ಹೊಂಬುಜ ಅತಿಶಯ ಶ್ರೀಕ್ಷೇತ್ರದಲ್ಲಿ ಶರನ್ನವರಾತ್ರಿ ಪೂಜಾ ಘಟ ಸ್ಥಾಪನೆ | ಶ್ರದ್ಧಾಭಕ್ತಿಯ ಆರಾಧನೆ ನೈಜ ಆಧ್ಯಾತ್ಮಿಕ ಉಪಾಸನೆ ; ಶ್ರೀಗಳು

Written by malnadtimes.com

Published on:

RIPPONPETE ; ಶ್ರದ್ಧಾ ಭಕ್ತಿಯಿಂದ ದೇವರ-ದೇವತಾ ಪೂಜಾ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳುವುದು ನೈಜ ಆಧ್ಯಾತ್ಮಕ ಉಪಾಸನೆ ಎಂದು ಅತಿಶಯ ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ಪೀಠಾಧೀಶರಾದ  ಜಗದ್ಗುರು   ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಪೂರ್ವ ಜಿನಾಗಮ ಪರಂಪರಾನುಗತ ಶ್ರೀ ಶರನ್ನವರಾತ್ರಿ ಪೂಜಾ ವಿಧಿಯಂತೆ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಘಟಸ್ಥಾಪನೆಯ ಬಳಿಕ ಪ್ರವಚನದಲ್ಲಿ ತಿಳಿಸಿ,  ಭಕ್ತವೃಂದದವರ ಪ್ರಾರ್ಥನೆಯ ಫಲಾಪೇಕ್ಷೆಯನ್ನು ದೇವರು ಕರುಣಿಸಲಿ ಎಂದು ಶುಭಾಶೀರ್ವಾದ ನೀಡಿದರು.

WhatsApp Group Join Now
Telegram Group Join Now
Instagram Group Join Now


ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನ ಮಠದಲ್ಲಿ ಆಯೋಜಿಸಲಾದ ಶರನ್ನವರಾತ್ರಿ ಪ್ರಥಮದಿನದ ಪೂಜೆಗೆ ಚಾಲನೆ ನೀಡಿ ಪ್ರಾತಃಕಾಲದಲ್ಲಿ ಕುಮಧ್ವತಿ ತೀರ್ಥದಿಂದ ಅಗ್ರೋದಕವನ್ನು ಗಜರಾಣಿ ಐಶ್ವರ್ಯ, ವಾದ್ಯಗೋಷ್ಠಿ, ಜಯಘೋಷಗಳೊಂದಿಗೆ ಸಾಲಂಕೃತ ಮೆರವಣಿಗೆಯಲ್ಲಿ ಶ್ರೀಕ್ಷೇತ್ರದ ಸಾನಿಧ್ಯಕ್ಕೆ ತರಲಾಯಿತು. ಶ್ರೀ ನೇಮಿನಾಥ ಸ್ವಾಮಿ, ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಸ್ವಾಮಿ ಸಾನಿಧ್ಯದಲ್ಲಿ ಪೂಜಾ ವಿಧಿ ನೆರವೇರಿಸಲಾಯಿತು. ಅರ್ಯಿಕ ರತ್ನ ಶ್ರೀ 105 ಶಿವಮತಿ ಮಾತಾಜಿ ಪೂಜಾ ವಿಧಿಗಳಲ್ಲಿ ಉಪಸ್ಥಿತರಿದ್ದರು.

ಅಭೀಷ್ಠವರಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿ ಶೋಭಿತಳಾಗಿ, ಸ್ವರ್ಣರಜತ ಆಭರಣಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ಪುಷ್ಪ-ಫಲಗಳಿಂದ ಅಲಂಕಾರ ಮಾಡಲಾಗಿತ್ತು. ಅಷ್ಟವಿಧಾರ್ಚನೆಯನ್ನು ಭಕ್ತರ ಜಿನಭಜನೆ ವಾದ್ಯಗೋಷ್ಠಿಯೊಂದಿಗೆ ನೆರವೇರಿಸಲಾಯಿತು. ರಾತ್ರಿ ಅಷ್ಟವಧಾನದ ಮೂಲಕ ಜಿನಾಲಯದ ಪ್ರದಕ್ಷಿಣಾ ಪಥದಲ್ಲಿ ಉತ್ಸವಗಳಲ್ಲಿ ಭಕ್ತರು ಭಾಗಿಯಾದರು. ಊರ ಪರವೂರ ಭಕ್ತರು, ಶ್ರೀ ಪದ್ಮಾವತಿ ಮಹಿಳಾ ಮಂಡಲದ ಸದಸ್ಯೆಯರು ಇದ್ದರು.

ಆಕರ್ಷಕ ದೀಪಾಲಂಕಾರ ಗಮನ ಸೆಳೆಯುವಂತಿತ್ತು. ಪೂಜ್ಯ ಸ್ವಾಮೀಜಿಯವರು ಶ್ರೀ ಮಂತ್ರಾಕ್ಷತೆ ನೀಡಿ ಹರಸಿದರು.

ಅ.09 ಬುಧವಾರ-ಸರಸ್ವತಿ ಪೂಜೆ, ಅ. 10 ಗುರುವಾರ-ಜೀವದಯಾಷ್ಟಮಿ, ಅ. 11 ಶುಕ್ರವಾರ-ಆಯುಧಪೂಜೆ, ಅ. 12 ಶನಿವಾರ-ವಿಜಯದಶಮಿ ಉತ್ಸವ, ಶ್ರೀದೇವಿ ಪಲ್ಲಕ್ಕಿ ಉತ್ಸವ, ಪರಮಪೂಜ್ಯ ಸ್ವಸ್ತಿಶ್ರೀಗಳವರ ಸಿಂಹಾಸನಾರೋಹಣ ಹಾಗೂ ಶ್ರೀಗಳವರ ಪಾದಪೂಜೆ ಕಾರ್ಯಕ್ರಮಗಳು ನೆರವೇರಲಿದೆ.

ಸರ್ವ ಭಕ್ತವೃಂದದವರು ಶರನ್ನವರಾತ್ರಿ ಪೂಜಾ ವಿಧಿಗಳಲ್ಲಿ ಪಾಲ್ಗೊಂಡು ಪುಣ್ಯಭಾಗಿಗಳಾಗುವಂತೆ ಅಪೇಕ್ಷಿಸಲಾಗಿದೆ.

Leave a Comment