ಹೊಸನಗರ ; ಹೊಸನಗರ ಟೌನ್ ಸೇರಿದಂತೆ ಸುತ್ತಮುತ್ತಲಿನ ಗ್ರಾ.ಪಂ. ವ್ಯಾಪ್ತಿಗಳಲ್ಲಿ ನಾಳೆಯಿಂದ 2 ದಿನ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಇಲಾಖೆ ತಿಳಿಸಿದೆ.
ಫೆ. 20 ರಂದು ಬೆಳಿಗ್ಗೆ 10:00 ಗಂಟೆಯಿಂದ ಫೆ. 21 ರಂದು ಸಂಜೆ 6:00 ಗಂಟೆವರೆಗೆ 33 ಕೆ.ವಿ ಸಾಗರ-ಹೊಸನಗರಕ್ಕೆ ಬಂದಿರುವ ಸಾಗರ 110/33/11 ಕೆ.ವಿ. ಕೇಂದ್ರದಿಂದ ಹೊಸನಗರಕ್ಕೆ ಬಂದಿರುವ 20 ಎಂವಿಎ ಶಕ್ತಿ ಪರಿವರ್ತಕ ವಿಫಲವಾಗಿದ್ದು ಬದಲಾವಣೆಯ ಪ್ರಯುಕ್ತ ಸಾಗರ-ಹೊಸನಗರ ವಿದ್ಯುತ್ ಮಾರ್ಗದ, ಎಂ.ಗುಡ್ಡೆಕೊಪ್ಪ, ಜೇನಿ, ಮಾರುತಿಪುರ, ರಾಮಚಂದ್ರಾಪುರ, ಮೇಲಿನಬೆಸಿಗೆ, ಸೊನಲೆ, ನಾಗರಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಮತ್ತು ಹೊಸನಗರ ಟೌನ್ ವ್ಯಾಪ್ತಿಯ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ ಹೊಸನಗರ ಉಪವಿಭಾಗದ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಇಲಾಖೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.