ಯುಗಾದಿ-ರಂಜಾನ್ ಹಬ್ಬದ ಶಾಂತಿ ಸಭೆ

0 368

ರಿಪ್ಪನ್‌ಪೇಟೆ: ಹಬ್ಬ ಹರಿದಿನಗಳ ಆಚರಣೆಯಿಂದಾಗಿ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಬೆಳೆಸಲು ಸಹಕಾರಿಯಾಗುವುದೆಂದು ಹೊಸನಗರ ವೃತ್ತ ನಿರೀಕ್ಷಕ ಗುರಣ್ಣ ಹೆಬ್ಬಾಳ್ ಹೇಳಿದರು.

ರಿಪ್ಪನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಆಯೋಜಿಸಲಾದ ಯುಗಾದಿ ಮತ್ತು ರಂಜಾನ್ ಹಬ್ಬದ ಅಂಗವಾಗಿ ಪೊಲೀಸ್ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಬ್ಬಗಳ ಆಚರಣೆಯಲ್ಲಿ ಅಶಾಂತಿ ಅರಾಜಕತೆಯನ್ನು ಬೆಳೆಸುವ ಬದಲು ಶಾಂತಿ ನೆಮ್ಮದಿಯಿಂದ ಇರುವುದರೊಂದಿಗೆ ಹಿಂದು, ಮುಸ್ಲಿಂ, ಕ್ರೈಸ್ತ ಸಮುದಾಯದವರಲ್ಲಿ ಕೋಮು ಸೌಹಾರ್ದತೆಯಿಂದರಲು ಸಾಧ್ಯವೆಂದ ಅವರು, ಯುಗಾದಿ ಮತ್ತು ರಂಜಾನ್ ಹಬ್ಬವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸುವಂತೆ ಹೇಳಿದರು.

ಈ ಸಭೆಯಲ್ಲಿ ಮುಸ್ಲಿಂ ಮುಖಂಡ ಆರ್.ಎ.ಚಾಬುಸಾಬ್, ಜನಪರ ಹೋರಾಟ ವೇದಿಕೆ ಅಧ್ಯಕ್ಷ ಆರ್.ಎನ್.ಮಂಜುನಾಥ್, ಕರ್ನಾಟಕ ಪ್ರಾಂತೀಯ ಹಿಂದು ಮಹಾಸಭಾ ಸಮಿತಿಯ ಅಧ್ಯಕ್ಷ ನಾಗರಾಜ್ ಪವಾರ್, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಎಂ.ಸುರೇಶ್‌ಸಿಂಗ್, ಜುಮ್ಮಾಮಸೀದಿ ಅಧ್ಯಕ್ಷ ಮಹಮ್ಮದ್, ಹಸನಬ್, ಆಸೀಫ್‌ಭಾಷಾ, ರವೀಂದ್ರ ಕೆರೆಹಳ್ಳಿ, ಮೋಣು ಸಾಬ್, ಪೊಲೀಸ್ ಎಎಸ್‌ಐ ಮಂಜಪ್ಪ, ಜ್ಯೋತಿ ಮತ್ತು ಸಿಬ್ಬಂದಿಗಳಾದ ಉಮೇಶ್, ಶಿವಪ್ಪ ಇನ್ನಿತರ ಹಲವರು ಹಾಜರಿದ್ದರು.

ಎಎಸ್‌ಐ ಮಂಜಪ್ಪ ಸ್ವಾಗತಿಸಿದರು. ಉಮೇಶ್ ವಂದಿಸಿದರು.

Leave A Reply

Your email address will not be published.

error: Content is protected !!