ಜೈನ ಸಿದ್ಧಾಂತಗಳ ಅನುಕರಣೆಯಿಂದ ಸಾಮರಸ್ಯ ಜೀವನ ನಿರ್ವಹಣೆಗೆ ಆದ್ಯತೆ ; ಹೊಂಬುಜ ಶ್ರೀಗಳು

Written by malnadtimes.com

Published on:

RIPPONPETE ; ವಿಶ್ವದಲ್ಲಿ ಶಾಂತಿ-ಸಮಾನತೆ-ಸೌಹಾರ್ದತೆ ಕಾಪಾಡಬೇಕು. ಜೈನಾಚಾರ್ಯರು ಅನೇಕಾಂತವಾದ, ಸ್ಯಾದ್ವಾದ ಪ್ರಮೇಯಗಳನ್ನು ಲೌಕಿಕ ಜೀವನದಲ್ಲಿ ಅಳವಡಿಸಿಕೊಂಡಾಗ ಸ್ಥಳೀಯ, ರಾಷ್ಟ್ರೀಯ, ಅಂತರಾಷ್ಟೀಯ ಸಮಸ್ಯೆಗಳು ಪರಿಹರಿಸಲ್ಪಡುತ್ತದೆ. ಗೃಹಸ್ಥರು ಸಾಮರಸ್ಯದ ವಾತ್ಸಲ್ಯಮಯಿ ಜೀವನ ನಿರ್ವಹಣೆಗೆ ಜೈನಾಗಮ ಗ್ರಂಥಗಳು, ಮುನಿಶ್ರೀಗಳ ಆರ್ಯಿಕೆಯರ ಉಪದೇಶಗಳನ್ನು ಪುನರಾವಲೋಕನ ಮಾಡಬೇಕು ಎಂದು ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು.

WhatsApp Group Join Now
Telegram Group Join Now
Instagram Group Join Now

ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ನಡದ ಶ್ರೀಮಠದ ಪೀಠಾಧೀಶರ ಶ್ರೀ ಸಿಂಹಾಸನಕ್ಕೆ ಸಾಂಪ್ರದಾಯಿಕ ಪೂಜೆ ನೆರವೇರಿಸಿ, ಪೀಠಾಧೀಶರಾದ ಶ್ರೀಗಳವರು ಸಿಂಹಾಸನಾರೂಢರಾದ ಬಳಿಕ ಎಂಬ ಧರ್ಮ ಸಂದೇಶವನ್ನು ಅ.12ರ ಶನಿವಾರ ವಿಜಯದಶಮಿಯ ಸುದಿನದಂದು ಪ್ರಕಟಿಸಿದರು. ನಂತರ ಭಕ್ತರಿಗೆ ಶ್ರೀಫಲ ಮಂತ್ರಾಕ್ಷತೆ ನೀಡಿದರು.ಭಕ್ತರು ಶ್ರೀಗಳವರಿಗೆ ಪಾದಕಾಣಿಕೆಗಳನ್ನು ಅರ್ಪಿಸಿದರು.

ಶ್ರೀಕ್ಷೇತ್ರದ ಸೇವಾಕರ್ತ ಭಕ್ತರು, ಕಾರ್ಯನಿರ್ವಹಣಾಧಿಕಾರಿ, ಆಡಳಿತಾಧಿಕಾರಿಗಳು, ಊರ ಪರವೂರ ಭಕ್ತರು ಪೂಜೆ-ಉತ್ಸವಗಳಲ್ಲಿ ಪಾಲ್ಗೊಂಡಿದ್ದರು. ಪುರೋಹಿತರಾದ ಪದ್ಮರಾಜ ಇಂದ್ರ, ಸಹ ಪುರೋಹಿತರು ಪೂಜಾ ವಿಧಿಗಳನ್ನು ನೆರವೇರಿಸಿದರು. ಹತ್ತು ದಿನಗಳ ಪರ್ಯಂತ ಶರನ್ನವರಾತ್ರಿ, ವಿಜಯದಶಮಿ ಉತ್ಸವವು ಸಂಪನ್ನಗೊಂಡಂತಾಯಿತು.

ಉತ್ಸವಮೂರ್ತಿ ಶೋಭಾಯಾತ್ರೆ :

ಶ್ರೀ ಕ್ಷೇತ್ರದಿಂದ ಸುಮೂಹೂರ್ತದಲ್ಲಿ ಉತ್ಸವ ಮೂರ್ತಿಯನ್ನು ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಬನ್ನಿಮಂಟಪಕ್ಕೆ ನೃತ್ಯ, ವಾದ್ಯ, ಜಿನಭಜನೆ, ಜಯಘೋಷ, ಸಾಲಂಕೃತ ಧ್ವಜಗಳ ಸಹಿತ ಶೋಭಾಯಾತ್ರೆಯು ಗಜರಾಣಿ ಐಶ್ವರ್ಯ, ಅಶ್ವ ಮಾನವಿಯೊಂದಿಗೆ ಆಕರ್ಷಕವಾಗಿ ಸಾಗಿತ್ತು.

ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಪೂಜೆ, ಪ್ರಾರ್ಥನೆ ಸಮರ್ಪಿಸಿದರು.

“ಸರ್ವರಿಗೂ ಕ್ಷೇಮವನ್ನುಂಟು ಮಾಡುವ ಅಭೀಷ್ಠವರಪ್ರದಾಯಿನಿ ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿಯ ಕೃಪೆಯಿರಲಿ” ಎಂದು ಹರಸಿ ಬನ್ನಿ ವಿತರಿಸಿದರು.


ವಿಜಯದಶಮಿ ಧಾರ್ಮಿಕ ವಿಧಿ-ವಿಧಾನ ಸಂಪನ್ನ

RIPPONPETE ; ಪ್ರತಿಯೋರ್ವರೂ ಅಹಿಂಸಾಪಥ ಜೀವನ ನಿರ್ವಹಿಸುತ್ತಾ ವ್ರತನಿಯಮಗಳನ್ನು ಪರಿಪಾಲಿಸಿ ದೈನಂದಿನ ಗೃಹಸ್ಥ ದಿನಚರಿಯಲ್ಲಿ ಸುಲಲಿತವಾಗಿ ವ್ಯವಹರಿಸಲು ಶ್ರೀ ಪದ್ಮಾವತಿ ದೇವಿ ಸಕಲ ವಿಘ್ನಗಳನ್ನು ಪರಿಹರಿಸಿ ಸುಖ-ಶಾಂತಿ-ಆರೋಗ್ಯ ಕರುಣಿಸುವ ಕೃಪೆದೋರಲಿ” ಎಂದು ಶ್ರೀಗಳವರು ಪ್ರವಚನದಲ್ಲಿ ತಿಳಿಸುತ್ತಾ “ಲೋಕದಲ್ಲಿ ಉತ್ತಮ ಸಾಮರಸ್ಯ ಜೀವನ ಕಂಡುಕೊಳ್ಳೋಣ. ಕೃಷಿ, ವಾಣಿಜ್ಯ, ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ದೇಶದಲ್ಲಿ ಅಪೂರ್ವ ಪ್ರಗತಿಯಾಗಲಿ. ಗ್ರಾಮ, ರಾಜ್ಯ, ದೇಶ, ವಿಶ್ವ ಅಭಿವೃದ್ಧಿಯಾಗಲಿ. ವೈಯುಕ್ತಿಕ ಸಂಕಷ್ಟ ದೂರವಾಗಿ ಸಹಿಷ್ಣುತೆ, ಸಹಬಾಳ್ವೆಯ ಪರಿಸರ ಬೆಳೆಸೋಣ. ವಿಜಯದಶಮಿಯಂದು ಸಲ್ಲಿಸಿದ ಪ್ರಾರ್ಥನೆಯು ಫಲಿಸಲಿ ಎಂದು ಹೊಂಬುಜ ಮಠದ ಪೀಠಾಧೀಶರಾದ   ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಹೇಳಿದರು.

ರಿಪ್ಪನ್‌ಪೇಟೆ ಸಮೀಪದ ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಅಭೀಷ್ಠವರಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ ಸಾಂಗವಾಗಿ ನೆರವೇರಿದ ಬಳಿಕ ಅಶ್ವಯುಜ ಶುಕ್ಲ ದಶಮಿಯಂದು ‘ವಿಜಯದಶಮಿ’ ಪೂಜಾ ವಿಧಿಪೂರ್ವಕ ಸಂಪನ್ನಗೊಂಡಿತು ನಂತರ ಧರ್ಮಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಪ್ರಾತಃಕಾಲದಲ್ಲಿ ಕುಮದ್ವತಿ ತೀರ್ಥದಿಂದ ಅಗ್ರೋದಕವನ್ನು ಜಿನಾಲಯಗಳ ಸನ್ನಿಧಿಗೆ ವಾದ್ಯಗೋಷ್ಠಿಯೊಂದಿಗೆ ಕಲಶದಲ್ಲಿ ತರಲಾಯಿತು. ಶ್ರೀಮಠದ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ ಜಿನಾಲಯದಲ್ಲಿ ಮಹಾಸ್ವಾಮಿಗಳ ಸಾನಿಧ್ಯ, ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನೆರವೇರಿತು. ಆ ಬಳಿಕ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸಾನಿಧ್ಯದಲ್ಲಿ ಶೋಡೋಪಚಾರ ಪೂಜೆಯನ್ನು ಜಿನಾಗಮೋಕ್ತ ವಿಧಾನದಲ್ಲಿ ನಡೆಸಲಾಯಿತು.

ಸರ್ವಾಲಂಕಾರದಿಂದ ಶ್ರೀ ಪದ್ಮಾವತಿ ದೇವಿ ಇಷ್ಟಾರ್ಥಗಳನ್ನು ನೆರವೇರಿಸಿಕೊಡುವಂತೆ ಭಕ್ತವೃಂದದವರು ತ್ರಿಕರಣಪೂರ್ವಕ ಪ್ರಾರ್ಥನೆ ಸಲ್ಲಿಸಿದರು.

Leave a Comment