RIPPONPETE ; ತಳಲೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಳಲೆ ಹೆಚ್.ಎಸ್.ದಿನೇಶ್ ತಂಡ ಭರ್ಜರಿ ಗೆಲುವಿನೊಂದಿಗೆ ಆಡಳಿತದ ಚುಕ್ಕಾಣಿ ಹಿಡಿಯಲು ಯಶಸ್ವಿಯಾಗಿದ್ದಾರೆ.
ಸಾಮಾನ್ಯ ಸಾಲಗಾರ ಕ್ಷೇತ್ರದಿಂದ ಹೆಚ್.ಎಸ್.ದಿನೇಶ್‌ಗೌಡ, ಹೆಚ್.ಎಸ್.ಗಂಗಾಧರ ಹಾರಂಬಳ್ಳಿ, ಕೆ.ಜಿ.ಬಸಪ್ಪ ದೋಬೈಲು, ಈ.ಡಿ.ಮಂಜುನಾಥ ಕಲ್ಲೂರು, ಹೆಚ್.ಎನ್.ಅಭಿಷೇಕ ಹೆದ್ದಾರಿಪುರ, ಬಿಸಿಎಂ ಎ ಯಿಂದ
ಕೆ.ಆರ್
ಮಂಜುನಾಥ
ಕಳಸೆ,
ಬಿಸಿಎಂ
ಬಿ ಯಿಂದ ಕೆ.ಎಸ್.ಲೋಕಪ್ಪಗೌಡ ಕಲ್ಲೂರು, ಸಾಲಗಾರರಲ್ಲದ ಕ್ಷೇತ್ರದಿಂದ ಡಾಕಪ್ಪ ಕಲ್ಲೂರು, ಎಸ್.ಟಿ. ಕ್ಷೇತ್ರದಿಂದ ಗಣೇಶ ಬೆಳ್ಳೂರು, ಮಹಿಳಾ ಮೀಸಲು ಕ್ಷೇತ್ರದಿಂದ ಗೌರಮ್ಮ ತಳಲೆ, ಶೇಷಮ್ಮ ತಳಲೆ ಇವರು ಅತಿ ಹೆಚ್ಚು ಮತ ಗಳಿಸುವ ಮೂಲಕ ಭರ್ಜರಿ ಜಯಗಳಿಸಿದ್ದಾರೆ.
ಅಭಿನಂದನೆ :
ಕಳೆದ ಮೂರು ಬಾರಿಯಲ್ಲಿ ತಳಲೆ ಹೆಚ್.ಎಸ್.ದಿನೇಶಗೌಡ ತಳಲೆ ಸಹಕಾರ ಸಂಘದ ಅಧ್ಯಕ್ಷರಾಗಿ ಸಂಘವನ್ನು ಲಾಭದತ್ತ ತರುವುದರೊಂದಿಗೆ ರೈತರ ಬ್ಯಾಂಕ್ ಎಂಬ ನಾಮದ್ಯೇಯದ ಮೂಲಕ ತಮ್ಮ ಪ್ರಮಾಣಿಕ ಸೇವೆಯನ್ನು ಸಲ್ಲಿಸುವುದರೊಂದಿಗೆ ಮತದಾರರ ಮನಸ್ಸು ಗೆಲುವುದರಲ್ಲಿ ಯಶಸ್ವಿಯಾಗಿದ್ದಾರೆಂದು ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಪರಮೇಶ್ ಹೇಳಿ ಅಭಿನಂದಿಸಿದರು.
ಸಹಕಾರ ಭಾರತಿಯವರು ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸುವ ಮೂಲಕ ಬಾರಿ ಸ್ಪರ್ಧೆಯನ್ನು ನೀಡಲು ಮುಂದಾಗಿ ಹಣ ಜಾತಿ ರಾಜಕಾರಣವನ್ನು ಮುಂದೆ ಮಾಡಿ ಎಷ್ಟೇ ಪ್ರಯತ್ನಿಸಿದರೂ ಮತದಾರರು ಮಾತ್ರ ಸಹಕಾರ ಸಂಘದಲ್ಲಿ ಜಾತಿ ಹಣ ಯಾವುದನ್ನು ಪರಿಗಣಿಸದೇ ಪ್ರಾಮಾಣಿಕತೆಗೆ ಹೆಚ್ಚು ಒತ್ತು ನೀಡುವ ಮೂಲಕ ಸಂಘದ ಸರ್ವೋತ್ತಮ ಪ್ರಗತಿಗೆ ದಿನೇಶಗೌಡ ಬೆಂಬಲಿತ ನಿರ್ದೇಶಕರ ತಂಡವನ್ನು ಭರ್ಜರಿ ಜಯ ಗಳಿಸುವಂತೆ ಮಾಡಿದ್ದಾರೆಂದರು.
ಈ ಸಂದರ್ಭದಲ್ಲಿ ಕಲ್ಲೂರು ಈರಪ್ಪ ಮತ್ತು ಸಂಘದ ನೂತ ಆಡಳಿತ ಮಂಡಳಿ ನಿರ್ದೇಶಕರು ಹಾಜರಿದ್ದರು.