ತೀರ್ಥಹಳ್ಳಿ ; ರಂಜದಕಟ್ಟೆ ಸಮೀಪ ಕಳುವಾಗಿದ್ದ 10 ಲಕ್ಷ ರೂ. ಮೌಲ್ಯದ ಗೂಡ್ಸ್ ವಾಹನ ಮತ್ತು 29 ಲಕ್ಷ ರೂ. ನಗದನ್ನು ತೀರ್ಥಹಳ್ಳಿ ಪೊಲೀಸರು ಪ್ರಕರಣ ನಡೆದು 12 ಗಂಟೆಯೊಳಗೆ ವಶಪಡಿಸಿಕೊಂಡ ಘಟನೆ ಶನಿವಾರ ನಡೆದಿದೆ.
ಏನಿದು ಘಟನೆ ?
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮೂಲದ ಮಹಮ್ಮದ್ ಇರ್ಷಾದ್ ಅವರು ಶುಕ್ರವಾರ ಗೂಡ್ಸ್ ವಾಹನದಲ್ಲಿ 29 ಲಕ್ಷ ರೂ. ಇಟ್ಟು, ಲಾಕ್ ಮಾಡಿ ಮಧ್ಯಾಹ್ನ ನಮಾಜ್‌ಗಾಗಿ ಮಸೀದಿಗೆ ತೆರಳಿದ್ದರು. ವಾಪಾಸ್ ಬಂದು ನೋಡಿದಾಗ ಗೂಡ್ಸ್ ವಾಹನ ಮತ್ತು ಹಣ ಕಳುವಾಗಿತ್ತು. ಈ ಸಂಬಂಧ ಅವರು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಾದ ಸೈಯದ್ ಅಬ್ದುಲ್ಲಾ, ನವೀದ್ ಅಹಮದ್, ಜಾವಿದ್ ಅವರನ್ನು ಬಂಧಿಸಿ, ಆರೋಪಿತರಿಂದ 29 ಲಕ್ಷ ರೂ. ನಗದು, ಗೂಡ್ಸ್ ವಾಹನ, ಟಯೋಟಾ ಕಾರು, ಸೇರಿ ಒಟ್ಟು 45 ಲಕ್ಷ ಮೌಲ್ಯದ ಹಣ ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್ಪಿ ಅರವಿಂದ್ ಕುಲಗುಜ್ಜಿ ನೇತೃತ್ವದದಲ್ಲಿ ಪಿಐ ಇಮ್ರಾನ್ ಬೇಗ್, ಪಿಎಸ್‌ಐ ಶಿವನಗೌಡ, ಎಎಸ್‌ಐ ಲೋಕೇಶಪ್ಪ, ಸಿಬ್ಬಂದಿಗಳಾದ ಲಿಂಗೇಗೌಡ, ರಾಜಶೇಖರ್ ಶೆಟ್ಟಿಗಾರ್, ರವಿ, ಪ್ರದೀಪ್, ಸುರೇಶ್ ನಾಯ್ಕ್, ಪ್ರಮೋದ್, ದೀಪಕ್, ಮಂಜುನಾಥ, ರಾಘವೇಂದ್ರ, ಕರ್ಣೇಶ್, ಅವಿನಾಶ್ ಕಾರ್ಯಾಚರಣೆ ನಡೆಸಿದ್ದರು.