ಮತ್ತೆ ಧೀನ ಸ್ಥಿತಿಯತ್ತ ಹೊಸನಗರ ಸಾರ್ವಜನಿಕ ಆಸ್ಪತ್ರೆ ! ಕಣ್ಣಿದ್ದು ಕುರುಡರಾದ ಸ್ಥಿತಿಯಲ್ಲಿ ಆರೋಗ್ಯ ರಕ್ಷಾ ಸಮಿತಿ

0 459

ಹೊಸನಗರ : 100 ಹಾಸಿಗೆ ಸಾಮರ್ಥ್ಯದ ಹೊಸನಗರದ ಸಾರ್ವಜನಿಕ ಆಸ್ಪತ್ರೆ ಯಾವತ್ತು ಪೂರ್ಣ ಪ್ರಮಾಣವಾದ ದಾಖಲೆ ಇಲ್ಲ. ಸರ್ಕಾರದಿಂದ ಆಸ್ಪತ್ರೆ ಎಂದು ಮಂಜೂರಾದ ದಿನದಿಂದ ಇಲ್ಲಿಯವರೆಗೂ ಕೊರತೆಗಳನ್ನೇ ಎದುರಿಸುತ್ತ ಬಂದಿದೆ.

ಈ ಆಸ್ಪತ್ರೆಯ ಸಮಸ್ಯೆಗಳು 108. ಆಸ್ಪತ್ರೆಗೆ ಮಂಜೂರಾದ ವಾಹನದ ಸಮಸ್ಯೆ 108 ಕ್ಕಿಂತಲೂ ಜಾಸ್ತಿ ಇದೆ. ಈ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರವೇ ಇಲ್ಲ. ಇಲ್ಲಿರುವ ನಾಲ್ವರು ವೈದ್ಯರಲ್ಲಿ ಯಾರಿಗೂ ಬಿಡುವೇ ಇಲ್ಲ. ಒಬ್ಬರು ಸರ್ಜನ್ ಒಬ್ಬರು, ಅರವಳಿಕೆ ತಜ್ಞ, ಮಕ್ಕಳ ತಜ್ಞ ಒಬ್ಬರು. ನಾಲ್ವರು ಮಾತ್ರ ನೂರು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರಣ ಕೂಲಿ ಕೃಷಿ ಕಾರ್ಮಿಕರ ಹೆಚ್ಚಿರುವ ತಾಲೂಕಿನ ಜನರು ವೈದ್ಯಕೀಯ ಸೇವೆಗಾಗಿ ಸಾಗರ, ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಮಣಿಪಾಲಗಳಿಗೆ ತೆರಳಬೇಕಾದ ಪರಿಸ್ಥಿತಿ ಒದಗಿಬಂದಿದೆ.

ಗುತ್ತಿಗೆ ಆಧಾರದ ಮೇಲೆ ಪ್ರಸೂತಿ ತಜ್ಞರಾದ ಡಾ. ಶರ್ಮಿತ ಹಾಗೂ ಕೀಲು ಮೂಳೆತಜ್ಞ ಡಾ. ರಾಹುಲ್ ಹೊಸನಗರ ಆಸ್ಪತ್ರೆಗೆ ನೇಮಕಗೊಂಡಿದ್ದು ಅವರು ಈಗ ಸಾಗರ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಸಂಬಳ ಪಡೆಯಲು ಮಾತ್ರ ಹೊಸನಗರ ಆಸ್ಪತ್ರೆಗೆ ಬರುತ್ತಿದ್ದಾರೆ. ನೇತ್ರ ತಜ್ಞರಾದ ಡಾ. ಶಂಶಾದ್ ಬೇಗಂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇವರುಗಳಿಗೆ ಹೊಸನಗರ ಆಸ್ಪತ್ರೆಯಿಂದ ಸಂಬಳ ಆಗುತ್ತಿದ್ದು ಕರ್ತವ್ಯ ಮಾತ್ರ ಸಾಗರ, ಶಿವಮೊಗ್ಗ ಆಸ್ಪತ್ರೆಗಳಲ್ಲಿ ಲಭ್ಯವಾಗುತ್ತಿದೆ.

ತತ್‍ಕ್ಷಣ ಶಾಸಕರು, ಲೋಕಸಭಾ ಸದಸ್ಯರು, ಆರೋಗ್ಯ ಸಚಿವರು ಈ ಆಸ್ಪತ್ರೆಗೆ ಕಾಯಕಲ್ಪ ಕಲ್ಪಿಸಬೇಕೆಂದು ಈ ಭಾಗದ ಜನರ ಆಗ್ರಹವಾಗಿದೆ.

Leave A Reply

Your email address will not be published.

error: Content is protected !!