ಹೊಂಬುಜ ಶ್ರೀಗಳ ವಿದೇಶ ವಿಹಾರ ; ವಿಶ್ವ ಜೈನ ಧರ್ಮ ಸಮಾವೇಶ-2025

Written by Mahesha Hindlemane

Updated on:

ರಿಪ್ಪನ್‌ಪೇಟೆ ; ಅಮೇರಿಕಾ ದೇಶದ ಚಿಕಾಗೋನಲ್ಲಿ ಏರ್ಪಡಿಸಿರುವ ವಿಶ್ವ ಜೈನಧರ್ಮ ಸಮ್ಮೇಳನದಲ್ಲಿ ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲು ತೆರಳಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಜುಲೈ 3 ರಿಂದ 6ರವರೆಗೆ ನಡೆಯಲಿರುವ ಧರ್ಮಸಭೆಯಲ್ಲಿ ಜೈನ ಧರ್ಮ ಸಿದ್ಧಾಂತ, ವಿಶ್ವ ಧರ್ಮ ಸಮನ್ವಯತೆ, ವಿಶ್ವ ಶಾಂತಿ, ಸ್ವಚ್ಛ ಪರಿಸರ ರಕ್ಷಣೆ ಕುರಿತು ವಿಶೇಷ ಪ್ರವಚನ ನೀಡಲಿದ್ದಾರೆಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಥಮ ಬಾರಿಗೆ ಪೂಜ್ಯಸ್ವಸ್ತಿಶ್ರೀ ಸ್ವಾಮೀಜಿಯವರು ಚಿಕಾಗೋದಲ್ಲಿ ಜೈನ ಧರ್ಮದ ಸಾರಸತ್ವದ ಮಹತ್ವವನ್ನು ಸಾದರಪಡಿಸಲಿದ್ದಾರೆ.

Leave a Comment