‘ಕುಂಟ’ ಎಂದಿದಕ್ಕೆ ಸಹೋದರನನ್ನೇ ಇರಿದು ಕೊಂ*ದೇ ಬಿಟ್ಟ !

Written by Mahesha Hindlemane

Published on:

ಶಿವಮೊಗ್ಗ ; ವಿನೋಬನಗರದ ಎಪಿಎಂಸಿ ಯಾರ್ಡ್ ಬಳಿಯ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಇರಿಯಲಾಗಿದ್ದು ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾ*ವನ್ನಪ್ಪಿರುವ
ಘಟನೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಬನ್ನಿಕೋಡು ಗ್ರಾಮದ ಜನಾರ್ಧನ
(26) ಎಂಬ ಯುವಕನ ಮೇಲೆ ಹನುಮಂತ ಎಂಬ ವ್ಯಕ್ತಿ ನಿನ್ನೆ ರಾತ್ರಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾನೆ. ತೀವ್ರ ಇರಿತಕ್ಕೊಳಗಾದ ಯುವಕನನ್ನು ಶಿವಮೊಗ್ಗದ
ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ
ಫಲಕಾರಿಯಾಗದೆ ಇಂದು ಬೆಳಿಗ್ಗೆ ಜನಾರ್ಧನ
ಸಾ*ವನ್ನಪ್ಪಿದ್ದಾನೆ.

ಕುಂಟ ಎಂದಿದಕ್ಕೆ ಕೊ*ಲೆ !

ಜನಾರ್ಧನ ಮತ್ತು ಹನುಮಂತ ಇಬ್ಬರು ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳು. 5 ವರ್ಷಗಳ ಹಿಂದೆ ಸೇವಾಲಾಲ್ ಜಯಂತಿಗೆ ಸಹೋದರರಿಬ್ಬರೂ ತೆರಳಿದ್ದರು. ಈ ವೇಲೆ ಅಪಘಾತದಲ್ಲಿ ಹನುಮಂತನ ಕಾಲಿಗೆ ಪೆಟ್ಟಾಗಿತ್ತು. ಅಂದಿನಿಂದ ಹನುಮಂತ ಕುಂಟುತ್ತಾ ನಡೆಯುತ್ತಿದ್ದ. ಇದರಿಂದ ಜನಾರ್ಧನ ಸೇರಿ ಎಲ್ಲರೂ ಆತನನ್ನು ಕುಂಟ-ಕುಂಟ ಎಂದು ಲೇವಡಿ ಮಾಡುತ್ತಿದ್ದರು.

ತನ್ನನ್ನು ಅಪಹಾಸ್ಯ ಮಾಡುತ್ತಿರುವುದಕ್ಕೆ ಜೊತೆಗೆ ಹಳೇ ದ್ವೇಷದ ಕಾರಣಕ್ಕೆ ಕೋಪಗೊಂಡಿದ್ದ ಹನುಮಂತ, ಜನಾರ್ಧನನ್ನು ಮಾತನಾಡುವುದಿದೆ ಬಾ ಎಂದು ಕರೆದಿದ್ದ. ಜನಾರ್ಧನ ಬರುತ್ತಿದ್ದಂತೆ ಮಾತಿಗೆ ಮಾತು ಬೆಳೆಸಿ ಚಾಕುವಿನಿಂದ ಆತನ ಹೊಟ್ಟೆ, ಎದೆಯ ಭಾಗಕ್ಕೆ ಇರಿದು ಪರಾರಿಯಾಗಿದ್ದ. ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಜನಾರ್ಧನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾ*ವನ್ನಪ್ಪಿದ್ದಾನೆ.

ಹನುಮಂತನನ್ನು ನಿನ್ನೆ ರಾತಿಯೇ ವಿನೋಬನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Comment