2nd PUC Result 2024 | ಚಿಕ್ಕಮಗಳೂರು ಜಿಲ್ಲೆಗೆ 9ನೇ ಸ್ಥಾನ

0 274

ಚಿಕ್ಕಮಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆ ಎದುರಿಸಿದ 8711ಮಂದಿ ವಿದ್ಯಾರ್ಥಿಗಳ ಪೈಕಿ 7429 ಮಂದಿ ತೇರ್ಗಡೆ ಹೊಂದಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೆ ಮೇಲುಗೈ ಸಾಧಿಸಿ ತಮ್ಮ ಅಸಮಾನ್ಯ ಸಾಮಾರ್ಥ್ಯವನ್ನು ಹೊರಗೆಡಹಿದ್ದಾರೆ.

7429 ಮಂದಿ ವಿದ್ಯಾರ್ಥಿಗಳ ಪೈಕಿ 3890 ಮಂದಿ ಹುಡುಗರು, 4821ಮಂದಿ ಹುಡುಗಿಯರು ಪಾಸಾಗಿದ್ದಾರೆ. ರಾಜ್ಯಮಟ್ಟದಲ್ಲಿ ಕಾಫಿನಾಡು ಒಂಭತ್ತನೆ ಸ್ಥಾನ ಪಡೆದುಕೊಂಡಿದೆ. 2023ನೇ ಸಾಲಿನಲ್ಲಿ ಆರನೇ ಸ್ಥಾನದಲ್ಲಿದ್ದ ಜಿಲ್ಲೆ ಒಂಭತ್ತನೇ ಸ್ಥಾನಕ್ಕೆ ಕುಸಿತ ಕಂಡಿದೆ.


ಕಲಾವಿಭಾಗದಲ್ಲಿ ಪರೀಕ್ಷೆ ಎದುರಿಸಿದ 2421 ಮಂದಿ ವಿದ್ಯಾರ್ಥಿಗಳ ಪೈಕಿ 1793 ಮಂದಿ ಪಾಸಾಗಿದ್ದಾರೆ. ಅದರಲ್ಲಿ 797ಹುಡುಗರು,996 ಹುಡುಗಿಯರು ಪಾಸಾಗಿದ್ದಾರೆ.

ವಾಣಿಜ್ಯವಿಭಾಗದಲ್ಲಿ ಪರೀಕ್ಷೆ ಎದುರಿಸಿದ 2927ಮಂದಿ ವಿದ್ಯಾರ್ಥಿಗಳ ಪೈಕಿ 2747 ಮಂದಿ ಪಾಸಾಗಿದ್ದಾರೆ. ಆ ಪೈಕಿ 1129ಮಂದಿ ಹುಡುಗರು, 1418ಮಂದಿ ಹುಡುಗಿಯರು ಪಾಸಾಗಿದ್ದಾರೆ.

ವಿಭಾಗದಲ್ಲಿ 3363 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಆ ಪೈಕಿ 3089 ಮಂದಿ ಪಾಸಾಗಿದ್ದಾರೆ.ಆ ಪೈಕಿ 1212ಹುಡುಗರು, 1877ಹುಡುಗಿಯರು ಪಾಸಾಗಿದ್ದಾರೆ.

2024ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 8711 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ. 85.28 ಫಲಿತಾಂಶ ಪಡೆದಿದೆ. ಕಳೆದ ಬಾರಿಗಿಂತ ಶೇಕಡವಾರು ಶೇ.5ರಷ್ಟು ಫಲಿತಾಂಶ ಹೆಚ್ಚಳಗೊಂಡಿದ್ದರು. ರಾಜ್ಯಮಟ್ಟದಲ್ಲಿ ಒಂಭತ್ತನೆ ಸ್ಥಾನ ಪಡೆದುಕೊಳ್ಳುವ ಮೂಲಕ ಮೂರು ಸ್ಥಾನಗಳ ಹಿನ್ನಡೆ ಸಾಧಿಸಿದೆ.

ವಿದ್ಯಾರ್ಥಿಗಳಿಗೆ ವರ್ಕ್ ಶಾಪ್ ನಡೆಸಲಾಗಿದೆ. ವಿಶೇಷ ತರಗತಿ, ಸರ್ಕಾರಿ ಕಾಲೇಜುಗಳಲ್ಲಿನ ಫಲಿತಾಂಶ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಸ್ಮಾಟ್‌ಕ್ಲಾಸ್ ಮತ್ತು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಪರಿಶ್ರಮದಿಂದ ಶೇಕಡವಾರು ಫಲಿತಾಂಶ ಹೆಚ್ಚಳಗೊಂಡಿದ್ದರು. ರಾಜ್ಯಮಟ್ಟದಲ್ಲಿ ಮೂರು ಸ್ಥಾನ ಕುಸಿತ ಕಂಡಿದೆ

