ಚಿಂತಕ, ಬರಹಗಾರ ಹಾದಿಗಲ್ಲು ರಾಘವೇಂದ್ರ ನಿಧನ

Written by Koushik G K

Updated on:

ತೀರ್ಥಹಳ್ಳಿ: ಪ್ರಗತಿಪರ ಚಿಂತಕ, ಬರಹಗಾರ, ಕೃಷಿಕರಾಗಿದ್ದ ಹಾದಿಗಲ್ಲು ರಾಘವೇಂದ್ರ (62) ಅನಾರೋಗ್ಯದಿಂದ ತಾಲೂಕಿನ ಕೋಣಂದೂರು ಸಮೀಪದ ಹಾದಿಗಲ್ಲಿನ ಸ್ವಗೃಹದಲ್ಲಿ ಮಂಗಳವಾರ ನಿಧನರಾದರು.

WhatsApp Group Join Now
Telegram Group Join Now
Instagram Group Join Now

ಅಪ್ಪಟ ಸಾಹಿತ್ಯಾಭಿಮಾನಿಯಾಗಿದ್ದ ಇವರು “ತೀರ್ಥಹಳ್ಳಿ ಸುತ್ತಮುತ್ತ” ಎಂಬ ಪುಸ್ತಕದ ಸಂಪಾದಕರಾಗಿದ್ದರು, ಖ್ಯಾತ ಸಾಹಿತಿ ಯು ಆರ್ ಅನಂತಮೂರ್ತಿಯವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಜನಪದದ ಕ್ಷೇತ್ರ, ಹಳೆ ಹಿಂದಿ, ಕನ್ನಡ ಹಾಡುಗಳು ಗಜಲ್ ಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ತೀರ್ಥಹಳ್ಳಿಯ ರುದ್ರಭೂಮಿಯಲ್ಲಿ ಇವರ ಅಂತ್ಯಸಂಸ್ಕಾರ ನೆರವೇರಿತು.

ಇವರ ನಿಧನಕ್ಕೆ ತೀರ್ಥಹಳ್ಳಿ ಕನ್ನಡ ಸಾಹಿತ್ಯ ಪರಿಷತ್, ಶಾಸಕ ಆರಗ ಜ್ಞಾನೇಂದ್ರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಂತಾಪ ಸೂಚಿಸಿದ್ದಾರೆ.

ಕರ್ತವ್ಯಲೋಪ ಎಸಗಿದ ಬಿಇಒರನ್ನು ಅಮಾನತುಗೊಳಿಸಿ ; ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

Leave a Comment