ಹೊಸನಗರ : ಇಡೀ ದೇಶಕ್ಕೆ ರೈತರು ಎಷ್ಟು ಮುಖ್ಯವೋ ಅವರ ಪರವಾಗಿ ಕೆಲಸ ಮಾಡುವ ಗ್ರಾಮ ಆಡಳಿತಾಧಿಕಾರಿಗಳು ಅಷ್ಟೆ ಮುಖ್ಯ. ಅವರ ಬೇಡಿಕೆ ಈಡೇರಿಸದಿದ್ದರೇ ರೈತರ ಹಾಗೂ ಸಾರ್ವಜನಿಕರ ಯಾವುದೇ ಕೆಲಸವೂ ಆಗದೇ ಸರ್ಕಾರ ದುಸ್ಥಿತಿಗೆ ತಲುಪುತ್ತದೆ ತಕ್ಷಣ ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆ ಸರ್ಕಾರ ಈಡೇರಿಸಬೇಕೆಂದು ಹೊಸನಗರ ತಾಲ್ಲೂಕು ರೈತ ಸಂಘದ ಅಧ್ಯಕ್ಷ ರವೀಂದ್ರ ಕರೆ ನೀಡಿದರು.
ಹೊಸನಗರ ತಾಲ್ಲೂಕು ಕಛೇರಿಯ ಮುಂಭಾಗ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ವಿವಿಧ ಬೇಡಿಕೆ ಈಡೇರಿಸಬೇಕೆಂದು ಮುಷ್ಕರ ನಡೆಸುತ್ತಿದ್ದು ಈ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದಿರುವುದು ದುರದುಷ್ಟಕರವಾಗಿ ಪರಿಣಮಿಸಿದೆ ಎಂದು ಗ್ರಾಮ ಆಡಳಿತಾಧಿಕಾರಿಗಳ ಬೆಂಬಲ ಸೂಚಿಸಿ ಇವರು ಧರಣಿಯಲ್ಲಿ ಬಾಗವಹಸಿ ಮಾತನಾಡಿದರು.
ಮುಂದಿನ ದಿನದಲ್ಲಿ ಉಪವಾಸ ಸತ್ಯಾಗ್ರಹ :
ಒಂದು ಸಣ್ಣ ಬೇಡಿಕೆಯನ್ನು ಸರ್ಕಾರ ಈಡೇರಿಸದೇ ಇರುವುದು ದುರದುಷ್ಟಕರವಾಗಿದ್ದು ಒಂದೆರಡು ದಿನದಲ್ಲಿ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನದಲ್ಲಿ ಇಡೀ ರಾಜ್ಯದಲ್ಲಿಯೇ ಆಡಳಿತಾಧಿಕಾರಿಗಳು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದು ಅನಿವಾರ್ಯವಾಗಿದ್ದು ತಕ್ಷಣ ರಾಜ್ಯ ಸರ್ಕಾರ ಸ್ಪಂದಿಸಿ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಹೊಸನಗರ ತಾಲ್ಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಗೌರವಾಧ್ಯಕ್ಷರಾದ ಜಿ.ಎಸ್. ಯೋಗೇಶ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಮುಷ್ಕರದ ನೇತೃತ್ವವನ್ನು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷರಾದ ನವೀನ್‌ಕುಮಾರ್ ವಹಿಸಿಕೊಂಡಿದ್ದು, ಈ ಮುಷ್ಕರದಲ್ಲಿ ಗ್ರಾಮ ಆಡಳಿತಾಧಿಕಾರಿಗಳಾದ ಜಿಲ್ಲಾ ಪ್ರದಾಬನ ಕಾರ್ಯದರ್ಶಿ ಮಂಜುನಾಥ್, ಬಸವರಾಜ್, ಪ್ರಕಾಶ್, ದೀಪು, ಶೋಭಾ, ಆರ್.ಪಿ ಸುರೇಶ್, ಜಾಕೀರ್ ಹುಸೇನ್, ಇಂದಿರಾ ಎಸ್, ರೇಣುಕಯ್ಯ, ಸುನೀಲ್ ದೇವಾಡಿಗ, ಗೌರವಾಧ್ಯಕ ಯೋಗೇಶ್, ಕಾರ್ಯದರ್ಶಿ ಸಿದ್ದಪ್ಪ, ಸಿದ್ದಪ್ಪ ಚೂರೇರ, ಮಂಜುನಾಥ್ ಎಂ, ಫೈಗಂಬರ್, ಅಂಬಿಕಾ ಕೆ, ಲೋಹಿತ್ ಎಂ, ಶ್ರೀವಲ್ಲಿ ಬಿ.ಎಸ್, ಸಣ್ಣ ನೀಲಜ್ಜರ, ಅನುಷ, ಭೂಮಿಕ ಹಿರೇಮಠದ್, ರಕ್ಷಿತಾ ಇನ್ನೂ ಮುಂತಾದವರು ಭಾಗವಹಿಸಿದ್ದರು.