ತುಂಗಾ ಸೇತುವೆ ಮೇಲೆ ತಾಳಗುಪ್ಪ – ಮೈಸೂರು ರೈಲಿನ ಬೋಗಿ ಬೇರ್ಪಟ್ಟು ಆತಂಕ !

Written by Koushik G K

Updated on:

ಶಿವಮೊಗ್ಗ, ಆ.6: ಇಂದು ಶಿವಮೊಗ್ಗದಿಂದ ಮೈಸೂರು ಕಡೆಗೆ ಹೊರಟ್ಟಿದ್ದ ರೈಲಿನಲ್ಲಿ ತಾಂತ್ರಿಕ ದೋಷ ಸಂಭವಿಸಿ ತುಂಗಾ ನದಿಯ ಸೇತುವೆ ಮೇಲೆ ಒಂದಿಷ್ಟು ಬೋಗಿಗಳು ರೈಲಿನಿಂದ ಬೇರ್ಪಟ್ಟ ಘಟನೆ  ಶಿವಮೊಗ್ಗದ ಹೊಳೆ ಬಸ್​ ಸ್ಟಾಪ್​ ಬಳಿಯಲ್ಲಿ ಸಂಭವಿಸಿದೆ. 

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಘಟನೆ ವಿವರ:

ಶಿವಮೊಗ್ಗ ಟೌನ್ ರೈಲು ನಿಲ್ದಾಣದಿಂದ ಹೊರಟಿದ್ದ ಮೈಸೂರು ರೈಲು, ತುಂಗಾ ನದಿಯನ್ನು ದಾಟುತ್ತಿದ್ದಾಗ ಸೇತುವೆ ಮಧ್ಯದಲ್ಲಿ ಪ್ಯಾಸೆಂಜರ್ ಬೋಗಿ ರೈಲುನಿಂದ ಬೇರ್ಪಟ್ಟದೆ , ಆ ಬೋಗಿ ಮಿಕ್ಕ ರೈಲಿನಿಂದ ಬೇರ್ಪಟ್ಟ ಪರಿಣಾಮ, ಘಟನೆಯಲ್ಲಿ ರೈಲಿನ ಒಂದಷ್ಟು ಬೋಗಿಗಳು ಸೇತುವೆ ಮೇಲೆ ನಿಂತಿದ್ದವು. ಇನ್ನೊಂದಿಷ್ಟು ಬೋಗಿಗಳು ಮಲ್ಲೇಶ್ವರ ರೈಲ್ವೆ ಕ್ರಾಸಿಂಗ್​ನಲ್ಲಿ ನಿಂತಿದ್ದವು ಮತ್ತು ತಾತ್ಕಾಲಿಕ ತುರ್ತು ಕ್ರಮ ಕೈಗೊಳ್ಳಲಾಯಿತು.

ಈ ಘಟನೆ ಬಳಿಕ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸದಿರುವುದು ಭದ್ರತಾ ಸಿಬ್ಬಂದಿಗೆ ನೆಮ್ಮದಿ ತಂದಿದೆ,ಸುಮಾರು 1 ಗಂಟೆ ತಡವಾಗಿ ರೈಲು ಮೈಸೂರಿಗೆ ಹೊರಟಿದೆ .

Talaguppa – Mysore train carriage separation

Leave a Comment