ಹೊಸನಗರ ; ಇಲ್ಲಿನ ಮೆಸ್ಕಾಂ ಉಪವಿಭಾಗದಲ್ಲಿ ಮೇ 04ರ ಬೆಳಗ್ಗೆ 10-00 ರಿಂದ ಸಂಜೆ 5-00 ಗಂಟೆವರೆಗೆ 33 ಕೆ.ವಿ ಸಾಗರ – ಹೊಸನಗರ ಮಾರ್ಗ ನಿರ್ವಹಣೆ ಹಾಗೂ ಉಪವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣೆ ಪ್ರಯುಕ್ತ ಸಾಗರದಿಂದ ಹೊಸನಗರಕ್ಕೆ ಬಂದಿರುವ ಸಾಗರ – ಹೊಸನಗರ ಮಾರ್ಗದ ಜೇನಿ, ಮಾರುತಿಪುರ, ರಾಮಚಂದ್ರಪುರ, ಮೇಲಿನಬೆಸಿಗೆ ಮತ್ತು ಸೊನಲೆ ಗ್ರಾ.ಪಂ. ವ್ಯಾಪ್ತಿಯ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.
ಆದ್ದರಿಂದ ಹೊಸನಗರ ಉಪವಿಭಾಗದ ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

