ಸೇತುವೆ ಉದ್ಘಾಟನೆ ಬಗ್ಗೆ ಇನ್ನೂ ಅಧಿಕೃತ ಆಹ್ವಾನ ಇಲ್ಲ: ಸಚಿವ ಮಧು ಬಂಗಾರಪ್ಪ

Written by Koushik G K

Published on:

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಸೇತುವೆಯ ಉದ್ಘಾಟನೆಗೆ ಇನ್ನೂ ಅಧಿಕೃತ ಆಹ್ವಾನ ಬಂದಿಲ್ಲವೆಂದು ತಿಳಿಸಿದ್ದಾರೆ. ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, “ಸಿಗಂದೂರು ದೇವಸ್ಥಾನವನ್ನ ಮುಳುಗಿಸಲು ಹೋದವರಿಗೆ ಏನು ಹೇಳೋಣ,ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸಮಾನುಪಾತದಲ್ಲಿ ಕೆಲಸ ಮಾಡಬೇಕು. ಸೇತುವೆ ಕಾಮಗಾರಿ ಇನ್ನೂ ಸಂಪೂರ್ಣವಾಗಿಲ್ಲ. ಉದ್ಘಾಟನೆಯ ನಂತರ ಮಾತನಾಡುತ್ತೇನೆ,” ಎಂದು ಸ್ಪಷ್ಟಪಡಿಸಿದರು.

WhatsApp Group Join Now
Telegram Group Join Now
Instagram Group Join Now

ಈ ಸೇತುವೆಗಾಗಿ ಕಾಗೋಡು ತಿಮ್ಮಪ್ಪ ಹಾಗೂ ಗೋಪಾಲಕೃಷ್ಣ ಬೇಳೂರು ಹೋರಾಟ ಮಾಡಿದ್ದು, ಅವರ ಕೊಡುಗೆ ಮಹತ್ವದ್ದಾಗಿದೆ. ಅವರು ಉದ್ಘಾಟನೆ ಮುಗಿಸಿಕೊಳ್ಳಲಿ,ಅದರ ಡಿಜಿಟಲ್ ಸ್ಕ್ರೀನ್ ನಲ್ಲಿ ಹಾಕಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಟ್ಯಾಕ್ಸ್ ಹೇಗೆ ಬಂದಿದೆ ಎಂದು ಡಿಜಿಟಲ್ ನಾವು ಹಾಕಿಸುತ್ತೇವೆ ಎಂದರು.

ಸಚಿವರು ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದರು. “ಪಬ್ಲಿಸಿಟಿ ಪಡೆಯುವವರೇ ತೆರಿಗೆಯ ಬಗ್ಗೆ ಎಷ್ಟು ಮಾತನಾಡಿದ್ರಿ?ಹೇಸಿಗೆ ಇದು ಮೆಗ್ಗಾನ್ ಭೂಮಿಯನ್ನು ಸಿಮ್ಸ್ ಗೆ ಒಪ್ಪಿಸಿದ್ದು, ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ನಂತರ ಬಿಟ್ಟುಕೊಡುವುದು ಇಲ್ಲಿ ಬಿಜೆಪಿಯ ಸ್ವಭಾವವಾಗಿದೆ,” ಎಂದು ಟೀಕಿಸಿದರು.

ಜಿಲ್ಲಾ ಆಸ್ಪತ್ರೆಯನ್ನ ಮಾಡಲು ಆಗದಿದ್ದರೆ ಮೆಗ್ಗಾನ್ ಬಿಟ್ಟುಕೊಡಲಿ, ಸಿಮ್ಸ್ ಆರಂಭಗೊಂಡಾಗ ಕಾಲನಂತರ ಆಸ್ಪತ್ರೆಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬುದು ಬೈಲಾ ಇದೆ. ನೋಡೋಣ ಏನಾಗಲಿದೆ ಎಂದು ಹೇಳಿದರು.

ಆರ್‌ಎಸ್‌ಎಸ್ ಬಗ್ಗೆ ಪ್ರತಿಕ್ರಿಯೆ:

ಮೋಹನ್ ಭಾಗವತ್ ಅವರ ಹೇಳಿಕೆ ಪಕ್ಷಕ್ಕೆ ಬಿಟ್ಟಿದ್ದು, ಇದು ಮೋದಿಗೆ ಸೂಚನೆಗೆ ಎಂದು ಹೇಳಲು ಸಾಧ್ಯವಿಲ್ಲ. ಅವರ ಚಿಂತನೆಗಳು ಅವರವರಿಗೆ ಎಂದು ಸಚಿವ ತಿಳಿಸಿದರು

Leave a Comment