ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಆತ್ಮಹ*ತ್ಯೆಗೆ ಶರಣು

Written by Koushik G K

Published on:

ಶಿವಮೊಗ್ಗ:ಶಿವಮೊಗ್ಗದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಶನಿವಾರ ಪತ್ನಿ ಹ*ತ್ಯೆ ಆರೋಪದ ಮೇಲೆ ವಿಚಾರಣಾಧಿಕೀನವಾಗಿ ಬಂಧಿತರಾಗಿದ್ದ ಬಸವರಾಜ್ ಎಂಬ 38 ವರ್ಷದ ಕೈದಿ, ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಘಟನೆ ಜೈಲಿನ ಶರಾವತಿ ವಾರ್ಡ್‌ನ ಕೊಠಡಿ ಸಂಖ್ಯೆ 42ರಲ್ಲಿ ನಡೆದಿದೆ. ಬಸವರಾಜ್, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನವನಾಗಿದ್ದು, ಬಳ್ಳಾರಿಯ ಗಣಿಗಳಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಜೂನ್ 11, 2025ರಂದು ಶಿಕಾರಿಪುರದ ಸೊಸೈಟಿ ಕೇರಿಯಲ್ಲಿ ತನ್ನ ಪತ್ನಿ ಮಂಜುಳಾ (32) ಅವರನ್ನು ಹ*ತ್ಯೆ ಮಾಡಿದ ಆರೋಪದ ಮೇಲೆ ಜೂನ್ 13ರಂದು ಬಂಧನಕ್ಕೊಳಗಾಗಿದ್ದ.

ಈ ಆತ್ಮಹ**ತ್ಯೆ ಘಟನೆ ಕಾರಾಗೃಹದ ಭದ್ರತೆ, ಮತ್ತು ಕೈದಿಗಳ ಮಾನಸಿಕ ಆರೋಗ್ಯದ ಮೇಲಿನ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಘಟನೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಭದ್ರತಾ ವ್ಯವಸ್ಥೆಯಲ್ಲಿದ್ದ ಜೈಲಿನಲ್ಲಿ ಈ ರೀತಿ ಒಂದು ಘಟನೆ ನಡೆಯುವುದು ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ.

ಹೂವಿನಕೋಣೆ ಶಾಲೆ ನೀರಿನ ಟ್ಯಾಂಕ್‌ಗೆ ವಿಷಪ್ರಾಶನ ತನಿಖೆ ಚುರುಕು ; ಘಟನಾ ಸ್ಥಳಕ್ಕೆ ಎಸ್‌ಪಿ ಭೇಟಿ

Leave a Comment