ನೀವು ರೈಲಿನಲ್ಲಿ ಪ್ರಯಾಣಿಸುವವರಾಗಿದ್ದರೆ, ಇದು ನಿಮಗಾಗಿ ಬಹುಮುಖ್ಯ ಸುದ್ದಿ. ಹಲವು ವರ್ಷಗಳ ಬಳಿಕ, ಭಾರತೀಯ ರೈಲ್ವೆ ಇದೀಗ ಪ್ರಯಾಣ ದರಗಳನ್ನು ಹೆಚ್ಚಿಸುವ ತೀರ್ಮಾನ ಕೈಗೊಂಡಿದೆ. ಜುಲೈ 1, 2025 ರಿಂದ ಈ ಹೊಸ ದರಗಳು ಜಾರಿಗೆ ಬರಲಿದ್ದು, ಲಕ್ಷಾಂತರ ಪ್ರಯಾಣಿಕರಿಗೆ ಇದೊಂದು ಆಘಾತಕಾರಿ ಬೆಳವಣಿಗೆಯಾಗಿ ಕಾಣಿಸಬಹುದು.
ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಈ ಬಾರಿಗೆ ದರ ಏರಿಕೆ ಬಹಳ ಅತ್ಯಲ್ಪವಾಗಿದ್ದು, ಎಸಿ ಅಲ್ಲದ ಮೇಲ್/ಎಕ್ಸ್‌ಪ್ರೆಸ್ ರೈಲುಗಳು ಕಿಮೀಗೆ 1 ಪೈಸೆ, ಹಾಗೂ ಎಸಿ ಟಿಕೆಟ್‌ಗಳಿಗೆ ಕಿಮೀಗೆ 2 ಪೈಸೆ ಹೆಚ್ಚಳವಾಗಲಿದೆ.
ಈ ಹಿಂದೆ ಕೋವಿಡ್-19 ಸಂದರ್ಭದಲ್ಲಿ ತಾತ್ಕಾಲಿಕ ದರ ಏರಿಕೆ ಜಾರಿಯಾಗಿತ್ತು. ಆದರೆ, ಇದೀಗ ಈ ದರ ಏರಿಕೆ ಜಾರಿಗೆ ಬರಲಿದ್ದು, ಇದು ಪ್ಯಾಸೆಂಜರ್ ರೈಲು ದರ ಏರಿಕೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
ಏನು ಏರಿಕೆ ಆಗುತ್ತಿದೆ?
- ಎಸಿ ಅಲ್ಲದ ಟ್ರೈನ್ ಟಿಕೆಟ್ – ಪ್ರತಿ ಕಿಲೋಮೀಟರ್‌ಗೆ ₹0.01 ಹೆಚ್ಚಳ
- ಎಸಿ ಟಿಕೆಟ್ – ಪ್ರತಿ ಕಿಲೋಮೀಟರ್‌ಗೆ ₹0.02 ಹೆಚ್ಚಳ
- ಜುಲೈ 1 ರಿಂದ ಈ ಹೊಸ ದರ ಜಾರಿಗೆ ಬರಲಿದೆ
ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯ ಹೊಸ ವಿಧಾನ: ಪೋಷಕರು, ವಿದ್ಯಾರ್ಥಿಗಳು ಗಮನಿಸಿ!

