ಸಾಮೂಹಿಕ ವಿವಾಹಕ್ಕೆ ಹೆಸರು ನೊಂದಾಯಿಸಿಕೊಳ್ಳಿ ; ಜಯರಾಮ್ ಶೆಟ್ಟಿ

0 314

ಹೊಸನಗರ: ತಾಲ್ಲೂಕಿನಲ್ಲಿ ಸರ್ವಧರ್ಮ ಸೌಹಾರ್ದ ಟ್ರಸ್ಟ್ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಅತೀ ಶೀಘ್ರದಲ್ಲಿಯೇ ಏರ್ಪಡಿಸಲಿದ್ದು ಸರ್ವಧರ್ಮದವರು ಈ ಸಾಮೂಹಿಕ ವಿವಾಹದಲ್ಲಿ ಹೆಸರು ನೊಂದಾಯಿಸಿಕೊಳ್ಳಿ ಎಂದು ಸರ್ವಧರ್ಮ ಸೌಹಾರ್ದ ಟ್ರಸ್ಟ್ ಅಧ್ಯಕ್ಷ ಜಯರಾಮ್ ಶೆಟ್ಟಿರವರು ಹೇಳಿದರು.

ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು, ಬ್ರೆಡ್‌ ವಿತರಿಸಿ ಮಾತನಾಡಿ, ನಮ್ಮ ಸಂಸ್ಥೆ 2024ನೇ ಜನವರಿ ತಿಂಗಳಲ್ಲಿ ಸ್ಥಾಪನೆಗೊಂಡಿದ್ದು ಕೇವಲ ಮೂರು ತಿಂಗಳಲ್ಲಿ ಅನೇಕ ಜನಪರವಾದ ಕೆಲಸವನ್ನು ಮಾಡಿದೆ. ಶಾಲೆ ಮಕ್ಕಳಿಗೆ ಪುಸ್ತಕ, ಪೆನ್ ವಿತರಣೆ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಗಳ ವಿತರಣೆಗಳನ್ನು ಮಾಡುತ್ತಿದೆ. ಬಡವರಿಗೆ ಸಹಾಯ ಹಸ್ತ ನೀಡಲಾಗುತ್ತಿದ್ದು ಮುಂದಿನ ದಿನದಲ್ಲಿ ಶಾಲೆ ಮಕ್ಕಳಿಗೆ ಅನುಕೂಲಕರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ. ವಿಕಲಚೇತನರಲ್ಲಿ ನಡೆದಾಡಲು ಆಗದಂತಹ ಒಬ್ಬ ಅಂಗವಿಕಲರನ್ನು ಗುರುತಿಸಿ ವ್ಹೀಲ್‌ಛೇರ್ ಅಥವಾ ಸಲಕರಣೆ ನೀಡುವ ಕಾರ್ಯಕ್ರಮ, ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ತುರ್ತು ರೋಗಿಗಳಿಗೆ ಧನ ಸಹಾಯ ನೀಡುವುದು, ಸ್ವಾವಲಂಬನೆ ಬದುಕು ರೂಪಿಸಲು ಗೃಹ ಕೈಗಾರಿಕೆ ಹಾಗೂ ಇತರೆ ಉದ್ದಿಮೆ ತರಬೇತಿ ಕಾರ್ಯಗಾರ, ಸರ್ಕಾರಿ ಸೌಲಭ್ಯ ಜನರಲ್ಲಿ ಮೂಡಿಸುವುದು, ಅತೀ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸುವುದು, ಅದರ ಜೊತೆಗೆ ಒಂದು ದೊಡ್ಡ ಕೆಲಸಕ್ಕೆ ಕೈ ಹಾಕಲಾಗಿದ್ದು ಹೊಸನಗರ ತಾಲ್ಲೂಕಿನಲ್ಲಿ ಸಾಮೂಹಿಕ ವಿವಾಹ ಮಾಡಬೇಕೆಂದು ಸಂಸ್ಥೆ ಯೋಚಿಸಿದ್ದು ಮದುವೆಯಾಗುವ ವಧುವಿಗೆ ಸೀರೆ, ತಾಳಿಸರ, ವರನಿಗೆ ಬಟ್ಟೆ ಇತ್ಯಾದಿಗಳನ್ನು ಸಂಸ್ಥೆಯಿಂದ ನೀಡಲಿದ್ದು ಇದರ ಜೊತೆಗೆ ಉಚಿತ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಕೈ ಹಾಕಲಿದ್ದು ಇದೊಂದು ತಾಲ್ಲೂಕಿನಲ್ಲಿ ದೊಡ್ಡ ಕಾರ್ಯಕ್ರಮವಾಗಿ ಹೊರಬರಬೆಕಾಗಿದ್ದು ಸಾಮೂಹಿಕವಾಗಿ ವಿವಾಹವಾಗುವ ಕುಟುಂಬಗಳು ಮುಂದೆ ಬಂದು ಹೆಸರು ನೊಂದಾಯಿಸಿಕೊಳ್ಳಬೇಕೆಂದು ಈ ಮೂಲಕ ಕೇಳಿಕೊಂಡರು.

ಡಾಕ್ಟರ್‌ಗಳನ್ನು ಗುರುತಿಸಿದ ಸಂಸ್ಥೆ; ಹೊಸನಗರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪ್ರತಿ ವರ್ಷ ಹಾಲಿ ಮಾಜಿ ಶಾಸಕರ ಸಂಸದರ ಗಣ್ಯ ವ್ಯಕ್ತಿಗಳ ಹೆಸರಿನಲ್ಲಿ ಹುಟ್ಟು ಹಬ್ಬಕ್ಕೆ ಎಲ್ಲ ಸಂಘ-ಸಂಸ್ಥೆಯವರು ಒಳ ರೋಗಿಗಳಿಗೆ ಹೊರ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸುವ ಕಾರ್ಯಕ್ರಮ ನಡೆಯುತ್ತಿರುತ್ತದೆ. ಆದರೆ ಆಸ್ಪತ್ರೆಯ ಡಾಕ್ಟರ್‌ಗಳನ್ನು ಗುರುತಿಸಿರುವುದು ಸರ್ವಧರ್ಮ ಸೌಹಾರ್ದ ಟ್ರಸ್ಟ್ ಮಾತ್ರ ಎಂದು ಮೂವರು ಡಾಕ್ಟರ್‌ಗಳು ಮೆಚ್ಚಿಗೆ ವ್ಯಕ್ತಪಡಿಸಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು, ಬ್ರೆಡ್ ವಿತರಿಸುವ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಲಿಂಗರಾಜು, ಡಾ. ಶಾಂತರಾಜ್, ಡಾ. ಹೇಮಂತ್, ಸರ್ವಧರ್ಮ ಸೌಹಾರ್ದ ಟ್ರಸ್ಟ್ ಉಪಾಧ್ಯಕ್ಷರಾದ ಆನೆಗದ್ದೆ ಅನಂದಗೌಡ, ಕಾರ್ಯದರ್ಶಿ ಅಶೋಕ ಹಿಂಡ್ಲೆಮನೆ, ನಿರ್ದೇಶಕಿಯಾದ ಪ್ರಮೀಳಾ, ನಾಗೇಶ, ಶೈಲಜ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!