KALASA | ಮನೆ ಮೇಲೆ ಮರ ಮುರಿದು ಬಿದ್ದು ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹತ್ತಿಕುಡಿಗೆ ಎಂಬಲ್ಲಿ ನಡೆದಿದೆ.
Read more:PM Kissan Yojana | ನೀವು ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆಗೆ ಬರಲ್ಲ ʻಪಿಎಂ ಕಿಸಾನ್ ಯೋಜನೆʼಯ 17ನೇ ಕಂತಿನ ಹಣ !
ರತ್ನಮ್ಮ ಗಾಯಗೊಂಡ ಕಾರ್ಮಿಕ ಮಹಿಳೆ. ಎಂದಿನಂತೆ ಕೂಲಿ ಕೆಲಸಕ್ಕೆ ಜಮೀನಿಗೆ ಹೋಗಿದ್ದ ಮಹಿಳೆ. ಕೆಲಸ ಮುಗಿಸಿ ಮನೆ ತಲುಪಿದ ವೇಳೆ ಬಿರುಗಾಳಿ ಎದ್ದಿದೆ. ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಈ ಹಿನ್ನೆಲೆ ಮನೆ ಮುಂದಿದ್ದ ಬೃಹತ್ ಗಾತ್ರದ ಮರ ಬಿದ್ದು ಈ ದುರಂತ ನಡೆದಿದೆ. ಘಟನೆಯಲ್ಲಿ ಮನೆ ಸಂಪೂರ್ಣ ಜಖಂಗೊಂಡಿದೆ.

ಘಟನೆ ಬಳಿಕ ಸ್ಥಳೀಯರು, ಕುಟುಂಬದವರ ಸಹಾಯದಿಂದ ಗಾಯಾಳು ಮಹಿಳೆಗೆ ಕಳಸ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು. ಬಳಿಕ ಮಹಿಳೆಗೆ ಗಂಭೀರ ಪೆಟ್ಟಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ.
Read More:ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ; ರಿಪ್ಪನ್‌ಪೇಟೆ ನೂತನ ಪಿಎಸ್ಐ ಖಡಕ್ ಎಚ್ಚರಿಕೆ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.