SHIKARIPURA ; ವ್ಯಕ್ತಿಯೊರ್ವನನ್ನ ದುಷ್ಕರ್ಮಿಗಳು ಮನಸೋಇಚ್ಛೆ ಕೊಚ್ಚಿ ಕೊಲೆ ಮಾಡಿ ನದಿಗೆ ಎಸೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ನಾಗೀಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೃಷ್ಣಪ್ಪ (33) ಎಂಬುವವರು ಕೊಲೆಯಾದ ದುರ್ದೈವಿ. ಮದ್ಯ ಕುಡಿಸಿ, ಕಂದ್ಲಿ, ಕುಡುಗೋಲು ಮತ್ತು ಪ್ಲಾಸ್ಟಿಕ್ ಕೊಪ್ಪೆಗಳನ್ನ ಬಳಸಿ, ಕೃಷ್ಣಪ್ಪನನ್ನು ಕತ್ತರಿಸಿ ಕೊಲೆ ಮಾಡಿ ಬಳಿಕ ಎರಡು ಪ್ಲಾಸ್ಟಿಕ್ ಚೀಲಗಳಿಗೆ ಅಂಗಾಂಗಗಳನ್ನ ತುಂಬಿಕೊಂಡು ಬಳಿಕ ಶವ ಚೀಲವನ್ನ ಹಿಡಿದು ಕೊರಟೆಗೆರೆ, ಚಿಕ್ಕರೂರು, ಬಾರಂಗಿ ಮೂಲಕ ಗೋಂದಿ ಬ್ರಿಡ್ಜ್ ಬಳಿಯ ನದಿಗೆ ಶವದ ತುಂಡುಗಳನ್ನು ಸುರಿದು ಕಿರಣ್ ಮತ್ತು ಆತನ ಸ್ನೇಹಿತರಾದ ಗಣೇಶ್, ಪ್ರತಾಪ್ ಎಸ್ಕೇಪ್ ಆಗಿದ್ದಾರೆ.
ಕಿರಣ್ ಎಂಬಾತ ಕೃಷ್ಣಪ್ಪನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಈ ಸಂಬಂಧ ಕೃಷ್ಣಪ್ಪ, ಕಿರಣ್ ನನ್ನು ಕರೆದು ಬೈದು ವಾರ್ನಿಂಗ್ ಸಹ ಮಾಡಿದ್ದರು. ಸಂಶಯದ ಮೇರೆಗೆ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.
ಈ ಘಟನೆ ಸಂಬಂಧ ಕಳೆದ ಮೂರು ದಿನಗಳ ಹಿಂದೆಯೇ ಕೃಷ್ಣಪ್ಪ ಪತ್ನಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಶಿರಾಳಕೊಪ್ಪ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.