ಹೊಸನಗರ ; ಏಪ್ರಿಲ್ 22 ರಂದು ಜಮ್ಮು-ಕಾಶ್ಮೀರದಲ್ಲಿ ಉಗ್ರದ ಅಟ್ಟಹಾಸ ಮೆರೆದು ಪಹಲ್ ಗಾವ್ ನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ 30ಕ್ಕೂ ಹೆಚ್ಚು ನಾಗರಿಕ ಹತ್ಯೆ ಮಾಡಿದ ಘೋರ ಕೃತ್ಯ ಎಲ್ಲರ ಮನದಲ್ಲಿ ನೆಲೆಸಿದೆ. ಭಾರತ ಇದಕೆ ತಕ್ಕ ಉತ್ತರ ನೀಡಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ಉಗ್ರರ ನೆಲೆಗಳನ್ನು ಚಿದ್ರ ಚಿದ್ರಗೊಳಿಸಿ ತಕ್ಕ ದಿಟ್ಟ ಉತ್ತರ ನೀಡಿದೆ ನಮ್ಮ ಹೆಮ್ಮೆಯ ಸೈನಿಕರು ಮತ್ತು ನಮ್ಮ ಕೇಂದ್ರ ಸರ್ಕಾರ ಸಿಂಧೂರ ವಿಶೇಷ.
21ನೇ ವರ್ಷದ ಸಂಭ್ರಮದಲ್ಲಿರುವ ಇವರ ‘ವಿನಾಯಕ ಲೋಕ’ದಲ್ಲಿ ಈ ವರ್ಷ ಅನೇಕ ಸಿಂಧೂರಕ್ಕೆ ಸಂಬಂಧಪಟ್ಟ ವಿಶೇಷ ಘೋಷ ವಾಕ್ಯಗಳಲ್ಲಿದೆ. ಭಾರತ್ ಮಾತಾ ಕಿ ಜೈ, ಭಾರತದ ಸುಪುತ್ರರು ನಾವು, ದೇಶ ವಿದ್ಯೆ ಗೆದ್ದ ಸೇನೆ, ಸಿಂಧೂರ ಪ್ರಸಾದ ಡ್ರೋನ್ ಯುದ್ಧ, ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಕೆಚ್ಚೆದೆ ವೀರ ನೀನಾಗು, ನಿನ್ನ ವಿಜಯಕ್ಕೆ ಸಿಂಧೂರ ನಾನಾಗುವೆ ಎನ್ನುವ ಸಂದೇಶ ಮಾಡಿದ್ದಾರೆ.
ಪ್ರತಿ ವರ್ಷ ಗಣಪತಿಗೆ ಒಂದೊಂದು ವಿಶೇಷ ಅಲಂಕಾರವಿರುತ್ತದೆ. ಪರಿಸರ, ಪ್ರವಾಹ, ದುರಂತ ಮತ್ತು ಪ್ರಕೃತಿಗೊಳಿಸುವ ಕಾಳಜಿ, ಅಮ್ಮನ ಮಮತೆ, ಕನ್ನಡ ಉಳಿಸಿ ಬೆಳೆಸಿ, 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ವಿಶೇಷ ಗಣಪತಿಯನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಸನಗರದ ನೆಹರು ರಸ್ತೆಯಲ್ಲಿರುವ ಕೆ.ಎಸ್ ವಿನಾಯಕ ಅವರ ಮನೆಯಲ್ಲಿ ವಿನಾಯಕ ಲೋಕದಲ್ಲಿ ಸಾವಿರಾರು ಗಣಪತಿಗಳನ್ನು ವೀಕ್ಷಿಸಬಹುದು. ಸಿಂಧೂರ ಗಣೇಶ ಮಗ ಕೆ ವಿ ದೀಪಕ್ ಬಾಲ್ಯದಲ್ಲಿ ಸಂಗ್ರಹಿಸಿದ ಯುದ್ಧ ಸಾಮಗ್ರಿಗಳು ಹಾಗೂ ಹೆಲಿಕ್ಯಾಪ್ಟರ್, ಲ್ಯಾಪ್ಟಾಪ್ ಗಣೇಶ, ಬೈನಾಕುಲರ್ ವೀಕ್ಷಣೆ ಗಣೇಶ, ಯುದ್ಧಕ್ಕೆ ಸಿದ್ಧಗೊಂಡ ಗಣೇಶ, ಕ್ರಿಕೆಟ್ ಗಣೇಶ, ಭಜನೆ ಗಣೇಶ 150 ವರ್ಷಗಳ ಹಿಂದಿನ ಮಣಿ ಗಣೇಶ, ಗಣೇಶ ಕ್ರಿಕೆಟ್ ಟೀಮ್, ದಶಾವತಾರದಲ್ಲಿ ಗಣೇಶ ಕಾಫಿ ಗಣೇಶ, ಅಡಿಕೆ ಗಣೇಶ, ಕಾಫಿ ಬೇರಿನಲ್ಲಿ ಗಣೇಶ, ಬಾಟಲಿಯಲ್ಲಿ ಗಣೇಶ , ಬ್ರಹ್ಮಾಸ್ತ್ರ, ವಜ್ರಾಯುದ್ಧ, ಶಿವಸ್ತ್ರ ಎಲ್ಲವನ್ನು ಇಲ್ಲಿ ನೋಡಬಹುದು.
15 ದಿನ ಹಬ್ಬವನ್ನು ಆಚರಿಸುವ ವಿನಾಯಕ ಮತ್ತು ಗೀತಾ ದಂಪತಿಗಳು ಬಂದವರನ್ನು ಆಹ್ವಾನಿಸಿ ಪ್ರತಿ ಗಣಪತಿಗಳನ್ನು ಪರಿಚಯಿಸಿ ವಿವರಗಳನ್ನು ತಿಳಿಸುತ್ತಾರೆ.
ಇವರ ವಿನಾಯಕರು ಲೋಕವನ್ನು ನೋಡ ಬಯಸುವರು ಕೆ.ಎಸ್ ವಿನಾಯಕ, ಹೊಸನಗರ ಮೊ. 9900902347 ಸಂಪರ್ಕಿಸಬಹುದು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.