ಜಾನಪದ ಸಾಹಿತ್ಯದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ ; ಎಂ.ಎಂ. ಪರಮೇಶ್

0 114


ಹೊಸನಗರ: ಜನಪದ ಸಾಹಿತ್ಯಕ್ಕೆ ಲೇಖಕರಿಲ್ಲ ಬರಹಗಾರರಿಲ್ಲ ಹಳ್ಳಿಗರ ನುಡಿಯಿಂದ ನುಡಿದ ಹಾಡೇ ಜನಪದ ಗೀತೆಯ ಸಾಹಿತ್ಯವಾಗಿದೆ ಜನಪದ ಸಾಹಿತ್ಯ ಭಾರತ ದೇಶದಲ್ಲಿಯೇ ರಾಜ್ಯ ಪ್ರಥಮ ಸ್ಥಾನ ಪಡೆದಿದೆ ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ರಾಜ್ಯ ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಎಂ.ಎಂ. ಪರಮೇಶ್‌ರವರು ಹೇಳಿದರು.


ಪಟ್ಟಣದ ರಾಮಕೃಷ್ಣ ವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ತಾಲ್ಲೂಕು ಸಮಿತಿ ಹೊಸನಗರ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಫ್ರೌಡಶಾಲಾ ವಿದ್ಯಾರ್ಥಿಗಳಿಗೆ ಲಾವಣಿ ಮತ್ತು ಜಾನಪದ ಗೀತೆ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಜಾನಪದ ಹುಟ್ಟು ಹಳ್ಳಿಗಳಲ್ಲಿ ಜನರ ಬಾಯಿಯಿಂದ ಬಾಯಿಗೆ ಒಂದು ಕುಟುಂಬ ವರ್ಗದವರಿಗೆ ಒಂದು ಊರಿನಿಂದ ಜಾನಪದ ಸಾಹಿತ್ಯ ರಚನೆಯಾಗಿದೆಯೇ ಹೊರತು ಯಾವುದೇ ಬರಹಗಾರರಿಂದ ರಚನೆಯಾಗಿಲ್ಲ ಜಾನಪದ ಸಾಹಿತ್ಯ ಅನೇಕ ಸವಕಲುಗಳನ್ನು ಹೊಂದಿದ್ದು ಜನರಿಂದ ಜನರಿಗಾಗಿ ಹುಟ್ಟಿರುವ ಈ ಸಾಹಿತ್ಯ ಈ ಜಾನಪದ ಸಾಹಿತ್ಯ ಅಂತ್ಯವಾಗಬೇಕಾದರೆ ಮನುಷ್ಯ ಜನ್ಮ ನಾಶವಾದಾಗ ಮಾತ್ರ ಸಾಧ್ಯ ಎಲ್ಲ ಸಾಹಿತ್ಯಗಳಿಗೂ ಕೊನೆ ಇದೆ ಆದರೆ ಈ ಸಾಹಿತ್ಯಕ್ಕೆ ಕೊನೆಯಿಲ್ಲ ಜಾನಪದದಲ್ಲಿ ಮನುಷ್ಯನು ತಿಳಿದುಕೊಳಬಹುದಾದ ಅನೇಕ ವಿಷಯಗಳಿದ್ದು ಅದನ್ನು ಪ್ರತಿಯೊಬ್ಬರು ಬೇಕಾಗಿರುವ ಹಾಡುಗಳನ್ನು ಕವನಗಳನ್ನು ತಿಳಿದುಕೊಳ್ಳುವ ಮೂಲಕ ಜಾನಪದ ಸಾಹಿತ್ಯವನ್ನು ಪ್ರಪಂಚದ ತುಂಬಾ ಹಬ್ಬಿಸಬೇಕೆಂದು ಈ ಮೂಲಕ ಕೇಳಿಕೊಂಡರು.


ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ|| ಕೆ.ಜಿ ವೆಂಕಟೇಶ್‌ರವರು ಜಾನಪದದ ಬಗ್ಗೆ ಉಪನ್ಯಾಸ ನೀಡಿ, ಜಾನಪದ ಸಾಹಿತ್ಯ ಅಂತ್ಯವಿಲ್ಲ ಆರಂಭವೂ ಇಲ್ಲೆಂಬುವುದರ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಮಕೃಷ್ಣ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕರಾದ ಡಿ.ಎಂ. ದೇವರಾಜ್‌ರವರು ಉದ್ಘಾಟಿಸಿ ಜಾನಪದ ಸಾಹಿತ್ಯದ ಬಗ್ಗೆ ವಿವರಿಸಿದರು.


ಮುಖ್ಯ ಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ತ.ಮ.ನರಸಿಂಹ, ಕನ್ನಡ ಸಾಹಿತ್ಯ, ಸಾಂಸ್ಕೃತೀಕ ವೇದಿಕೆಯ ಅಧ್ಯಕ್ಷ, ಪತ್ರಕರ್ತ ನಗರ ರಾಘವೇಂದ್ರ, ವರ್ತಕರ ಸಂಘದ ಅಧ್ಯಕ್ಷರಾದ ವಿಜೇಂದ್ರ ಶೇಟ್, ನಾಗೇಶ ಕೆ.ಜಿ, ರಾಧಿಕ ರತ್ನಾಕರ್ ಶ್ರೇಷ್ಠಿ, ರಾಮಕೃಷ್ಣ ಶಾಲೆಯ ವಿದ್ಯಾರ್ಥಿಗಳು ಉಪಾಧ್ಯಯರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.


ರಾಮಕೃಷ್ಣ ಶಾಲೆಯ ವಿದ್ಯಾರ್ಥಿಗಳಿಂದ ನಾಡಗೀತೆ ಪ್ರಾರ್ಥನೆ ಮಾಡಲಾಗಿದ್ದು ಸ್ವಾಗತವನ್ನು ವರ್ತಕರ ಸಂಘದ ಅಧ್ಯಕ್ಷರಾದ ವಿಜೇಂದ್ರ ಶೇಟ್‌ರವರು ಮಾಡಿದರು.

Leave A Reply

Your email address will not be published.

error: Content is protected !!