ಮುಂಬಾರು ಮತ್ತು ತ್ರಿಣಿವೆ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

0 81



ಹೊಸನಗರ: ತಾಲ್ಲೂಕಿವ ಮುಂಬಾರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಮಾಲತಿ ಲಿಂಗಪ್ಪ ಹಾಗೂ ಉಪಾಧ್ಯಕ್ಷರಾಗಿ ಅಶ್ವಿನಿ ಶ್ರೀಕಾಂತ್‌ರವರು ಆಯ್ಕೆಯಾಗಿದ್ದಾರೆ.


ಈ ಗ್ರಾಮ ಪಂಚಾಯತಿ 8 ಜನ ಸದಸ್ಯರ ಬಲ ಹೊಂದಿದ್ದು ಚುನಾವಣಾಧಿಕಾರಿಯಾಗಿ ಪಶು ಸಂಗೋಪನ ಅಧಿಕಾರಿ ನಾಗರಾಜ್‌ರವರು ಚುನಾವಣಾ ಕಾರ್ಯ ನಿರ್ವಹಿಸಿದ್ದರು.


ದರ್ಪದಿಂದ ಚುನಾವಣೆ ಎದುರಿಸಲು ಸಾಧ್ಯವಿಲ್ಲ: ಚಂದ್ರಮೌಳಿ
ರಾಜಕೀಯ ನಾಯಕರಿಗೆ ಕುರ್ಚಿ ಕಂಡೊಡನೇ ದರ್ಪ ಮಾಡುವುದು ಇತ್ತಿಚಿನ ದಿನದಲ್ಲಿ ಸರ್ವೆ ಸಾಮಾನ್ಯವಾಗಿದೆ. ಆದರೆ ಅಧಿಕಾರ ಕುರ್ಚಿ ಶಾಶ್ವತವಲ್ಲ ನಾವು ಮಾಡುವ ಕೆಲಸದಲ್ಲಿ ತೃಪ್ತಿ ಕಾಣಬೇಕಾಗಿದೆ. ದರ್ಪದಿಂದ ಚುನಾವಣೆ ಎದರಿಸಲು ಸಾಧ್ಯವಿಲ್ಲ ಎಂದು ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಚಂದ್ರಮೌಳಿಯವರು ಹೇಳಿದರು.


ಮುಂಬಾರು ಗ್ರಾಮ ಪಂಚಾಯತಿಯಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
ಸರ್ಕಾರದ ಸಾಕಷ್ಟು ಯೋಜನೆಗಳು ಈಗಾಗಲೇ ಜಾರಿಗೆ ತರಲಾಗಿದ್ದು ಅದನ್ನು ಮನೆ-ಮನೆಗಳಿಗೆ ಮುಟ್ಟಿಸಬೇಕು ಹಾಗೂ ಗ್ರಾಮಸ್ಥರಿಗೆ ಸೌಲಭ್ಯದ ಬಗ್ಗೆ ಮಾಹಿತಿ ನೀಡಬೇಕು ಸೌಲಭ್ಯ ಕೊಡಿಸುವುದರಲ್ಲಿ ಮುಖ್ಯ ಪಾತ್ರ ವಹಿಸಿಬೇಕು ಅದನ್ನು ಬಿಟ್ಟು ಕುರ್ಚಿ ಸಿಕ್ಕದೆ ಎಂದು ದರ್ಪ ತೋರಿಸಿದರೆ ಮುಂದೆ ಅದೇ ಜನರು ತಕ್ಕ ಪಾಠ ಕಲಿಸುತ್ತಾರೆ ಆದ್ದರಿಂದ ಅಧ್ಯಕ್ಷ – ಉಪಾಧ್ಯಕ್ಷರ ಕುರ್ಚಿ ಸಿಕ್ಕಿದೆ ಎಂದು ದುರಂಕಾರ ಮಾಡದೇ ಗ್ರಾಮಸ್ಥರ ಸೇವೆ ಮಾಡಬೇಕೆಂದು ನೂತನವಾಗಿ ಆಯ್ಕೆಯಾಗಿರುವ ತಾಲ್ಲೂಕಿನ ಎಲ್ಲ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಲಹೇ ನೀಡುವುದರ ಜೊತೆಗೆ ಗ್ರಾಮ ಪಂಚಾಯತಿಯ ಸದಸ್ಯರು ಒಟ್ಟಾಗಿ ಕೆಲಸ ಮಾಡುವುದರಿಂದ ಗ್ರಾಮದ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ತ್ರಿಣಿವೆ ಗ್ರಾಮ ಪಂಚಾಯತಿ

ಹೊಸನಗರ: ತಾಲ್ಲೂಕಿನ ತ್ರಿಣಿವೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಲೀಲಾವತಿ ಹಾಗೂ ಹಿಂದೆ ಇದೇ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ಕಾಂಗ್ರೆಸ್ ಬೆಂಬಲಿತ ಸದಸ್ಯ ಚಂದ್ರಶೇಖರರವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ಚುನಾವಣಾಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ನಿರ್ದೇಶಕ ಪುಟ್ಟನಾಯ್ಕರವರು ಕಾರ್ಯ ನಿರ್ವಹಿಸಿದ್ದು ಈ ಸಂದರ್ಭದಲ್ಲಿ ಪಿಡಿಓ ರಂಜಿತಾ ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!