HOSANAGARA ; ತಾಲೂಕಿನ ಸೊನಲೆ ಸರ್ಕಾರಿ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಎನ್.ಆರ್. ಮನೋಜ್ ಅಲಿಯಾಸ್ ಮನು ಸೋಮವಾರ ಶಾಲೆಗೆ ತೆರಳಿದ್ದು ಮಧ್ಯಾಹ್ನ 12:45 ರ ವೇಳೆಗೆ ಶಾಲೆಯಿಂದ ಹೊರ ಬಂದಿದ್ದು ಶಾಲಾ ಅವಧಿ ಮುಗಿದು ಸಂಜೆಯಾದರೂ ಮಗ ಮನು ಮನೆಗೆ ಬಾರದ ಕಾರಣ ಪೋಷಕರು ಶಾಲೆಯಲ್ಲಿ, ಅಕ್ಕ-ಪಕ್ಕದ ಸಹಪಾಠಿಗಳ ಮನೆಗಳಲ್ಲಿ ವಿಚಾರಿಸಿದಾಗ ಮಧ್ಯಾಹ್ನದವರಿಗೂ ಶಾಲೆಗೆ ಬಂದಿದ್ದು ಮಧ್ಯಾಹ್ನ ನಂತರ ನಾಪತ್ತೆಯಾಗಿದ್ದು ತಿಳಿದು ಆತಂಕಗೊಂಡಿದ್ದಾರೆ.
ಸಂಬಂಧಿಕರಲ್ಲಿ ಪರಿಚಯಸ್ಥರಲ್ಲಿ ವಿಚಾರಿಸಿದಾಗ ಆತನ ಬಗ್ಗೆ ಎಲ್ಲೂ ಸುಳಿವು ಸಿಕ್ಕದೆ ವಿಚಲಿತರಾಗಿ ಮಂಗಳವಾರ ಮಧ್ಯಾಹ್ನ ಹೊಸನಗರ ಪೊಲೀಸ್ ಠಾಣೆಗೆ ತೆರಳಿ ಮಗ ಮನು ನಾಪತ್ತೆಯಾದ ಬಗ್ಗೆ ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕಟ್ಟೆ ಗ್ರಾಮದ ಬೇಹಳ್ಳಿಯ ರವಿ ಹಾಗೂ ಶಶಿಕಲಾ ಮಗನನ್ನು ಹುಡುಕಿ ಕೊಡುವಂತೆ ದೂರು ನೀಡಿದ್ದಾರೆ.
ನಾಪತ್ತೆಯಾದವನ ಚರಹೆ ;
5.7 ಅಡಿ ಎತ್ತರದ ಮನೋಜ್ ಅಲಿಯಾಸ್ ಮನು ಶಾಲೆಗೆ ಹೋಗುವಾಗ ಕಪ್ಪು ಬಿಳಿ ಬಣ್ಣದ ರೌಂಡ್ ನೆಕ್ ಟಿ-ಶರ್ಟ್ ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು ಬಿಳಿ ಮೈಬಣ್ಣ ಹೊಂದಿದ್ದಾಗಿ ದೂರಿನಲ್ಲಿ ತಿಳಿಸಿ, ಮಗನನ್ನು ಪತ್ತೆ ಮಾಡಿಕೊಡುವಂತೆ ಪೋಷಕರು ಕೋರಿದ್ದಾರೆ.
ಹೊಸನಗರ ಠಾಣೆಯ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈತನ ಬಗ್ಗೆ ಸುಳಿವು ಸಿಕ್ಕವರು 8660871194, 7760682542, 9591218245, 9481676073 ಈ ಮೊಬೈಲ್ ಸಂಖ್ಯೆಗಳಿಗೆ ಮಾಹಿತಿ ನೀಡಬೇಕೆಂದು ಕೋರಿದ್ದಾರೆ.