ವಿಜ್ಞಾನ ವಿಭಾಗದಲ್ಲಿ ಸೆಂಟ್ ಮೇರಿಸ್ ಕಾಲೇಜಿನ ಕೆ.ಆರ್.ಅನನ್ಯ 600 ಅಂಕಗಳಿಗೆ 594 ಅಂಕಗಳನ್ನು ಶೇ.99 ರಷ್ಟು ಗಳಿಸುವ ಮೂಲಕ ಈ ವಿಭಾಗದಲ್ಲಿ ಜಿಲ್ಲೆ ಪ್ರಥಮ ಸ್ಥಾನ ಹಾಗೂ ರಾಜ್ಯದಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ತಂದೆ ರಾಘವೇಂದ್ರ ಉಳ್ಳೂರ ಕೆ. ಅವರು ನ್ಯಾಯಾಲಯ ಇಲಾಖೆಯಲ್ಲಿ ತೀರ್ಪು ಬರಹಗಾರರಾಗಿ ಕಾರ್ಯನಿರ್ವಹಿ ಸುತ್ತಿದ್ದಾರೆ. ತಾಯಿ ಕೆ.ಎಸ್.ಅಂಬಿಕಾ ಮೆಸ್ಕಾಂ ಇಲಾಖೆಯಲ್ಲಿ ಹಿರಿಯ ಸಹಾಯಕರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.

ಕಲಾ ವಿಭಾಗದಲ್ಲಿ ಕೊಪ್ಪ ತಾಲೂಕಿನ ಕೊಪ್ಪ ಪಟ್ಟಣದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಾಜೇಶ್ವರಿ ಜಿಲ್ಲೆಗೆ ಟಾಪರ್ ಆಗಿದ್ದು, 600 ಅಂಗಳಿಗೆ 584 ಅಂಕಗಳಿಸುವ ಮೂಲಕ ಶೇ. 97.33 ಪಡೆದಿದ್ದು, ಜಿಲ್ಲೆಗೆ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ತಂದೆ ವೆಂಕಟೇಶ ಮೂರ್ತಿ ಮತ್ತು ತಾಯಿ ಗೀತಾ ಕೃಷಿಕರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಶೃಂಗೇರಿ ಪಟ್ಟಣದ ಬಿಜಿಎಸ್ ಕಾಲೇಜಿನ ಬಿ.ಆರ್.ಮೈಥಲಿ 600 ಅಂಕಗಳಿಗೆ 591 ಶೇ.98.50 ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ಐದನೇ ಸ್ಥಾನ ಪಡೆದುಕೊಂಡಿದ್ದಾಳೆ. ಶೃಂಗೇರಿ ತಾಲೂಕಿನ ಬಿಳುವಿನಕೊಡಿಗೆ ಮಾವಿನಕಟ್ಟೆಯ ರಾಜಗೋಪಾಲ್ ಭಟ್ ಹಾಗೂ ಬಿ.ಆರ್.ಉಮಾ ಅವರ ಪುತ್ರಿಯಾಗಿದ್ದು, ಕೃಷಿ ಕುಂಟುಂಬದವರು.

ಶೃಂಗೇರಿಯ ಬಿಜಿಎಸ್ ಶಾಲೆ, ಚಿಕ್ಕಮಗಳೂರು ನಗರದ ಸೈಂಟ್‌ಮೇರಿಸ್‌ಶಾಲೆ, ಸಾಯಿ ಏಂಜೆಲ್ಸ್, ನರಸಿಂಹರಾಜಪುರದ ಮೌಂಟ್‌ಕಾರ್ಮೆಲ್, ಕೊಪ್ಪ ತಾಲೂಕಿನ ಮುತ್ತಿನಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು, ಕಡೂರು ತಾಲೂಕು ಕಾಮನ ಕೆರೆಯ ಮೊರಾರ್ಜಿದೇಸಾಯಿ ಪದವಿ ಪೂರ್ವ ಕಾಲೇಜು ವಸತಿಶಾಲೆ, ತೇಗೂರಿನ ಮೊರಾರ್ಜಿ ದೇಸಾಯಿ ವಸತಿಶಾಲೆ, ಮೂಡಿಗೆರೆಯ ಸೆಂಟ್‌ಮಾರ್ಥಸ್ ಪದವಿಪೂರ್ವ ಕಾಲೇಜುಗಳು ಶೇ.100 ರಷ್ಟು ಫಲಿತಾಂಶವನ್ನು ಪಡೆದುಕೊಂಡಿವೆ.

ಮಲೆನಾಡು ವಿದ್ಯಾಸಂಸ್ಥೆಯ ಎಸ್.ಎಸ್.ಎಂ. ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.87.38 ಫಲಿತಾಂಶ ಲಭಿಸಿದೆ.

Leave A Reply

Your email address will not be published.

error: Content is protected !!