ರಿಪ್ಪನ್‌ಪೇಟೆ ; ಇಲ್ಲಿನ ಆಟೋ ಸಂಘದವರು ಹಿರಿಯ ಆಟೋ ಚಾಲಕ ದ್ಯಾವಪ್ಪಗೌಡರ ಪ್ರಮಾಣಿಕ ಸೇವೆಯನ್ನು ಗುರುತಿಸಿ ಸನ್ಮಾನಿ ಗೌರವಿಸಿದರು.
ತಮ್ಮ ಸೇವಾವಧಿಯಲ್ಲಿ ಕಾಯಕವೇ ಕೈಲಾಸ ಎಂಬ ತತ್ವ ಸಿದ್ದಾಂತಕ್ಕೆ ಕಟ್ಟಿಬದ್ದರಾಗಿರುವ ದ್ಯಾವಪ್ಪಗೌಡರು ತಮ್ಮ ನಿತ್ಯ ಕಾಯಕವನ್ನು ಮಳೆ, ಗಾಳಿ ಚಳಿ ಬಿಸಿಲು ಎನ್ನದೇ ಮುಂಜಾನೆ 4 ಗಂಟೆಗೆ ಆಟೋ ರಿಕ್ಷಾವನ್ನು ತಂದು ನಿಲ್ದಾಣದಲ್ಲಿ ನಿಲ್ಲಿಸಿ ತಮ್ಮ ಇಳಿ ವಯಸ್ಸಿನಲ್ಲೂ ಹಿರಿಯ ಚೇತನ ದ್ಯಾವಪ್ಪಗೌಡರ ವೃತ್ತಿಯನ್ನು ಆರಂಭಿಸುವುದು ಇಂದಿನ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.
ಇವರ ಸೇವಾ ವೃತ್ತಿಯಲ್ಲಿ ನೆಮ್ಮದಿಯನ್ನು ಕಾಣಲಾಗದಿದ್ದರೂ ಕೂಡಾ ಕಾಯಕ ವೃತ್ತಿಯನ್ನು ಈ ಇಳಿ ವಯಸ್ಸಿನಲ್ಲೂ ದುಡಿದು ತಿನ್ನುವ ಕಾರ್ಯದಲ್ಲಿ ಮಾದರಿಯಾಗಿದ್ದಾರೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.