ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಿಂದ ಚೋಡೆತ್ತುಗಳ ರೀತಿಯಲ್ಲಿ ಚುನಾವಣೆಯ ರಥ ಎಳೆಯಲಿದೆ ; ಮಾಜಿ ಶಾಸಕ ರಘುಪತಿ ಭಟ್

0 540

ಹೊಸನಗರ: ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಲೋಕಸಭೆಯ ಚುನಾವಣೆಯಲ್ಲಿ ಜೋಡೆತ್ತುಗಳ ರೀತಿಯಲ್ಲಿ ಚುನಾವಣೆಯ ರಥ ಎಳೆಯಲಿದೆ ಎಂದು ಉಡುಪಿಯ ಬಿಜೆಪಿ ಮಾಜಿ ಶಾಸಕ ರಘುಪತಿ ಭಟ್‌ ಹೇಳಿದರು.

ಪಟ್ಟಣದ ಬಸ್‌ ನಿಲ್ದಾಣದ ಎದುರಿನಲ್ಲಿರುವ ಬಿಜೆಪಿ ಕಛೇರಿಯಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಹೊಂದಾಣಿಕೆ ಸಭೆಯನ್ನು ಆಯೋಜಿಸಲಾಗಿದ್ದು ಈ ಸಭೆಯ ನಂತರ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಈ ಬಾರಿಯ ಚುನಾವಣೆಯಲ್ಲಿ ಎಲ್ಲಿಯೂ ಲೋಪವಾಗದಂತೆ ಸರಿಸಮಾನ ರೀತಿಯಲ್ಲಿ ಕೆಲಸ ಮಾಡಬೇಕು ಎರಡು ಪಕ್ಷದ ಕಾರ್ಯಕರ್ತರು ಬಿ.ವೈ ರಾಘವೇಂದ್ರ ನಮ್ಮ ಪಕ್ಷದ ಅಭ್ಯರ್ಥಿ ಎಂದು ಕೆಲಸ ಮಾಡಿದರೇ ಜಯ ಗ್ಯಾರಂಟಿ ಎಂದರು.

ಜೆಡಿಎಸ್ ಪಕ್ಷದ ಕಾರ್ಯಕರ್ತರು ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಾರ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನಮಂತ್ರಿ ನರೇಂದ್ರಮೋದಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ಮಾರ್ಗದರ್ಶನದಲ್ಲಿ ಹೊಂದಾಣಿಕೆಯಿದ್ದರೇ ಬಲವಿದೆ ಎಂಬ ರೀತಿಯಲ್ಲಿ ಚುನಾವಣೆ ಎದುರಿಸಿ ಎಂದರು.

20 ಜನರ ಸಮಿತಿ ರಚನೆ:
ಹೊಸನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ 10 ಜನ ಕಾರ್ಯಕರ್ತರು ಹಾಗೂ ಜೆಡಿಎಸ್ ಪಕ್ಷದಿಂದ 10 ಜನ ಕಾರ್ಯಕರ್ತರ ಸಮಿತಿ ರಚಿಸಲಾಗಿದ್ದು ಈ ಸಮಿತಿಯ ಸದಸ್ಯರು ಪ್ರತಿ ವಾರಕ್ಕೊಮ್ಮೆ ಬಿಜೆಪಿ ಕಛೇರಿಯಲ್ಲಿ ಸಭೆ ನಡೆಸಬೇಕು ಎಲ್ಲಿ ಹೊಂದಾಣಿಕೆಯ ಕೊರತೆ ಲೋಪದೋಷಗಳ ಬಗ್ಗೆ ಸಭೆಯ ಗಮನಕ್ಕೆ ತಂದು ಸರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಹಕರಿಸಬೇಕೆಂದರು.

