ಮಾನವ ಜನ್ಮ ಶ್ರೇಷ್ಟವಾದದ್ದು ; ಶ್ರೀಗಳು

0 138

ರಿಪ್ಪನ್‌ಪೇಟೆ: ಪ್ರಾಣಿಗಳು ಹಸಿವಾದಾಗ ಮೇವು ತಿನ್ನುತ್ತವೆ. ಆದರೆ, ಮನುಷ್ಯ ಹಸಿವಾದಾಗ ತಿನ್ನಲು ಕೇಳುತ್ತಾನೆ. ಇದೆ ಮನುಷ್ಯನಿಗೂ ಪ್ರಾಣಿಗಳಿಗೂ ಇರುವ ವ್ಯತ್ಯಾಸ. ಆದ್ದರಿಂದ ಮಾನವ ಜನ್ಮ ಶ್ರೇಷ್ಟವಾದದ್ದು ಎಂದು ಆನಂದಪುರ ಮುರುಘಾರಾಜೇಂದ್ರ ಮಹಾಸಂಸ್ಥಾನ ಮಠದ ಡಾ.ಜಗದ್ಗುರು ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.

ಸೊನಲೆ ಶ್ರೀರಾಮೇಶ್ವರ ದೇವಸ್ಥಾನದ 17ನೇ ವರ್ಷದ ವರ್ಧ್ಯಂತ್ಯೋತ್ಸವ ಅಂಗವಾಗಿ ಆಯೋಜಿಸಲಾದ ಧರ್ಮ ಜಾಗೃತಿ ಕಾರ್ಯಾಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಕಲ 84 ಜೀವರಾಶಿಗಳಲ್ಲಿ ಸರ್ವ ಶ್ರೇಷ್ಟವಾಗಿರುವ ಮುನುಷ್ಯ ಜನ್ಮ ದೊಡ್ಡದಾಗಿದೆ. ಊರಿಗೊಂದು ದೇವಸ್ಥಾನ ಶಾಲೆ ಮತ್ತು ಆಡಳಿತ ವ್ಯವಸ್ಥೆಯಿದ್ದರೆ ಮಾತ್ರ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆಯಿಂದರಲು ಸಾಧ್ಯವೆಂದು ಹೇಳಿ, ಸೊನಲೆಯಂತಹ ಕುಗ್ರಾಮದಲ್ಲಿನ ರಾಮೇಶ್ವರ ದೇವಸ್ಥಾನಕ್ಕೆ ಸಾಕಷ್ಟು ವಿಶಾಲವಾಗ ಜಾಗವನ್ನು ಕಾಯ್ದಿರಿಸಿಕೊಂಡಿರುವುದರೊಂದಿಗೆ ಸ್ವಚ್ಚವಾಗಿಟ್ಟಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇತ್ತೀಚಿನ ದಿನಗಳಲ್ಲಿ ದೇವಸ್ಥಾನ ಮತ್ತು ಮಠ ಮಂದಿರ ಶಾಲೆಯ ಜಾಗವನ್ನು ಆಕ್ರಮಿಸುವವರೇ ಹೆಚ್ಚಾಗಿರುವ ಕಾಲದಲ್ಲಿ ಇಷ್ಟು ಪ್ರಶಾಂತವಾಗ ಸ್ಥಳದಲ್ಲಿ ಜಾಗವನ್ನು ಮೀಸಲಿಟ್ಟಿರುವುದರ ಬಗ್ಗೆ ದೇವರ ಧರ್ಮದಲ್ಲಿ ನಂಬಿಕೆ ಇಟ್ಟಿರುವುದೇ ಕಾರಣವೆಂದ ಅವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಸಂಸ್ಕಾರವನ್ನು ಕಲಿಸಿ ಸುಸಂಸ್ಕೃತರನ್ನಾಗಿಸುವಂತೆ ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ರಾಮೇಶ್ವರ ದೇವಸ್ಥಾನ ಸೇವಾಸಮಿತಿ ಅಧ್ಯಕ್ಷ, ಮಾಜಿ ಶಾಸಕ ಬಿ.ಸ್ವಾಮಿರಾವ್ ವಹಿಸಿದ್ದರು.

ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಜಿ, ಗುತ್ತಲಕಲ್ಮಠದ ಪ್ರಭುಮಹಾಸ್ವಾಮೀಜಿ, ಹಾಗೂ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಪಟೇಲ್ ಗರುಡಪ್ಪಗೌಡ ಹಾಜರಿದ್ದರು.

ಇದೇ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘದವರಿಂದ ಭಜನಾ ಕಾರ್ಯಕ್ರಮ ಜರುಗಿತು. ಶ್ಯಾಮಲ ಪ್ರಾರ್ಥಿಸಿದರು. ಗಂಗಾಧರಗೌಡ ಸ್ವಾಗತಿಸಿ, ನಿರೂಪಿಸಿದರು.

Leave A Reply

Your email address will not be published.

error: Content is protected !!