ಕುಡಿತದ ದುಶ್ಚಟದಿಂದ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ ; ಸಿಪಿಐ ಗುರಣ್ಣ ಎಸ್ ಹೆಬ್ಬಾಳ್

Written by malnadtimes.com

Published on:

ಹೊಸನಗರ ; ಕುಡಿತದ ದುಶ್ಚಟದಿಂದ ಅಪರಾಧಗಳ ಸಂಖ್ಯೆಗಳು ಹೆಚ್ಚುತ್ತಿದ್ದು ಕುಡಿತದಿಂದ ಶೇ.2ರಷ್ಟು ವಿಚ್ಚೇದನಗಳ ಸಂಖ್ಯೆ ಹಾಗೂ ಅನೈತಿಕ ಸಂಬಂಧವು ಜಾಸ್ತಿ ಆಗಿರುತ್ತದೆ. ದುಶ್ಚಟ ಮುಕ್ತ ಸಮಾಜವೊಂದನ್ನು ನಿರ್ಮಿಸುವ ನಿಟ್ಟಿನಲ್ಲಿ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಮದ್ಯವರ್ಜನ ಶಿಬಿರದಿಂದ ಅಪರಾಧಗಳ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಹೊಸನಗರ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಗಾಯತ್ರಿ ಮಂದಿರದಲ್ಲಿ ನವಜೀವನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್, ಶ್ರೀ ಕ್ಷೇ.ಧ.ಗ್ರಾ.ಯೋ. ಬಿ.ಸಿ.ಟ್ರಸ್ಟ್, ಧರ್ಮಸ್ಥಳ ಇವರು ಸರ್ವಜ್ಞನ ವಚನಗಳ ಮೂಲಕ ನವ ಜೀವನ ಸದಸ್ಯರಿಗೆ ಹೊಸ ಜೀವನ ಪ್ರಾರಂಭ ಮಾಡುವ ಮೂಲಕ ಪಾನಮುಕ್ತ ನವಜೀವನ ಸದಸ್ಯರಿಗೆ ಹೊಸ ಜೀವನದ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.

ನವಜೀವನ ಸದಸ್ಯರು ಧರ್ಮಸ್ಥಳದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ತಮ್ಮ ಸಹಕಾರ ನೀಡುವಂತೆ ಹಾಗೂ ಸದಸ್ಯರಿರುವ ಸಂಘವನ್ನು ಕ್ರಮವತ್ತಾಗಿ ನಡೆಸುವಂತೆ ಮಲೆನಾಡು ಪ್ರದೇಶಗಳಲ್ಲಿ ಮಾದಕ ವಸ್ತುಗಳ ಬಳಕೆ ಜಾಸ್ತಿ ಆಗುತ್ತಿದ್ದು ಇನ್ನೂ ಮುಂದಿನ ಜೀವನದಲ್ಲಿ ಹೇಗೆ ಜೀವನ ನಡೆಸಬೇಕು ಎಂಬುದರ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಸಂಪೆಕಟ್ಟೆ ವಲಯದ ಕೆ.ಬಿ.ಸರ್ಕಲ್ ಗ್ರಾಮದಲ್ಲಿ ಈ ಹಿಂದೆ ನಡೆದ ಮದ್ಯವರ್ಜನಾ ಶಿಬಿರದ ಶಿಬಿರಾರ್ಥಿ ತಾನು ಪಾನಮುಕ್ತರಾಗುವ ಜೊತೆಯಲ್ಲಿ ತನ್ನ ಗ್ರಾಮದಲ್ಲಿ ದುಶ್ಚಟಗಳಿಗೆ ಒಳಗಾದ ಸದಸ್ಯರನ್ನು ಕೂಡ ಪಾನಮುಕ್ತ ಸದಸ್ಯರನ್ನಾಗಿ ಮಾಡುವಂತೆ ಮಾತನಾಡಿದ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಚಿತ್ರದುರ್ಗ ಪ್ರಾದೇಶಿಕ ಕಛೇರಿ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕಿ ಗೀತಾ ಬಿ ಮಾತನಾಡಿ, ಶ್ರೀ ಕ್ಷೇ.ಧ.ಗ್ರಾ.ಯೋ. ಬಿ.ಸಿ.ಟ್ರಸ್ಟ್ ಇವರು ಮಹಿಳೆಯರನ್ನು ಉದ್ದೇಶಿಸಿ ಒಬ್ಬ ಯಶಸ್ವಿ ಪುರಷರ ಹಿಂದೆ ಮಹಿಳೆಯರು ಇರುತ್ತಾರೆ ಎನ್ನುವುದರ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿದರು. 10 ರಿಂದ 15 ವರ್ಷಗಳವರೆಗೆ ಮದ್ಯಪಾನ ತ್ಯಜಿಸಿ ಜೀವನ ನಡೆಸುವುದು ಒಂದು ಸಾಧನೆ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ ಮುಂದಿನ ದಿನದಲ್ಲಿ ನವಜೀವನ ಸದ್ಯರು ದಾರಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ಹೆಣ್ಣು ಮಕ್ಕಳು ಕರ್ತವ್ಯ ಎನ್ನುವುದರ ಮೂಲಕ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಸದಸ್ಯ ಎನ್‌.ಆರ್ ದೇವಾನಂದ್, ನವಜೀವನ ಸದಸ್ಯರಿಗೆ ಪಾನಮುಕ್ತರಾಗಿ ಹೊಸ ಜೀವನ ಪ್ರಾರಂಭ ಮಾಡುವಂತೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಪ್ರದೀಪ್ ಆರ್, ಹೊಸನಗರ ಗಣಪತಿ ದೇವಸ್ಥಾನದ ಅಧ್ಯಕ್ಷ ಸದಾಶಿವ ಶೆಟ್ಟಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸದಸ್ಯ ನಾರಾಯಣ ಕಾಮತ್, ವಕೀಲರಾದ ಮೋಹನ್ ಜಿ ಶೆಟ್ಟಿ, ಮಹಿಳಾ ಸಿರಿಗನ್ನಡ ವೇದಿಕೆಯ ಅಧ್ಯಕ್ಷೆ ಶಶಿಕಲಾ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸದಸ್ಯೆ ನಾಗರತ್ನ ದೇವರಾಜ್, ಮೇಲ್ವಿಚಾರಕರಾದ ತಿಮ್ಮಪ್ಪ ಹಾಗೂ ಉಮಾ ಸ್ಥಳೀಯ ಸೇವಾಪ್ರತಿನಿಧಿಗಳು, ನವಜೀವನ ಸಮತಿ ಪೋಷಕರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

Leave a Comment