RIPPONPETE ; ಹುಂಚ ಹೋಬಳಿ ಬಿದರಹಳ್ಳಿ ಗ್ರಾಮದ ಸ.ನಂ. 47 ರಲ್ಲಿ ಅಕ್ರಮವಾಗಿ ಭೂ ಒತ್ತುವರಿ ಮಾಡುವ ಮೂಲಕ ಲಕ್ಷಾಂತರ ರೂ. ಮೌಲ್ಯದ ಮರಗಳ ಮಾರಣ ಹೋಮ ಮಾಡಲಾಗಿದೆ ಎಂಬ ಬಗ್ಗೆ ಮ.ಟೈ. ನಲ್ಲಿ ಪ್ರಕಟವಾದ ವರದಿಯನ್ನಾದರಿಸಿ ಕಂದಾಯ ಇಲಾಖೆಯ ಅಧಿಕಾರಿಗಳು ತೆರವುಗೊಳಿಸುವುದರೊಂದಿಗೆ ಮಂಡ್ಲಿಕಾನ್ ಪ್ರದೇಶದ ರಕ್ಷಣೆಗೆ ಮುಂದಾಗಿದ್ದಾರೆ.
ಕಳೆದ ಸೆ. 25 ರಂದು ಮ.ಟೈ.ನಲ್ಲಿ ಪ್ರಕಟಗೊಂಡ ಸಮಗ್ರ ವರದಿಯನ್ನಾದರಿಸಿ ಪೊಲೀಸ್ ಇಲಾಖೆಯ ನೆರವಿನೊಂದಿಗೆ ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್‌ರವರ ಆದೇಶದಂತೆ ಅಕ್ರಮ ಒತ್ತುವರಿ ಪ್ರದೇಶಕ್ಕೆ ಹುಂಚ ರೆವಿನ್ಯೂ ಇನ್ಸ್‌ಪೆಕ್ಟರ್ ಸೈಯದ್ ಅಫ್ರೋಜ್ ಅಹಮ್ಮದ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿವರ್ಗ ತೆರಳಿ ಒತ್ತುವರಿ ಜಾಗಕ್ಕೆ ಅಳವಡಿಸಲಾದ ಬೇಲಿ ತೆರವುಗೊಳಿಸಿ ಹಾಕಲಾದ ತೆಂಗಿನ ಗಿಡಗಳನ್ನು ಕಿತ್ತು ಜೆಸಿಬಿ ಯಂತ್ರದ ಮೂಲಕ ಟ್ರಂಚ್ ಹೊಡಸಿ ಇನ್ನೂ ಮುಂದೆ ಈ ಜಾಗವನ್ನು ಯಾರು ಅಕ್ರಮವಾಗಿ ಪ್ರವೇಶಿಸದಂತೆ ಮಾಡಲಾಗಿದೆ.

ತೆರವು ಕಾರ್ಯಾಚರಣೆಯಲ್ಲಿ ಗ್ರಾಮಾಡಳಿತಾಧಿಕಾರಿ ಶ್ರೀವಲ್ಲಿ, ಪಿಎಸ್‌ಐ ಪ್ರವೀಣ್‌ಕುಮಾರ್, ಡಿಆರ್‌ಎಫ್‌ಓ ಮಂಜುನಾಥ, ಅರಣ್ಯ ರಕ್ಷಕ ಸಂತೋಷ್ ಕುಮಾರ, ಕಂದಾಯ ಇಲಾಖೆಯ ಸಿಬ್ಬಂದಿಗಳಾದ ದರ್ಶನ, ರಾಘವೇಂದ್ರ, ನಾಗರಾಜ ಇನ್ನಿತರರು ಹಾಜರಿದ್ದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.