ಹೆಚ್‌ಐವಿ ನಿಯಂತ್ರಣಕ್ಕಾಗಿ ಶಿವಮೊಗ್ಗದಲ್ಲಿ ಬೈಕ್ ಜಾಥಾ: 2030ರೊಳಗೆ ಹೆಚ್‌ಐವಿ ಮುಕ್ತ ಭಾರತ ಗುರಿ

Written by Koushik G K

Published on:

ಶಿವಮೊಗ್ಗ:ಹೆಚ್‌ಐವಿ ಸೋಂಕಿನ ನಿಯಂತ್ರಣಕ್ಕಾಗಿ ತೀವ್ರಗೊಳಿಸಿದ ಪ್ರಚಾರಾಂದೋಲನದ ಅಂಗವಾಗಿ ಶಿವಮೊಗ್ಗದಲ್ಲಿ ಭಾನುವಾರ ಭರ್ಜರಿ ಬೈಕ್ ಜಾಥಾ ಆಯೋಜಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ತಡೆಗಟ್ಟುವ ಹಾಗೂ ನಿಯಂತ್ರಣ ಘಟಕ, ಜಿಲ್ಲಾ ಮೆಗ್ಗಾನ್ ಆಸ್ಪತ್ರೆ, ಕ್ಷಯರೋಗ ನಿಯಂತ್ರಣ ಕೇಂದ್ರ ಮತ್ತು ವಿವಿಧ ಸರ್ಕಾರೇತರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್ ಕೆ.ಎಸ್. ಅವರು ಜಾಥಾವಿಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು,“2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣ ಗುರಿ ಹೊಂದಲಾಗಿದೆ. ಹೆಚ್‌ಐವಿ ಸೋಂಕು ತಗುಲದಂತೆ ತಡೆಯುವುದು, ಅದರಿಂದಾಗುವ ಸಾವುಗಳನ್ನು ಸೊನ್ನೆಗೆ ತರುವುದು ಹಾಗೂ ತಾರತಮ್ಯ ಮತ್ತು ಕಳಂಕ ನಿವಾರಣೆ ಮಾಡುವುದು ನಮ್ಮ ಮೂರು ಪ್ರಮುಖ ಉದ್ದೇಶಗಳು. ಪ್ರತಿಯೊಬ್ಬರೂ ತಮ್ಮ ಹೆಚ್‌ಐವಿ ಸ್ಥಿತಿಯನ್ನು ತಿಳಿದುಕೊಳ್ಳಬೇಕು ಮತ್ತು ಸೋಂಕಿತರಾದವರು ಕಡ್ಡಾಯವಾಗಿ ಎಆರ್‌ಟಿ ಚಿಕಿತ್ಸೆ ಪಡೆಯಬೇಕು. ವೈರಸ್ ಲೋಡ್ ಕಡಿಮೆ ಆಗಲು ಚಿಕಿತ್ಸೆ ನಿರಂತರವಾಗಿ ಪಡೆಯುವುದು ಅತ್ಯಂತ ಮುಖ್ಯ,” ಎಂದು ಹೇಳಿದರು.

ಸಮಾಜದ ಸಹಕಾರದ ಅಗತ್ಯ

ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಸಿದ್ದನಗೌಡ ಪಾಟೀಲ್ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಹೆಚ್‌ಐವಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವುದು ಸಂತೋಷಕರ. ಆದರೆ ಸಂಪೂರ್ಣ ನಿರ್ಮೂಲನೆಗಾಗಿ ಇನ್ನಷ್ಟು ಜನಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಬೇಕು,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ನಾಗೇಶ್ ಬಿ.ಪಿ. (ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣ ಅಧಿಕಾರಿ), ಎನ್‌ಎಸಿಓ ದಿಶಾ ಸಂಯೋಜಕರು (ಬೆಂಗಳೂರು), ಮೆಗ್ಗಾನ್ ಆಸ್ಪತ್ರೆಯ ವೈದ್ಯರು, ನರ್ಸಿಂಗ್ ಸಿಬ್ಬಂದಿ, ಆಡಳಿತಾಧಿಕಾರಿಗಳು, ಡಿಎಪಿಸಿಯು ಮತ್ತು ಎನ್‌ಟಿಇಪಿ ಸಿಬ್ಬಂದಿ, ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಜಾಥಾ ಮಾರ್ಗ

ಜಾಥಾವು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಿಂದ ಆರಂಭಗೊಂಡು ಬಸ್ ನಿಲ್ದಾಣ, ಅಮೀರ್ ಅಹ್ಮದ್ ಸರ್ಕಲ್, ಗೋಪಿ ಸರ್ಕಲ್, ಕೋರ್ಟ್ ಸರ್ಕಲ್, ಡಿಸಿ ಕಚೇರಿ, ಶಿವಮೂರ್ತಿ ಸರ್ಕಲ್, ಜಿಲ್ಲಾ ಪಂಚಾಯತ್, ಜೈಲ್ ಸರ್ಕಲ್ ಹಾಗೂ ಕುವೆಂಪು ರಸ್ತೆ ಮಾರ್ಗವಾಗಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಕಚೇರಿಯಲ್ಲಿ ಸಮಾಪ್ತಗೊಂಡಿತು.

ತೀರ್ಥಹಳ್ಳಿಯಿಂದ ಸಾಗರಕ್ಕೆ ‘ಶಕ್ತಿ’ ನಿಷ್ಪ್ರಭ ; ಸರ್ಕಾರಿ ಬಸ್ ಇಲ್ಲದೆ ಮಹಿಳೆಯರು ತತ್ತರ – ಗ್ಯಾರಂಟಿ ಯೋಜನೆ ಕೇವಲ ಘೋಷಣೆಯಷ್ಟೇ !

Leave a Comment