ರಿಪ್ಪನ್‌ಪೇಟೆ ; ಕೊಪ್ಪಳ ಗವಿಸಿದ್ದೇಶ್ವರಮಠದ ಪೀಠಾಧ್ಯಕ್ಷರಾದ ಅಭಿನಯ ಮಹಾಸ್ವಾಮೀಜಿಯವರು ಶಿವಮೊಗ್ಗದ ಬೆಕ್ಕಿನಕಲ್ಮಠದಕ್ಕೆ ಭೇಟಿ ನೀಡಿ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸಮಾಲೋಚನೆ ನಡೆಸಿದರು.
ಆನಂದಪುರ ಮುರುಘಾರಾಜೇಂದ್ರ ಮಠ ಮತ್ತು ಶಿವಮೊಗ್ಗ ಬೆಕ್ಕಿನಕಲ್ಮಠದ ಪೀಠಾಧ್ಯಕ್ಷರಾದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಮಹಾಸ್ವಾಮೀಜಿಯವರು ಸನ್ಮಾನಿಸಿ ಅಭಿನಂದಿಸಿ ನಂತರ ಮಠದ ಆಭಿವೃದ್ದಿ ಕಾರ್ಯಗಳ ಕುರಿತು ಸಾಕಷ್ಟು ಚರ್ಚೆ ನಡೆಸಿದರು.
ಅತಿಕ್ರಮಣ ಮಾಡುವ ಉದ್ದೇಶದಿಂದ ರಸ್ತೆಗೆ ಅಡ್ಡಲಾಗಿ ಮಣ್ಣು ಹಾಕಿದ ರೈತ
ರಿಪ್ಪನ್‌ಪೇಟೆ ; ಇಲ್ಲಿಗೆ ಸಮೀಪದ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದ ಸರ್ವೇ ನಂ 40 ಮತ್ತು 42/2 ಹಾಗೂ 57 ಇನ್ನಿತರ ಜಮೀನಿಗೆ ಸಂಪರ್ಕ ಕಲ್ಪಿಸುವ ಸಂಪರ್ಕದ ರಸ್ತೆಯನ್ನು ಒತ್ತವರಿ ನೆಪದಲ್ಲಿ ರಸ್ತೆಗೆ ಮಣ್ಣು ಹಾಕಿ ಬಂದ್ ಮಾಡುವ ಮೂಲಕ ರೈತರಿಗೆ ಕೃಷಿ ಚಟುವಟಿಕೆಗೆ ಹೋಗಿ ಬಾರದಂತೆ ತಡೆಮಾಡಿದ್ದಾರೆಂದು ಆರೋಪಿಸಿ ರೈತರು ಠಾಣೆಗೆ ತಹಶೀಲ್ದಾರ್ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ತಮ್ಮಡಿಕೊಪ್ಪ ಗ್ರಾಮದ ರೈತರಾದ ಪರಶೋಜಿರಾವ್ ಬಿನ್ ಹಾಲೋಜಿರಾವ್, ಶ್ರೀನಿವಾಸರಾವ್ ಬಿನ್ ಮಂಜೋಜಿರಾವ್, ಅನಿಲ್‌ಕುಮಾರ್, ಹರ್ಷ, ಕೃಷ್ಣೋಜಿರಾವ್, ಮತ್ತು ತಮ್ಮಡಿಕೊಪ್ಪ ಗ್ರಾಮಸ್ಥರು ಈ ಗ್ರಾಮದ ಸಂಪರ್ಕ ರಸ್ತೆಯಲ್ಲಿ ಹಾದು ಹೋಗಿ ತಮ್ಮ ಅಜ್ಜ-ತಂದೆಯವರ ಕಾಲದಿಂದಲೂ ಓಡಾಡಿಕೊಂಡು ಜಮೀನು ಸಾಗುವಳಿ ಮಾಡಿಕೊಂಡು ಬರಲಾಗುತ್ತಿದ್ದ ಸಂಪರ್ಕ ರಸ್ತೆಯನ್ನು ಒತ್ತುವರಿ ಮಾಡಿಕೊಳ್ಳುವ ದುರುದ್ದೇಶದಿಂದಾಗಿ ಸಂಪರ್ಕ ರಸ್ತೆಗೆ ಜೆಸಿಬಿ ಮತ್ತು ಟ್ರ್ಯಾಕ್ಟರ್‌ನಿಂದ ಮಣ್ಣು ತಂದು ರಸ್ತೆಯಲ್ಲಿ ರಾಶಿ ಹಾಕಿ ಕೆಳಗಿನ ಜಮೀನದಾರರು ಹೋಗದಂತೆ ತಡೆ ಮಾಡಿದ್ದಾರೆಂದು ಮನವಿಯಲ್ಲಿ ವಿವರಿಸಿದ್ದಾರೆ.
ಈ ಕೂಡಲೇ ಬಂದ್ ಮಾಡಲಾದ ಸಂಪರ್ಕ ರಸ್ತೆಯನ್ನು ತೆರವುಗೊಳಿಸಿ ರೈತರಿಗೆ ಈ ಹಿಂದಿನಂತೆ ಕೃಷಿ ಚಟುವಟಿಕೆಗೆ ಜನಜಾನುವಾರುಗಳಿಗೆ ಓಡಾಡಲು ಅನುಕೂಲ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ರಕ್ಷಣಾಧಿಕಾರಿಗಳಿಗೆ, ತಹಶೀಲ್ದಾರ್ ಮತ್ತು ಪಿಎಸ್‌ಐ ರವರಿಗೆ ತಮ್ಮಡಿಕೊಪ್ಪ ಗ್ರಾಮದ ರೈತರಾದ ಪರಶೋಜಿರಾವ್ ಬಿನ್ ಹಾಲೋಜಿರಾವ್, ಶ್ರೀನಿವಾಸರಾವ್ ಬಿನ್ ಮಂಜೋಜಿರಾವ್, ಅನಿಲ್‌ಕುಮಾರ್, ಹರ್ಷ, ಕೃಷ್ಣೋಜಿರಾವ್, ದೂರು ಅರ್ಜಿ ಸಲ್ಲಿಸಿದ್ದಾರೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.