ಟು ಜನ ಕಾರ್ಯಕರ್ತರು ಜನತಾದಳದಲ್ಲಿದ್ದು ಇನ್ನೂ ಕಾರ್ಯಕರ್ತರಾಗಿ ಚುನಾವಣೆ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 30 ವರ್ಷಗಳಿಂದ ಜನತಾದಳದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರ ಜೊತೆಗೆ 35 ವರ್ಷಗಳಿಂದ ಪಿಎಲ್‌ಡಿ ಬ್ಯಾಂಕ್ ಜೆಡಿಎಸ್ ಪಕ್ಷದಿಂದ (ಚಿಹ್ನೆ ರಹಿತ) ಸ್ಪರ್ಧಿಸಿ ಜಯ ಪಡೆದು ಇಂದಿಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದೂ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಮಿಲನಗೊಳಿಸುವ ಈ ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆಗೆ ಪ್ರಯತ್ನಗಳು ನಡೆಯುತ್ತಿದೆ‌‌. ಇವರ ಜೊತೆಗೆ ರಿಪ್ಪನ್‌ಪೇಟೆ ವರ್ತೇಶ್ ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿ ಚಾಬುಸಾಬ್‌ರವರು ಜೆಡಿಎಸ್ ಪಕ್ಷದ ಜಿಲ್ಲಾ ಸಂಘಟಕರಾಗಿ ಕೆಲಸ ಮಾಡುವುದರ ಜೊತೆಗೆ ಕಾಯಿ ನಾಗೇಶ್ ಇನ್ನೂ ಮುಂತಾದವರು ಜೆಡಿಎಸ್ ಪಕ್ಷ ಬಿಡುವುದಿಲ್ಲ ಎಂಬ ಧೋರಣೆಯೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾರೆ.

ಹೊಸನಗರ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದಲ್ಲಿ 1 ಲಕ್ಷಕ್ಕಿಂತಲ್ಲೂ ಹೆಚ್ಚು ಜಿಲ್ಲೆಯಲ್ಲಿ ಮೂರಕ್ಕಿಂತ ಲಕ್ಷದ ಕಾರ್ಯಕರ್ತರನ್ನು ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಹೊಂದಿದೆ ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಹೊಂದಾಣಿಕೆಯಿಂದ ಈ ಬಾರಿ ಲೋಕಸಭೆ ಚುನಾವಣೆ ಎದುರಿಸುತ್ತಿರುವುದರಿಂದ ಹೊಸನಗರ ತಾಲ್ಲೂಕಿನಲ್ಲಿ ಒಟ್ಟಾಗಿ ಚುನಾವಣೆ ಎದುರಿಸಲು ಶಿವಮೊಗ್ಗ ಲೋಕಸಭೆ ಅಭ್ಯರ್ಥಿ ಬಿ.ವೈ ರಾಘವೇಂದ್ರರವರು ಜೆಡಿಎಸ್ ತಾಲ್ಲೂಕು ಮಾಜಿ ಅಧ್ಯಕ್ಷರಾದ ಎಂ.ವಿ.ಜಯರಾಮ್‌ರವರ ಮನೆಗೆ ಭೇಟಿ ನೀಡಿ ಬೆಂಬಲಿಸಲು ಮನವಿ ಮಾಡಿದರು.

ಬಿಜೆಪಿಯಲ್ಲಿ ಸರಿಯಾದ ಸ್ಥಾನ ನೀಡಿ, ನಮ್ಮನ್ನು ಕುರಿಗಳಂತೆ ವರ್ತಿಸಬಾರದು:

ಲೋಕಸಭೆಯ ಅಭ್ಯರ್ಥಿ ಬಿ.ವೈ ರಾಘವೇಂದ್ರರವರು ಜೆಡಿಎಸ್ ಮಾಜಿ ಅದ್ಯಕ್ಷ ಜಯರಾಮ್ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಚುನಾವಣೆಯ ಸಂದರ್ಭದಲ್ಲಿ ನಮಗೆ ಸರಿಯಾದ ಸ್ಥಾನಮಾನ ನೀಡಬೇಕು. ನಮ್ಮ ಕಾರ್ಯಕರ್ತರನ್ನು ಕುರಿಗಳಂತೆ ನೋಡುವುದನ್ನು ಬಿಡಬೇಕು. ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಸರಿಸಮನಾಗಿ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಬೇಕು ಅಂದಾಗ ಮಾತ್ರ ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಿಂದ ಚುನಾವಣೆ ಎದುರಿಸಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಸುಮಾರು 200ಕ್ಕಿಂತಲ್ಲೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ನಿಟ್ಟೂರು ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿಗಳಾದ ಕಾಲಸಸಿ ಸತೀಶ, ಬಿ.ಸ್ವಾಮಿರಾವ್, ಸುರೇಶ ಸ್ವಾಮಿರಾವ್, ನಾಗರ್ಜುನ್, ಎನ್.ಆರ್. ದೇವಾನಂದ್, ಉಮೇಶ್ ಕಂಚುಗಾರ್, ಮಂಡಾನಿ ಮೋಹನ್, ಸೋಮಣ್ಣ, ಶಿವಕುಮಾರ್, ಸತ್ಯನಾರಾಯಣ ವಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರಿಪ್ಪನ್‌ಪೇಟೆ ವರ್ತೇಶ್, ಜಿಲ್ಲಾ ಸಂಘಟಕ ಚಾಬುಸಾಬ್, ಸಯ್ಯಾದ್, ಕೃಷ್ಣಮೂರ್ತಿ, ಕಾಯಿ ನಾಗೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!