ಹೊಸನಗರ ; ಸೌಹಾರ್ದ ಸಹಕಾರಿಯೊಂದು ಸ್ಥಾಪನೆಗೊಂಡ ಮೂರೇ ವರ್ಷಗಳಲ್ಲಿ ಲಾಭದತ್ತ ಮುಖಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ ಆಗಿದೆ ಎಂದು ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ನ ನಿರ್ದೇಶಕ ಎಂ.ಎಂ. ಪರಮೇಶ್ವರ್ ಹರ್ಷ ವ್ಯಕ್ತಪಡಿಸಿದರು.
ಪಟ್ಟಣದ ಈಡಿಗ ಸಭಾಭವನಲ್ಲಿ ನಡೆದ ಶ್ರೀ ಜೇನುಕಲ್ಲಮ್ಮ ಸೌಹಾರ್ದ ಸಹಕಾರಿ ನಿಯಮಿತದ 2024-25ನೇ ಸಾಲಿನ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಲ್ಲಿ ಆಡಳಿತ ಮಂಡಳಿಯನ್ನು ಪ್ರಶ್ನಿಸುವ ಹಕ್ಕು ಶೇರುದಾರರಿಗಿದೆ. ಷೇರುದಾರರೇ ಸಹಕಾರಿಯ ಮಾಲೀಕರು. ಸಹಕಾರಿ ಯಾವಾಗಲೂ ಸ್ವಂತ ಬಂಡವಾಳದಿಂದ ಲಾಭಗಳಿಸಲು ಪ್ರಯತ್ನಿಸಬೇಕು. ಆಗತ್ಯ ಬಿದ್ದಲ್ಲಿ ಸಹಕಾರಿಗೆ ಜಿಲ್ಲಾ ಡಿಸಿಸಿ ಬ್ಯಾಂಕ್ ಸಕಾಲದಲ್ಲಿ ಸಾಲ ನೀಡಲು ಸಿದ್ದವಿದೆ. ಸಹಕಾರಿ ಸಂಘವು ಹಂತ-ಹಂತವಾಗಿ ಬೆಳೆಯಬೇಕು. ಈಗಾಗಲೇ ಜಿಲ್ಲೆಯಲ್ಲಿ ಡಿಢೀರನೇ ಬೆಳದು ಕೆಲವೇ ದಿನಗಳಲ್ಲಿ ಕಣ್ಮರೆಯಾಗಿರುವ ಹಲವು ಸಹಕಾರಿಗಳನ್ನು ಸಹ ಕಂಡಿದ್ದೇವೆ. ಸಹಕಾರಿ ಕ್ಷೇತ್ರದಲ್ಲಿ ಸಂಘದ ಬೆಳವಣಿಗೆ ನಿಧಾನವಿದ್ದಷ್ಟು ಸುಭದ್ರ ಹಾಗು ಶಾಶ್ವತ ಬುನಾದಿಗೆ ಕಾರಣವೆಂದರು.
ಸಂಘದ ಅಧ್ಯಕ್ಷ ಬಿ.ಜಿ.ಸತ್ಯನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಮೂರು ವರ್ಷಗಳ ಹಿಂದೆ ಕೇವಲ 300 ಸದಸ್ಯ ಬಲ ಹಾಗೂ 75 ಸಾವಿರ ರೂ. ಮೂಲ ಬಂಡವಾಳದೊಂದಿಗೆ ಆರಂಭಗೊಂಡ ಸಂಘವು ಇಂದು, ವಾರ್ಷಿಕ 2.73 ಕೋಟಿ ರೂ.ಗಳಿಗೂ ಹೆಚ್ಚು ವಹಿವಾಟು ನಡೆಸಿದ್ದು, ಮುಂಬರುವ ವರ್ಷಗಳಲ್ಲಿ ತನ್ನ ಷೇರುದಾರರಿಗೆ ಲಾಭಾಂಶ ನೀಡುವ ಹಂತ ತಲುಪಿದೆ. ಷೇರುದಾರರ ನಂಬಿಕೆ ಕಾಪಾಡುವುದು ಆಡಳಿತ ಮಂಡಳಿ ಜವಾಬ್ದಾರಿಯಾಗಿದ್ದು ಸಂಘ ಜನಸ್ನೇಹಿಯಾಗಿ ಬೆಳೆಯುವತ್ತ ದಾಪುಗಾಲು ಹಾಕಿದೆ ಎಂದರು.
ಸಂಘದ ಸಿಇಒ ಸುಮಂತ್ 2024-25ನೇ ಸಾಲಿನ ಸಂಘದ ಜಮಾ-ಖರ್ಚು, ಲಾಭ-ನಷ್ಟ ಸೇರಿದಂತೆ ಸಹಕಾರಿ ಆಸ್ತಿಗಳ ವಿವರ ನೀಡಿ, ಪ್ರಸಕ್ತ ಸಾಲಿನಲ್ಲಿ ಸಂಘವು 1,52,791 ರೂ. ಲಾಭ ಗಳಿಸಿದೆ. ಆದರೆ ಕಳೆದ ಸಾಲಿನ ನಷ್ಟಕ್ಕೆ ಅದನ್ನು ಸರಿದೂಗಿಸಲಾಗಿದೆ ಎಂಬ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ನ ಶಾಖಾ ವ್ಯವಸ್ಥಾಪಕ ವಾರಂಬಳ್ಳಿ ಹಾಲಪ್ಪ ಹಾಜರಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಪೂರ್ಣಿಮಾ ಮೂರ್ತಿರಾವ್, ನಿರ್ದೇಶಕರಾದ ಟಿ.ಎಂ. ದಿನೇಶ್, ಕುಂಬತ್ತಿ ಗಂಗಾ ದೇವರಾಜ್, ಹಿಲ್ಕುಂಜಿ ನಾಗೇಶ್, ಮಂಡ್ರಿ ನಾಗಪ್ಪ, ಯೋಗೇಂದ್ರ ಕಂಚಿಕಾರ್, ನೇರಲೆ ರಮೇಶ್ ಹಾಗು ಸಲಹ ಸಮಿತಿ ಸದಸ್ಯರಾದ ಎಂ.ಪಿ. ಲೋಕೇಶ್, ಮಸಗಲ್ಲಿ ಮಧುಸೂಧನ್, ಹಸಿರುಮನೆ ಟೀಕಪ್ಪ, ಮಂಡಾನಿ ನಿತ್ಯಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶ್ಯಾಮಲ ಗಿರೀಶ್ ಕೊಳಗಿ ಪ್ರಾರ್ಥಿಸಿ, ಮಂಡಾನಿ ದಿವಾಕರ ಸ್ವಾಗತಿಸಿ, ತೊಗರೆ ಶ್ರೀಪತಿ ಪ್ರಾಸ್ಥಾವಿಕ ಮಾತನಾಡಿದರು. ಮಂಡಾನಿ ಧನಂಜಯ ನಿರೂಪಿಸಿ, ವಂದಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.