ಹೊಂಬುಜ ; “ಜೈನ ಧರ್ಮದ 24ನೇಯ ತೀರ್ಥಂಕರರಾದ ಶ್ರೀ ಮಹಾವೀರ ಸ್ವಾಮಿಯವರ ಅಹಿಂಸಾ ಧರ್ಮದ ಸೂತ್ರಗಳು ಹಾಗೂ ಪರಸ್ಪರ ವಾತ್ಸಲ್ಯಮಯ ಜೀವನದ ಸಾತ್ವಿಕ ದಿನಚರಿಯ ಉಪದೇಶಗಳು ಮಾನವ ಕಲ್ಯಾಣಾಭ್ಯುದಯಕ್ಕೆ ಪ್ರೇರಣೆ ನೀಡಿವೆ” ಎಂದು ಹೊಂಬುಜ ಶ್ರೀಕ್ಷೇತ್ರದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ತಿಳಿಸಿದರು.
ಅವರು ಶ್ರೀಕ್ಷೇತ್ರ ಹೊಂಬುಜದ ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಲೋಕಮಾತೆ ಯಕ್ಷಿಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಶ್ರೀ ಮಹಾವೀರ ತೀರ್ಥಂಕರರ 2552ನೇ ನಿರ್ವಾಣ ಮೋಕ್ಷಕಲ್ಯಾಣ ಸುದಿನ ಪರ್ವದ ನಿಮಿತ್ತ ವಿಶೇಷ ಪೂಜಾ ವಿಧಿ-ವಿಧಾನವನ್ನು ನೆರವೇರಿಸಿ ಪ್ರವಚನದಲ್ಲಿ “ಪ್ರತಿಯೊರ್ವರೂ ಸತ್ಯ-ಅಹಿಂಸೆ-ಅಪರಿಗ್ರಹ-ಅಚೌರ್ಯ-ಬ್ರಹಚರ್ಯ ನಿಯಮಗಳನ್ನು ಪರಿಪಾಲಿಸುವಂತಾಗಬೇಕು. ಸಂಘರ್ಷರಹಿತ ಸಮಾಜ ನಿರ್ಮಾಣದಲ್ಲಿ ಜೈನ ಧರ್ಮದ ಕೊಡುಗೆಯನ್ನು ಅನುಷ್ಠಾನಗೊಳಿಸಬೇಕು” ಎಂದು ವಿವರಿಸಿದರು.

ಆಗಮೋಕ್ತ ವಿಧಿ-ವಿಧಾನದಲ್ಲಿ ಭಗವಾನ ಶ್ರೀ ಮಹಾವೀರ ಸ್ವಾಮಿ ಜಿನಬಿಂಬದ ಉತ್ಸವ, ಅಷ್ಟವಿಧಾರ್ಚನೆ ಪೂಜೆ, ನಿರ್ವಾಣ ಲಾಡು ಸಮರ್ಪಿಸಲಾಯಿತು.
ಊರ ಪರವೂರ ಭಕ್ತರು, ಶ್ರೀ ಪದ್ಮಾವತಿ ಮಹಿಳಾ ಸಮಾಜದ ಶ್ರಾವಿಕೆಯರು, ಶ್ರೀ ಕುಂದಕುಂದ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿಗಳು ಶ್ರೀ ಮಹಾವೀರ ಸ್ವಾಮಿ ಸ್ತ್ರೋತ್ರ ಪಠಿಸಿದರು. ಶ್ರೀಗಳವರು ಮಂತ್ರಾಕ್ಷತೆ ನೀಡಿ ಹರಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.