ರಿಪ್ಪನ್‌ಪೇಟೆ ; ಸಾಲಕ್ಕೆ ಬಡ್ಡಿ ಕಟ್ಟುವಂತೆ ಕಿರುಕುಳ ನೀಡುತ್ತಿದ್ದ ಹಾಗೂ ಜೀವಬೆದರಿಕೆ ಒಡ್ಡುತ್ತಿದ್ದ ಮಹಿಳೆಯನ್ನು ರಿಪ್ಪನ್‌ಪೇಟೆ ಠಾಣೆ ಪಿಎಸ್‌ಐ ಎಸ್.ಪಿ.ಪ್ರವೀಣ್ ನೇತೃತ್ವದಲ್ಲಿ ಬಂಧಿಸಿದ್ದಾರೆ.
ಚಿಕ್ಕಜೇನಿ ಗ್ರಾಮದ ಕು. ಪೂಜಶ್ರೀ ಎಂಬುವಳು ಅದೇ ಊರಿನ ಶೃತಿ ಎಂಬುವರ ಬಳಿ 50 ಸಾವಿರ ರೂ. ಸಾಲ ಪಡೆದಿದ್ದು ಈಗ ಮೀಟರ್ ಬಡ್ಡಿ ಮೂಲಕ ಸಾಲ ತಿರುವಳಿ ಮಾಡುವಂತೆ ಒತ್ತಡ ಹಾಕಿ ಹಣ ನೀಡದಿದ್ದರೆ ಕೊಲೆ ಮಾಡುವ ಬೆದರಿಕೆ ಹಾಕಿರುವ ಬೆನ್ನಲ್ಲೇ ರಿಪ್ಪನ್‌ಪೇಟೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರವೀಣ್ ಕುಮಾರ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡಸುವ ಮೂಲಕ ಅನಧಿಕೃತವಾಗಿ ಬಡ್ಡಿ ದಂಧೆ ವಿರುದ್ದ ಕೇಸ್ ದಾಖಲಿ ಆರೋಪಿ ಶೃತಿಯನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ಮ.ಟೈ. ನಲ್ಲಿ ‘ಮೀಟರ್ ಬಡ್ಡಿ ಅಡ್ಡೆಯ ಕೇಂದ್ರ ಸ್ಥಾನವಾದ ರಿಪ್ಪನ್‌ಪೇಟೆಗೆ ಸರ್ಕಾರದ ಸುಗ್ರೀವಾಜ್ಞೆ ಅನ್ವಯಿಸುವುದೇ?’ ಎಂಬ ಶೀರ್ಷಿಕೆ ಅಡಿ ಪ್ರಕಟಗೊಂಡ ವರದಿಯ ಫಲಶೃತಿಯಿಂದಾಗಿ ಇಲ್ಲಿನ ಪೊಲೀಸ್ ಇಲಾಖೆ ಇಂದು ಬೆಳಗ್ಗೆ ಮೀಟರ್ ಬಡ್ಡಿ ದಂಧೆದಾರರ ಮನೆ ಮೇಲೆ ದಾಳಿ ನಡೆಸಿ ಪ್ರಕರಣವನ್ನು ಭೇದಿಸುವ ಮೂಲಕ ಅನಧಿಕೃತ ಲೇವಾದೇವಿದಾರರಿಗೆ ಚುರುಕು ಮುಟ್ಟಿಸಿದ್ದಾರೆ.
ಮೀಟರ್ ಬಡ್ಡಿ ದಂಧೆ ಇಂದು ನಿನ್ನೆಯದಲ್ಲ, ಇಂದು ಅವ್ಯಾಹತವಾಗಿ ಹಲವಾರು ವರ್ಷಗಳಿಂದ ಪ್ರತಿ ಹಳ್ಳಿ-ಹಳ್ಳಿಯಲ್ಲಿ ಕದ್ದುಮುಚ್ಚಿ ನಡೆಯುತ್ತಿದ್ದು ಈಗ ರಾಜಾರೋಷವಾಗಿ ಎಗ್ಗಿಲ್ಲದೆ ಯಾರ ಭಯವಿಲ್ಲದೆ ಸಾಗಿದೆ.