ರಿಪ್ಪನ್‌ಪೇಟೆ ; ಅತಿಶಯ ಶ್ರೀಕ್ಷೇತ್ರ ಹೊಂಬುಜದ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಅಧಿದಾಏವತೆ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ವಾರ್ಷಿಕ ರಥೋತ್ಸವದ ಅಂಗವಾಗಿ ತೃತೀಯ ದಿನದಂದು ಕಲಾತ್ಮಕ ಬೆಳ್ಳಿ ರಥೋತ್ಸವವು ನಿತ್ಯವಿಧಿಗಳ ಬಳಿಕ ಶ್ರೀವಿಹಾರಕ್ಕೆ ಹೊರಟಿತು. ಜತೆಗೆ ಸಂಪ್ರದಾಯದಂತೆ ಸಾಲಾಂಕೃತ ಶೋಭಾಯಾತ್ರೆಯಲ್ಲಿ ಪುಷ್ಪ ರಥೋತ್ಸವವು ಊರ ಪರವೂರ ಭಕ್ತರ ಪಾಲ್ಗೊಳ್ಳುವಿಕೆಯಿಂದ ನಡೆಯಿತು.

ಹೊಂಬುಜ ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಪ್ರಾತಃಕಾಲ ನಿತ್ಯವಿಧಿ ಸಹಿತ ಜಲಾಗ್ನಿ ಹೋಮ, ಶಾಂತಿಚಕ್ರಾರಾಧನೆ, ಶ್ರೀ ಬಲಿ ನಡೆಯಿತು.

ಗಣಾಧಿಪತಿ ಗಣಧರಾಚಾರ್ಯ ಶ್ರೀ 108 ಕುಂಥುಸಾಗರ ಮಹಾರಾಜರ ಸಸಂಘದ ಮುನಿಶ್ರೀಯವರು, ಆರ್ಯಿಕೆಯರ ದಿವ್ಯ ಉಪಸ್ಥಿತಿಯಲ್ಲಿ ಜಿನಾಗಮೋಕ್ತ ವಿಧಿ-ವಿಧಾನಗಳು ಜರುಗಿದವು.

ಸರೋಜ್, ಸರಿತಾ ನವೀನ್ ಬಗಡಾ, ಸೇಲಂ, ಗೌಹಾಟಿಯ ರಾಜೇಂದ್ರ, ಸುಮನ್ ಛಾಬ್ರಾ, ಪ್ರತೀಕ್, ನಕುಲ್ ಜೈನ್ ಛಾಬ್ರಾ ಪೂಜಾ ಮತ್ತು ಭೋಜನ ಸೇವಾ ಕರ್ತೃಗಳಾಗಿ ಪಾಲ್ಗೊಂಡರು. ವಾದ್ಯ, ಅಷ್ಟಾವದಾನ, ಶ್ರೀಬಲಿ ವಿಧಾನಗಳಲ್ಲಿ ಭಕ್ತರು ಶ್ರೀ ಪಾರ್ಶ್ವನಾಥ ತೀರ್ಥಂಕರ್ ಕೀ ಜೈನ್, ಪದ್ಮಾವತಿ ಮಾತಾ ಕೀ ಜೈ ಎಂದು ಭಕ್ತಿಭಾವದಲ್ಲಿ ಜಯಕಾರ ಹಾಕಿದರು.

ಪುಷ್ಪರಥೋತ್ಸವದ ಸಂಜೆಯ ಉಪಹಾರದ ಸೇವಾಕರ್ತರಾಗಿ ಶಿವಮೊಗ್ಗದ ನಾಗರತ್ನಮ್ಮ ವಿ.ಪಿ. ಶಾಂತರಾಜ್, ಮೇಘ ಸಿದ್ಧಾರ್ಥ ಮತ್ತು ಮೊಮ್ಮಕ್ಕಳು ಪೂಜೆ ಮತ್ತು ರಥಯಾತ್ರೆಯಲ್ಲಿ ಉಪಸ್ಥಿತರಿದ್ದರು.