ರಿಪ್ಪನ್‌ಪೇಟೆ ; ಕೆಂಚನಾಲ ಗ್ರಾಮ ಪಂಚಾಯಿತ್ ಅಧ್ಯಕ್ಷ ಉಬೇದುಲ್ಲಾ ಷರೀಫ್ ಸಾಗರ ಉಪವಿಭಾಗಾಧಿಕಾರಿಗಳ ಕಛೇರಿಗೆ ತೆರಳಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಒಪ್ಪಂದದಂತೆ ತಮ್ಮ ತಂದೆ ಮಹಮದ್ಮದ್ ಷರೀಫ್ ಇವರಿಗೆ ಕೊನೆಯ 6 ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಅಧ್ಯಕ್ಷರಾಗುವ ಅವಕಾಶವನ್ನು ಕಲ್ಪಿಸುವ ಉದ್ದೇಶ ಹೊಂದಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆಯಾಗಿ ದಿಢೀರ್ ಈ ರೀತಿಯಲ್ಲಿ ರಾಜೀನಾಮೆ ಪತ್ರವನ್ನು ಸಲ್ಲಿಸಿರುವ ಹಿಂದಿನ ಮರ್ಮ ಏನು ಎಂಬುದು ಸಾರ್ವಜನಿಕರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಮುಖಂಡರಾದ ರಾಮಪ್ಪ, ಕೆ.ಎಲ್.ವಿಜಯ ಮಾದಾಪುರ, ಮಂಜುನಾಥ,ಕೃಷ್ಣೋಜಿರಾವ್, ಇತರರು ಹಾಜರಿದ್ದರು.
ಸಿಡಿಲು ಬಡಿದು ಎರಡು ಎಮ್ಮೆ ಸಾವು !
ರಿಪ್ಪನ್‌ಪೇಟೆ ; ಹುಂಚದಕಟ್ಟೆ ಬಳಿಯ ಆನೆಗೆರಸು ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎಮ್ಮೆಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಆನೆಗೆರಸು ಗ್ರಾಮದ ಸುಮಿತ್ರಮ್ಮ (ಸಾವಿತ್ರಮ್ಮ) ಎಂಬುವರಿಗೆ ಸೇರಿದ ಎರಡು ಎಮ್ಮೆಗಳು ಮನೆಯ ಮುಂಭಾಗದಲ್ಲಿನ ಕೊಟ್ಟಿಗೆಯಲ್ಲಿ ಕಟ್ಟಿದ್ದು ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿವೆ.
ಲಕ್ಕಿ ಕೂಪನ್ ವಿಜೇತರಿಗೆ ಬಹುಮಾನ ವಿತರಣೆ
ಹೊಸನಗರ ; ಇಲ್ಲಿನ ಚೌಡಮ್ಮ ರಸ್ತೆಯ ಪ್ರಸಿದ್ಧ ಬಟ್ಟೆ ಮಾರಾಟ ಮಳಿಗೆ ‘ಮಂದಾರ ಫ್ಯಾಷನ್’ ದೀಪಾವಳಿ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಲಕ್ಕಿ ಕೂಪನ್ ಸ್ಕೀಂನಲ್ಲಿ ವಿಜೇತ ಪಟ್ಟಣದ ಶಿಕ್ಷಕಿ ಪ್ರಭಾವತಿ ಅವರಿಗೆ ಪ್ರಥಮ ಬಹುಮಾನ 80 ಸಾವಿರ ರೂ. ಚೆಕ್ ಅನ್ನು ಅಂಗಡಿ ಮಾಲೀಕ ವಿಠಲ್ ಗೌಡ ಹಸ್ತಾಂತರಿಸಿದರು.

ದ್ವಿತೀಯ ಬಹುಮಾನ ವಾಷಿನ್ ಮಷನ್ ಕೋಡೂರಿನ ಮಂಜುನಾಥ್ ಪಾಲಾಯಿತು.
