ರಿಪ್ಪನ್‌ಪೇಟೆ ; ಅಮೃತ ಸಂಚಲನ ಯುವ ವೇದಿಕೆ ವತಿಯಿಂದ ಗರ್ತಿಕೆರೆಯಲ್ಲಿ ನಾಳೆ (ನ.04) ಮಾತೃನುಡಿ 13ನೇ ವರ್ಷದ ಕರುನಾಡ ಹಬ್ಬ ಏರ್ಪಡಿಸಲಾಗಿದೆ.
ಬೆಳಗ್ಗೆ 9.30ಕ್ಕೆ ಬಿ.ಎಸ್ ಪುರುಷೋತ್ತಮ್ ವೃತ್ತದಲ್ಲಿ ಕನ್ನಡ ಧ್ವಜಾರೋಹಣವನ್ನು ನಿವೃತ್ತ ಶಿಕ್ಷಕ ದೇವೇಂದ್ರಪ್ಪ ಬಿ ಬಸವಾಪುರ ನೆರವೇರಿಸಲಿದ್ದಾರೆ.
ಕಾರ್ಯಕ್ರಮಗಳು ;
ಸಂಜೆ 6:30ಕ್ಕೆ ಗರ್ತಿಕೆರೆ ಹೆಚ್. ಶಂಕರ್‌ರಾವ್ ರಂಗಮಂದಿರದಲ್ಲಿ ‘ನಾವು ನಮ್ಮವರು’ ಉದ್ಘಾಟನಾ ನೃತ್ಯ, ಕೆ.ಪಿ.ಎಸ್ ಅಮೃತ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜು ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 7:30ಕ್ಕೆ ‘ಕನ್ನಡ ಜ್ಯೋತಿ’ ಕರುನಾಡಿಗೆ ಬೆಳಕಿನ ಮೌನ ನಮನ ರಾತ್ರಿ 08:00 ಗಂಟೆಗೆ ಕಲಾಸಂಗಮ ಕಲಾವಿದರಿಂದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ದೇಶ-ವಿದೇಶದಲ್ಲಿ ಅತಿ ಹೆಚ್ಚು ಪ್ರದರ್ಶನಗೊಂಡ ಅಮೋಘ ಕನ್ನಡ ನಾಟಕ ‘ಶಿವದೂತ ಗುಳಿಗ‘ ಕಾರ್ಯಕ್ರಮಗಳು ಜರುಗಲಿವೆ ಎಂದು ಆಯೋಜಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





