ಹೊಸನಗರ ; ಉಪವಿಭಾಗದಲ್ಲಿ ಸೆ.19 ರಂದು ಬೆಳಿಗ್ಗೆ 10-00 ರಿಂದ ಸಂಜೆ 6-00 ಗಂಟೆವರೆಗೆ 33 ಕೆ.ವಿ ಸಾಗರ – ಹೊಸನಗರ ಮಾರ್ಗದ ನಿರ್ವಹಣೆ ಮತ್ತು ಹರಿದ್ರಾವತಿ ಉದ್ದೇಶಿತ 33/11 ಕೆ.ವಿ ಕಾಮಗಾರಿ ಪ್ರಯುಕ್ತ ಸಾಗರದಿಂದ ಹೊಸನಗರಕ್ಕೆ ಬಂದಿರುವ ಸಾಗರ-ಹೊಸನಗರ ವಿದ್ಯುತ್ ಮಾರ್ಗದ ಜೇನಿ, ಮಾರುತಿಪುರ, ರಾಮಚಂದ್ರಾಪುರ, ಮೇಲಿನಬೆಸಿಗೆ, ಸೊನಲೆ, ಎಂ.ಗುಡ್ಡೆಕೊಪ್ಪ, ಗ್ರಾಮ ಪಂಚಾಯಿತಿ ಮತ್ತು ಹೊಸನಗರ ಟೌನ್ ವ್ಯಾಪ್ತಿಯ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.
ಆದ್ದರಿಂದ ಹೊಸನಗರ ಉಪವಿಭಾಗದ ಗ್ರಾಹಕರು ಸಹಕರಿಸಬೇಕಾಗಿ ಹೊಸನಗರ ಮೆಸ್ಕಾಂ ಸಹಾಯಕ ಇಂಜಿನಿಯರ್ ಚಂದ್ರಶೇಖರ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

