ಶಾಲೆಯ ಸಮಗ್ರ ಅಭಿವೃದ್ದಿಯಲ್ಲಿ ಸಮುದಾಯದ ಪಾತ್ರ ಮಹತ್ವದ್ದು ; ಪುಟ್ಟಪ್ಪ

Written by Mahesha Hindlemane

Published on:

ಹೊಸನಗರ ; ಯಾವುದೇ ಶಾಲೆಯ ಸಮಗ್ರ ಅಭಿವೃದ್ಧಿಯಲ್ಲಿ ಸಮುದಾಯದ ಪಾತ್ರ ಮಹತ್ವ ಪಡೆದಿದೆ. ಈ ಹಿನ್ನಲೆಯಲ್ಲಿ ಶಾಲೆಯ ನಿರ್ವಹಣೆ, ಸುಧಾರಣೆ ಹಾಗು ಅಭಿವೃದ್ಧಿ ಕಾರ್ಯಗಳಲ್ಲಿ ಸಮುದಾಯದ ಸಹಕಾರ ಅಗತ್ಯವಾಗಿದೆ ಎಂದು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪುಟ್ಟಪ್ಪ ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ತಾಲ್ಲೂಕಿನ ತ್ರಿಣಿವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಂಡ್ರೊಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಉದ್ಯಮಿ, ಬಿಜೆಪಿ ಮುಖಂಡ, ಸ್ಥಳೀಯರಾದ ಕೊಡುಗೈ ದಾನಿ ವಾಟಗದ್ದೆ ದಿನೇಶ್ ನೀಡಿದ ಶಾಲಾ ಬ್ಯಾಗ್ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೋಷಕರ ಜೊತೆಗೆ ದಾನಿಗಳ ಸಹಕಾರ ಸಿಕ್ಕಲ್ಲಿ ಸರ್ಕಾರಿ ಶಾಲೆಗಳಿಂದ ಖಾಸಗಿ ಶಾಲೆಗಳಿಗೆ ಎಲ್ಲಾ ರೀತಿಯಲ್ಲಿ ಪೈಪೋಟಿ ನೀಡಬಲ್ಲವು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೂಕ್ತ ಪ್ರೋತ್ಸಾಹ ದೊರೆಯಲ್ಲಿ ಸಾಮಾಜಿಕವಾಗಿ ಉನ್ನತ ಸ್ಥಾನಮಾನ ಪಡೆಯಲು ಸಾಧ್ಯವಿದೆ ಎಂದರು.

ಮುಖ್ಯ ಅತಿಥಿ ನಾಗರಕೊಡಿಗೆ‌ ಶಶಿಧರ್ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರದ ವಿವಿಧ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ‌ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವಂತೆ ಕಿವಿಮಾತು ಹೇಳಿದರು.

ದಾನಿ ವಾಟಗದ್ದೆ ದಿನೇಶ್ ಅವರ ತಾಯಿ ಜಾನಕಮ್ಮ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಿ ಅವರ ಭವಿಷ್ಯಕ್ಕೆ ಶುಭ ಕೋರಿದರು.

ಈ ವೇಳೆ ಶಾಲಾಭಿವೃದ್ದಿ ಸಮಿತಿಯ ನಿರ್ದೇಶಕರಾದ ತೊಗರೆ ದೇವೇಂದ್ರ, ರಾಘವೇಂದ್ರ, ನೇತ್ರಾವತಿ, ಸುಜಯ್, ಮಂಜುನಾಥ, ಉಮೇಶ್ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಟಿ.ಎಸ್. ಮಹಾಂತೇಶ್ ಪ್ರಾಸ್ಥಾವಿಕ ನುಡಿದರು. ಕು. ಗೌತಮಿ ಮತ್ತು ಸಂಗಡಿಗರು ಪ್ರಾರ್ಥಿಸಿ, ಶಿಕ್ಷಕಿ ರೇಖಾ ಸ್ವಾಗತಿಸಿದರು. ಶಿಕ್ಷಕಿ ಆಸ್ಮಾ ನಿರೂಪಿಸಿ, ಲೋಲಾಕ್ಷಿ ವಂದಿಸಿದರು.

Leave a Comment