ತೀರ್ಥಹಳ್ಳಿ: ದೇಶವನ್ನು ಸಂಪೂರ್ಣವಾಗಿ ಹಾಳು ಮಾಡುವ ಕೆಲಸ ಮೋದಿ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ಕಿಮ್ಮನೆ ರತ್ನಾಕರ್ ಹೇಳಿದರು.
ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದುವರೆಗೂ ದೇಶದ ನಿರುದ್ಯೋಗ ಸಮಸ್ಯೆ ನೀಗಿಸಿಲ್ಲ.
ಬದಲಾಗಿ ನಿರುದ್ಯೋಗ ಸಮಸ್ಯೆ ಹೆಚ್ಚು ಮಾಡಿದ್ದಾರೆ ಎಂದು
ರಾಜ್ಯದ ಆಡಳಿತ ಹದಗೆಟ್ಟಿದ್ದು, ಎರಡೂ ಸರ್ಕಾರಗಳನ್ನು ಕಿತ್ತೊಗೆಯಬೇಕು. ರಾಜ್ಯ ಸರ್ಕಾರ ಕೇವಲ ದುಡ್ಡು ಹೊಡೆಯುವ ಕೆಲಸ ಮಾಡುತ್ತಿದೆ. ಸರ್ಕಾರಿ ಇಲಾಖೆ ಕಚೇರಿಗಳನ್ನು ಪಕ್ಷದ ಕಚೇರಿಯನ್ನಾಗಿ ಪರಿವರ್ತಿಸಿದ್ದಾರೆ. ನಾವು ಇದುವರೆಗೂ ಯಾರು, ಯಾವ ಜಾತಿ ಎಂದು ಕೇಳಿಲ್ಲ. ನಾನು ಶಾಸಕನಾಗಿದ್ದ ವೇಳೆ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದೇನೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಇನ್ನೂ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಹರಿಹಾಯ್ದ ಕಿಮ್ಮನೆ, ಆರಗ ಜ್ಞಾನೇಂದ್ರ ಆಡಳಿತ ಹದಗೆಟ್ಟು ಹೋಗಿದೆ. ಮರಳನ್ನು ಪೊಲೀಸರು ಲಾರಿಗೆ ಹಾಕಿ ಕಳಿಸುವ ಕೆಲಸ ಮಾಡುತ್ತಿದ್ದಾರೆ. ಇದರ ವಿರುದ್ಧ ಗೃಹಮಂತ್ರಿ ಆರಗ ಜ್ಞಾನೇಂದ್ರ ಇದ್ದಾರೆ. ಆರಗ ಜ್ಞಾನೇಂದ್ರ ಕಡೆಯವರು ನಮ್ಮ ಇಬ್ಬರು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಾರೆ. ತೀರ್ಥಹಳ್ಳಿಯಲ್ಲಿ ದುರಾಡಳಿತ ನಡೆಯುತ್ತಿದೆ. ಆರಗ ಜ್ಞಾನೇಂದ್ರ ಅವಧಿಯಲ್ಲಿ ಕೇವಲ ದುರಾಡಳಿತ ನಡೆಯುತ್ತಿದೆ. ಇಂದಿನಿಂದ ಯಾರು ಮಲಗಬಾರದು. ಬಿಜೆಪಿಯನ್ನು ಸೋಲಿಸುವವರೆಗೆ ನಾನು ಮಲಗುವುದಿಲ್ಲ ಎಂದು ಎಲ್ಲರೂ ಶಪಥ ಮಾಡಿ. ನಾನು ಮಲಗುವುದಿಲ್ಲ, ನೀವು ಮಲಗಬಾರದು ಎಂದು ತೀರ್ಥಹಳ್ಳಿ ಕಾರ್ಯಕರ್ತರಿಗೆ ಕರೆ ನೀಡಿದರು.