ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ | ಗೆಲುವಿನ ನಗೆ ಬೀರಿದ ‘ಕೋಟ’ ; ಕಣದಲ್ಲಿದ್ದ ಯಾರೆಲ್ಲ ಎಷ್ಟು ಮತ ಗಳಿಸಿದ್ದಾರೆ ?

Written by malnadtimes.com

Published on:

CHIKKAMAGALURU | ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ವಿರುದ್ಧ 2,58,903 ಭಾರಿ ಮತಗಳ ಅಂತರದಿಂದ ಕೋಟ ಶ್ರೀನಿವಾಸ ಪೂಜಾರಿ ಗೆಲುವು ಸಾಧಿಸಿದ್ದಾರೆ.

ಇವಿಎಂ ಮತ್ತು ಅಂಚೆ ಮತಗಳ ಲೆಕ್ಕಚಾರ :

  • ಕೋಟ ಶ್ರೀನಿವಾಸ ಪೂಜಾರಿ : 731408
  • ಜಯಪ್ರಕಾಶ್ ಹೆಗ್ಡೆ : 472505
  • ಕೆ. ಟಿ ರಾಧಾಕೃಷ್ಣ : 5414
  • ಎಂ.ಕೆ ದಯಾನಂದ್ : 1069
  • ಎಲ್. ರಂಗನಾಥ ಗೌಡ : 539
  • ಶಬರೀಶ್ : 564
  • ಸಚಿನ್ ಬಿ.ಕೆ. : 1331
  • ಸುಪ್ರೀತ್ ಕಟೀಲ್ : 690
  • ವಿಜಯ್ ಕುಮಾರ್ ಎಂಜಿ : 955
  • ಸುಧೀರ್ ಕಾಂಚನ್ ಮರಕಾಲ : 2278
  • NOTA : 11257

ಸಂಭ್ರಮಾಚರಣೆ :

ನರೇಂದ್ರ ಮೋದಿ, ಅಮಿಶ್ ಶಾ ಭಾವಚಿತ್ರ ಹಿಡಿದು ಮಹಿಳೆಯರೂ ಸೇರಿದಂತೆ ನೂರಾರು ಕಾರ್ಯಕರ್ತರು ಕಣಿದು ಕುಪ್ಪಳಿಸಿದರು. ಬಿಜೆಪಿಯ ಹಾಗೂ ಜೆಡಿಎಸ್ ನ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ ಕೋಟ ಶ್ರೀನಿವಾಸ ಪೂಜಾರಿ ಸೇವೆಗೆ ಸಿದ್ಧರಾಗಿದ್ದಾರೆ. ‘ನನ್ನಂತ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ ಗೆಲುವಿಗೆ ಕಾರಣರಾದ ಎಲ್ಲಾ ಮುಖಂಡರು ವರಿಷ್ಠರಿಗೆ ಧನ್ಯವಾದಗಳು’ ಎಂದಿದ್ದಾರೆ.

Read More

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ | ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಗೆ ಭರ್ಜರಿ ಜಯ

Leave a Comment