ಹೊಸನಗರ ; ಕುಂಬಾರ ಜನಾಂಗದವರು ಅತ್ಯಂತ ಪ್ರಾಮಾಣಿಕದಿಂದ ಜೀವನ ನಡೆಸುತ್ತಿರುವುದು ಸಮಾಜಕೊಂದು ಕೊಡುಗೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಅವರು ಇಂದು ಮೇಲಿನಬೆಸಿಗೆ ಗ್ರಾ.ಪಂ ವ್ಯಾಪ್ತಿಯ ಹೇರಗಲ್ಲಿನಲ್ಲಿ ನಡೆದ ಹೊಸನಗರ ತಾಲೂಕು ಕುಂಬಾರರ ಸಂಘದ 18ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಇಂದಿನ ಫೈಬರ್, ಪ್ಲಾಸ್ಟಿಕ್ ಯುಗದಲ್ಲಿ ಕುಂಬಾರಿಕೆ ವ್ಯಕ್ತಿಗೆ ದೊಡ್ಡ ಪೆಟ್ಟು ಬಿದ್ದಿದ್ದು ಕುಂಬಾರ ಕುಟುಂಬದವರ ಜೀವನ ಶೈಲಿ ಅಯೋಮಯವಾಗಿದ್ದರು ಈಗ ಕುಟುಂಬದ ಯುವಕ-ಯುವತಿಯರು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು.

ಈ ಸಮಾರಂಭದಲ್ಲಿ ಜನಾಂಗದ ಹಿರಿಯರನ್ನು ಗುರುತಿಸಿ ಗೌರವಿಸುತ್ತಿರುವುದರ ಜೊತೆಗೆ ಸಾಧಕ ವ್ಯಕ್ತಿಗಳನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುತ್ತಿರುವ ಕಾರ್ಯ ತ್ಯಾಗೀಯವಾಗಿದೆ ಎಂದರು.
ತಾಲೂಕು ಸಂಘದ ಅಧ್ಯಕ್ಷ ಹಿಂಡ್ಲೆಮನೆ ಎಲ್. ಶೇಖರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಉಪಾಧ್ಯಕ್ಷೆ ಪೂರ್ಣಿಮಾ ಸೋಮಶೇಖರ್, ಸದಸ್ಯರಾದ ಜ್ಯೋತಿ ನಾಗರಾಜ್, ಜಿ. ನಾಗರಾಜ್, ಎನ್ ಸತೀಶ್, ಕೆ ಅರವಿಂದ, ಗಣಪತಿ, ಕುಮಾರ, ಎಚ್.ವಿ ಗಣೇಶ್ ಯೋಗೇಂದ್ರ ಎಂ.ಎನ್, ಮಂಜಪ್ಪ, ಸರಿತಾ ವಾಸುದೇವ, ದುಗ್ಗಪ್ಪ, ದೇವೇಂದ್ರ, ಪಾರ್ವತಮ್ಮ ರಮೇಶ, ಉಮೇಶ ಮೊದಲಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಸಮಾಜದ ಹಿರಿಯರಾದ ಹೇರಗಲ್ಲು ಹೊನ್ನಮ್ಮ, ದೊಡ್ಮನೆ ವೆಂಕಟೇಶರನ್ನು ರಾಜ್ಯ ಮಟ್ಟದ ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾವಂತರಿಗೆ ಹಾಗೂ ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರ ಸಿಆರ್‌ಪಿ ರವಿ ಕೆ.ಆರ್ ಉಪನ್ಯಾಸ ನೀಡಿದರು. ಕು. ನಂದಿನಿ ಸ್ವಾಗತ ನೃತ್ಯ ಅಭಿನಯಿಸಿದರು. ಎನ್ ಅಮೂಲ್ಯ ಹಾಗೂ ಕೆ ಸ್ನೇಹ ವಾರ್ಷಿಕ ವರದಿ ಓದಿದರು. ರೇವತಿ ರಾಜು ಸ್ವಾಗತಿಸಿದರು. ಜಿ ಪ್ರವೀಣ ಅಭಾರ ಮನ್ನಿಸಿದರು.