ಗ್ಯಾರಂಟಿ ಬಗ್ಗೆ ಹೆದರಿಕೆ ಬೇಡ:
ರಾಜ್ಯ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಇಟ್ಟುಕೊಂಡು ಈ ಬಾರಿಯ ಲೋಕಸಭೆಯ ಚುನಾವಣೆ ಎದುರಿಸುತ್ತಿದೆ ನಮ್ಮ ಮಹಿಳಾ ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ ಮೋದಿಯವರು ನೀಡುತ್ತಿರುವ ಜನಪರವಾದ ಕಾರ್ಯಕ್ರಮಗಳನ್ನು ಹೇಳಲಿದ್ದು ಕಾಂಗ್ರೆಸ್ ಪಕ್ಷ ನಾವು ಚುನಾವಣೆಯಲ್ಲಿ ಸೋತರೆ ಗ್ಯಾರಂಟಿ ತೆಗೆಯುತ್ತೇವೆ ಎಂದು ಜನರಲ್ಲಿ ಹೆದರಿಸುವ ಕಾರ್ಯಕ್ಕೆ ಕೈ ಹಾಕಿ ಓಟು ಪಡೆಯಲು ಹೊರಟಿದ್ದು ಚುನಾವಣೆಯ ನಂತರ ಗ್ಯಾರಂಟಿ ರದ್ದು ಪಡಿಸಿದರೇ ನಮ್ಮ ಬಿಜೆಪಿ ಪಕ್ಷದಿಂದ ಹೋರಾಟ ಮಾಡುತ್ತೇವೆ ಎಂದರು.

ಸಂಸದ ಬಿ.ವೈ ರಾಘವೇಂದ್ರರವರು ಸಮಾಜಮುಖಿ ಕೆಲಸ ಮಾಡಿದ್ದು ಅಭಿವೃದ್ಧಿಯಲ್ಲಿ 10 ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದು ಕೇಂದ್ರದ ಅನುದಾನದಲ್ಲಿ ಸಾಕಷ್ಟು ಕೊಡಿಗೆ ಶಿವಮೊಗ್ಗ ಕ್ಷೇತ್ರಕ್ಕೆ ತಂದು ಸೇವೆ ಮಾಡಿದ್ದಾರೆ ಇವರ ಕೊಡುಗೆ ಈ ಜಿಲ್ಲೆ ಆಪಾರವಾಗಿದ್ದು ಈ ಬಾರಿ ಇನ್ನೂ ಹೆಚ್ಚಿನ ಅಂತರದಿಂದ ಜಯಶಾಲಿಯಾಗಲಿದ್ದಾರೆ ಎಂದರು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ನಿಟ್ಟೂರು ಸುಬ್ರಹ್ಮಣ್ಯ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ವರ್ತೆಶ್, ಜಿಲ್ಲಾ ಜೆಡಿಎಸ್ ಸಮನ್ವಯ ಅಧ್ಯಕ್ಷ ರಾಮಕೃಷ್ಣ, ಬಿಜೆಪಿ ಸಮಾನ್ವಯಾಧಿಕಾರಿ ವಿಲ್ಸನ್ ಕ್ರೋಡ್ರೀಗಸ್, ಪ್ರಚಾರ ಸಮಿತಿಯ ಅಧ್ಯಕ್ಷ ಸಿದ್ದಪ್ಪ, ಎನ್.ಆರ್ ದೇವಾನಂದ, ಚಾಬುಸಾಬ್, ಉಮೇಶ್ ಕಂಚುಗಾರ್, ಕೆ.ವಿ.ಕೃಷ್ಣಮೂರ್ತಿ, ಶ್ರೀಧರ ಉಡುಪ, ಗಣಪತಿ ಬಿಳಗೋಡು, ಆಲವಳ್ಳಿ ವೀರೇಶ್, ಸುರೇಶ್ ಸ್ವಾಮಿರಾವ್, ಕಾವೇರಿ ವಿಜಯ, ಪ್ರಧಾನ ಕಾರ್ಯದರ್ಶಿ ಕಾಲಸಸಿ ಸತೀಶ್, ನಾಗರ್ಜುನ್‌ಸ್ವಾಮಿ, ಸತ್ಯನಾರಾಯಣ, ಸುಮವತಿ ಪೂಜಾರ್, ಮಂಡಾನಿ ಮೋಹನ, ಕೃಷ್ಣವೇಣಿ, ಶ್ರೀಪತಿರಾವ್, ಜಬಗೋಡು ಹಾಲಪ್ಪ ಗೌಡ, ಕಾಯಿ ನಾಗೇಶ ಇನ್ನೂ ಮುಂತಾದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!