ಹೊಸನಗರ ; ತಾಲ್ಲೂಕಿನ ರೈತರು ಬೆಳೆ ಸಮೀಕ್ಷೆ ಮಾಡದಿದ್ದರೆ ಬೆಳೆ ವಿಮೆ ಮತ್ತು ಸರ್ಕಾರದ ಸಬ್ಸಿಡಿ ಸೌಲಭ್ಯಗಳು ಸಿಗುವುದಿಲ್ಲ ಎಂದು ಹೊಸನಗರ ಕೃಷಿ ಇಲಾಖೆಯ ಸಹಾಯಕ ನಿರ್ದೆಶಕ ಸಚಿನ್ ಹೆಗಡೆ ರೈತರಿಗೆ ಮಾಹಿತಿ ನೀಡಿದ್ದಾರೆ.
ಅವರು ಕೃಷಿ ಇಲಾಖೆಯ ಆವರಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಸರ್ಕಾರದ ಬೆಳೆ ವಿಮೆ, ಬೆಂಬಲ ಬೆಲೆ, ಬೆಳೆ ಹಾನಿ ಪರಿಹಾರ, ಕೃಷಿ ಸಬ್ಸಿಡಿ ಯೋಜನೆಗಳನ್ನು ಪಡೆಯಲು ಪ್ರತಿಯೊಬ್ಬ ರೈತರು ನಿಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಮಾಹಿತಿಯನ್ನು ಪಹಣಿಯಲ್ಲಿ ನಿಖರವಾಗಿ ದಾಖಲಿಸುವುದು ತುಂಬಾ ಅಗತ್ಯವಾಗಿದೆ ಇದನ್ನು ಬೆಳೆ ಸಮೀಕ್ಷೆ ಎನ್ನಲಾಗಿದ್ದು ತಾವು ಈ ಕೆಲಸ ಮಾಡಿಸಿಕೊಳ್ಳದಿದ್ದರೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ. ಬೆಳೆ ಸಮೀಕ್ಷೆ ಇಲ್ಲದಿದ್ದರೆ ವಿಮಾ ಪರಿಹಾರ ನೇರವಾಗಿ ನಿಮ್ಮ ಖಾತೆಗೆ ಹಣ ಜಮಾವಾಗುವುದಿಲ್ಲ. ಬೆಂಬಲ ಬೆಲೆಯಲ್ಲಿ ಬೆಳೆ ಮಾರಾಟ ಮಾಡಲು ಸಮೀಕ್ಷೆಯ ಪಹಣಿ ದಾಖಲೆ ಕಡ್ಡಾಯವಾಗಿರುತ್ತದೆ. ತೀವ್ರ ಮಳೆ ಅಥವಾ ಬರದಿಂದ ಬೆಳೆ ನಾಶವಾದರೆ ಪರಿಹಾರಕ್ಕೆ ಈ ಸಮೀಕ್ಷೆ ಆಧಾರವಾಗಿರುತ್ತದೆ. ಯಾವುದೇ ಬೆಳೆ ಆಧಾರಿತ ಯೋಜನೆಗೆ ಪಹಣಿ ದಾಖಲೆ ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದ್ದು, ಹೊಸನಗರ ತಾಲ್ಲೂಕಿನ ರೈತರು ತಕ್ಷಣ ತಾವು ಬೆಳೆದ ಬೆಳೆಗೆ ಬೆಳೆ ಸಮೀಕ್ಷೆ ಮಾಡಿಕೊಂಡು ಪಹಣಿಗೆ ದಾಖಲಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.
ಬೆಳೆ ಸಮೀಕ್ಷೆ ಮಾಡಲು Google play store ನಲ್ಲಿ ಈ App Download ಮಾಡಿಕೊಳ್ಳಿ 👇 https://play.google.com/store/apps/details?id=com.csk.farmer23_24.cropsurvey

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.